Cinisuddi Fresh Cini News 

ಚಿತ್ರೀಕರಣ ಪೂರ್ಣಗೊಳಿಸಿದ “ನೈಟ್ಮೇರ್”

ಸೌನವಿ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ನೈಟ್ಮೇರ್ “ನೀನು ಮಾಯೆಯೊಳಗೊ ಮಾಯೆ ನಿನ್ನೊಳಗೋ ” ಚಿತ್ರ ‌ಚಿತ್ರೀಕರಣ ಪೂರ್ಣಗೊಳಿಸಿದೆ.

ಚಿತ್ರಕ್ಕೆ ನವೀನ್ ನಾಯಕ ಮತ್ತು ಕಿತ್ತಾನೆ ಗೋಪಿ ಜಂಟಿಯಾಗಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ಜನವರಿಯಿಂದ ಬೆಂಗಳೂರು ಸುತ್ತಮುತ್ತಲೂ ನಡೆದಿದ್ದು ಇತ್ತೀಚೆಗೆ ಶೂಟಿಂಗ್ ಮುಗಿದಿದೆ.

ಎಂ.ಟೆಕ್ ಪದವಿಧರ ಕೆ.ಆರ್.ಸೌಜನ್ಯ ಚಿತ್ರ ನಿರ್ಮಿಸಿದ್ದು ನವೀನ್ ನಾಯಕ ಚಿತ್ರಕ್ಕೆ ನಾಯಕ .ನೈಟ್ಮೇರ್ ಎಂಬ ಕಥೆ ಸಸ್ಪೆನ್ಸ್ ಕಾಮಿಡಿ ಥ್ರಿಲ್ಲರ್ ಆಧರಿತ ಕಥೆ ಆಗಿದ್ದು ಕಥೆಯೇ ಚಿತ್ರದ ನಾಯಕ ಆಗಿದೆ.

ಕನ್ನಡ ಪ್ರೇಕ್ಷಕರು ಕಂಟೆಂಟ್ ಚಲನಚಿತ್ರಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದು 2020 ರಲ್ಲಿ ಬಿಡುಗಡೆ ಆಗಲಿರುವ ಚಲನಚಿತ್ರಗಳಲ್ಲಿ ಟಾಪ್ ಸ್ಥಾನ ಪಡೆಯುವ ಉದ್ದೇಶ ಹೊಂದಿದ್ದಾರೆ. ಕಿತ್ತಾನೆ ಗೋಪಿ ಜಂಟಿ ನಿರ್ದೇಶನ ಮಾಡುತ್ತಿದ್ದಾರೆ.

ಹರಿಕೃಷ್ಣ ಕ್ಯಾಮರಾಮನ್, ಪವನ್ ಗೌಡ ಸಂಕಲನ, ಸಂಗೀತ ನಿರ್ದೇಶಕರಾಗಿ ಸುಬ್ರಮಣ್ಯ ಆಚಾರ್ಯ ಮಾಡುತ್ತಿದ್ದಾರೆ. ತಾರಾಗಣದಲ್ಲಿ ನಟ ನವೀನ್ ನಾಯಕ, ಅಂಚಲ್ ರಾಜ್, ಕಾಮೆಡಿ ಕಿಲಾಡಿಗಳು ಅಪ್ಪಣ್ಣ ರಾಮದುರ್ಗ, ಕಿರಿಕ್ ಪಾರ್ಟಿ ರಾಘು ರಾಮನ ಕೊಪ್ಪ, ಯಶೋಧರ, ಚೇತನ್, ಮಹೇಶ್, ಅಕ್ಷಯ್ ಮತ್ತಿತರರು ನಟನೆ ಮಾಡಿದ್ದಾರೆ.

Share This With Your Friends

Related posts