Cini Reviews Cinisuddi Fresh Cini News 

ಈ ವಾರ ಬಿಡುಗಡೆಯಾದ “ನೈಟ್ ಔಟ್” ಸಿನಿಮಾ ಹೇಗಿದೆ ( ಚಿತ್ರ ವಿಮರ್ಶೆ -ರೇಟಿಂಗ್ : 3/5)

ಚಿತ್ರ : ನೈಟ್‌ ಔಟ್‌
ನಿರ್ದೇಶಕ : ರಾಕೇಶ್ ಅಡಿಗ
ನಿರ್ಮಾಪಕ : ನವೀನ್ ಕೃಷ್ಣ
ಸಂಗೀತ : ಸಮೀರ್ ಕುಲಕರ್ಣಿ
ಛಾಯಾಗ್ರಾಹಕ : ಅರುಣ್ ಅಲೆಕ್ಸಾಂಡರ್
ತಾರಾಗಣದಲ್ಲಿ : ಭರತ್, ಶೃತಿ ಗೊರಾಡಿಯಾ, ಅಕ್ಷಯ ಪವಾರ್ , ಕಡ್ಡಿಪುಡಿ ಚಂದ್ರು ಹಾಗೂ ಮುಂತಾದವರು…
ರೇಟಿಂಗ್ : 3/5

ಸಿನಿ ಪ್ರಿಯರಿಗಾಗಿ ಹೊಸ ರೀತಿಯ ಏರಿಳಿತಗಳ ದೃಶ್ಯಗಳನ್ನು ತನ್ನ ಪ್ರಥಮ ಪ್ರಯತ್ನದ “ನೈಟ್ ಔಟ್” ಚಿತ್ರದ ಮೂಲಕ ನೀಡಲು ಮುಂದಾಗಿದ್ದಾರೆ ನಿರ್ದೇಶಕ ರಾಕೇಶ್ ಅಡಿಗ. ಈ ವಾರ ಬಿಡುಗಡೆಗೊಂಡಿರುವ ನೈಟ್ ಔಟ್ ಚಿತ್ರ ಸಸ್ಪೆನ್ಸ್ , ಥ್ರಿಲ್ಲರ್ , ಲವ್, ಕಾಮಿಡಿ ಜೊತೆಗೆ ಕುತೂಹಲ ಮೂಡಿಸುವಂತ ಪಯಣ ವಾಗಿದೆ.

ಈ ಚಿತ್ರದ ಕಥಾಹಂದರ ಆರಂಭವಾಗುವುದೇ ವ್ಯಕ್ತಿಯೊಬ್ಬ ಭಯಬಿದ್ದು ಓಡುವುದರೊಂದಿಗೆ , ಎದುರಿಗೆ ಸಿಕ್ಕವರಿಗೆ ಡಿಕ್ಕಿ ಹೊಡೆಯುತ್ತ ಓಡಾಡುವ ಈ ವ್ಯಕ್ತಿ ಯಾರು… ಏತಕ್ಕಾಗಿ ಹೀಗೆ ಮಾಡುತ್ತಿದ್ದಾನೆ… ಎನ್ನುವಷ್ಟರಲ್ಲಿ ಆರು ಗಂಟೆಗಳಷ್ಟು ಹಿಂದಕ್ಕೆ ಕಥೆ ಸಾಗುತ್ತದೆ. ಇಲ್ಲಿಂದ ಫ್ಲಾಶ್ ಬ್ಯಾಕ್ ಯಾನ ಶುರುವಾಗುತ್ತದೆ.

ಮಧ್ಯಮ ವರ್ಗದ ಕುಟುಂಬದ ಕಥಾಹಂದರದಲ್ಲಿ ಒಂದಷ್ಟು ಗೆಳೆಯರೊಂದಿಗೆ ಗೆಳೆಯರೊಂದಿಗೆ ನಾಯಕ (ಭರತ್) ತರ್ಲೆ , ತುಂಟತನ , ಸುಳ್ಳು ಹೇಳಿಕೊಂಡು ಖದರ್ ತೋರಿಸುತ್ತಾ ತನ್ನ ಬದುಕಿಗಾಗಿ ಆಟೊ ಓಡಿಸಿಕೊಂಡು ಬದುಕು ನಡೆಸುತ್ತಿರುತ್ತಾನೆ.

ಇವನಿಗೊಬ್ಬ ಆಪ್ತ ಗೆಳೆಯ (ಅಕ್ಷಯ್ ಪವಾರ್) ತನ್ನೆಲ್ಲಾ ಚಟುವಟಿಕೆಗಳನ್ನು ಅವನೊಂದಿಗೆ ಹಂಚಿಕೊಳ್ಳುವ ನಾಯಕ , ಅವನ ದಡ್ಡತನವನ್ನು ತನಗೆ ಹೇಗೆ ಬೇಕೋ ಹಾಗೆ ಬಳಿಸಿಕೊಳ್ಳುತ್ತಾ ಇರುವಾಗ ಗೆಳೆಯನ ಕಾಲೇಜಿನಲ್ಲಿ ಓದುವ ಮುದ್ದು ಮುಖದ ಚೆಲುವೆ ನಾಯಕಿ (ಶೃತಿ ಗೊರಾಡಿಯಾ)ಗೆ ಮನ ಸೋಲುತ್ತಾನೆ.

ತುಂಬಾ ಸರಳ, ನೇರವಾದ ಹುಡುಗಿ ತಾನಾಯಿತು ತನ್ನ ವಿದ್ಯಾಭ್ಯಾಸ ಎಂಬಂತೆ ಇರುವ ಹುಡುಗಿಯ ಹಿಂದೆ ಬೀಳುವ ನಾಯಕ ಆಕೆಯ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸುತ್ತಾನೆ.

ತದನಂತರ ತನ್ನ ಆಪ್ತ ಗೆಳೆಯನನ್ನು ತಮ್ಮ ಎಂದು ಹೇಳಿ , ನಾನೇ ಜವಾಬ್ದಾರಿಯನ್ನು ಯಂತೆ ಓದಿಸುತ್ತಿರುವೆ , ಕೆಲಸ ಮಾಡುತ್ತಾ ಸಂಜೆ ಕಾಲೇಜಿಗೆ ಹೋಗಿ ಉತ್ತಮ ಭವಿಷ್ಯ ಹಾಗೂ ಬದುಕನ್ನ ನಡೆಸಬೇಕೆಂಬ ಆಸೆ ಇದೆ ಎನ್ನುವ ನಾಯಕನ ಮಾತಿಗೆ ಮನಸೋತು ನಾಯಕಿ ಅವನನ್ನು ಪ್ರೀತಿಸಲು ಮುಂದಾಗುತ್ತಾಳೆ. ಇದರ ನಡುವೆ ಒಂದಷ್ಟು ತುಂಟುತನ , ಪ್ರೀತಿ, ಪ್ರಣಯದ ಹಾದಿಯಲ್ಲಿ ಹಾಸ್ಯ ಚಟಾಕಿಗಳು ಗೋಚರಿಸುತ್ತದೆ.

ಚಿತ್ರದ ಮೊದಲ ಭಾಗದಲ್ಲಿ ಹೇರಳವಾದ ಫ್ಲಾಶ್ ಬ್ಯಾಕ್ ಗಳ ಕಥೆಯೊಂದಿಗೆ ಸಾಗುವ ಪಯಣ ನೀರಸವಾಗಿದ್ದರೂ ಇಂಟರ್ವಲ್ ಭಾಗಕ್ಕೆ ಒಂದು ಟ್ವಿಸ್ಟ್ ಹೇಳುತ್ತಾರೆ. ಇನ್ನು ದ್ವಿತೀಯ ಭಾಗದಲ್ಲಿ ಫ್ಲಾಶ್ ಬ್ಯಾಕ್ ಬಂದರೂ ಸಹ ಕಥೆಯಲ್ಲಿ ಹಿಡಿತವನ್ನು ಮುಂದುವರಿಸುತ್ತದೆ.

ಪ್ರೀತಿಗೆ ಬಿದ್ದವರ ತೊಳಲಾಟ ಏನು ಅವರ ಮನಸ್ಥಿತಿ ಯಾವ ರೀತಿ ಇರುತ್ತದೆ. ಪ್ರೀತಿಯೇ ಎಲ್ಲಾ ಎಂದು ನಂಬುವ ನಾಯಕನ ಬದುಕಿನಲ್ಲಿ ಎದುರಾಗುವ ಘಟನೆಗಳು ಏನು… ಇಷ್ಟಪಟ್ಟ ಗೆಳತಿ ಸಿಗುತ್ತಾಳಾ… ಅಲ್ಲದೆ ಬೇರೆ ಏನಿಲ್ಲ ತಿರುವುಗಳು ಗಮನ ಸೆಳೆಯುತ್ತದೆ ಎಂಬುವುದನ್ನು ತಿಳಿಯ ಬೇಕಾದರೆ ನೀವು “ನೈಟ್ ಔಟ್” ಚಿತ್ರವನ್ನು ತೆರೆಯ ಮೇಲೆ ನೋಡಬೇಕು.

ಸುಮಾರು ಚಿತ್ರಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದ ರಾಕೇಶ್ ಅಡಿಗ ತನ್ನ ಪ್ರಥಮ ನಿರ್ದೇಶನದ ಚಿತ್ರದಲ್ಲಿ ವಿಭಿನ್ನ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಸ್ಪೆನ್ಸ್ , ಥ್ರಿಲ್ಲರ್ ಕಥಾ ಹಂದರದಲ್ಲಿ ಪ್ರೀತಿಯ ಹೂರಣವನ್ನು ಮಿಶ್ರಣ ಮಾಡಿ ಹಾಸ್ಯ ದೊಂದಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ.

ಮಧ್ಯಮ ವರ್ಗದ ಹುಡುಗರ ಆಸೆ, ಆಕಾಂಕ್ಷೆ , ಗತ್ತು , ರೌಡಿಸಂ ಅಂಶಗಳೊಂದಿಗೆ ಮೈ ಜುಮ್ ಎನಿಸುವಂತಹ ಭಯಾನಕ ವಿಷಯವನ್ನು ತೆರೆದಿಡುವ ಪ್ರಯತ್ನವನ್ನು ಕಾಣಬಹುದು. ಚಿತ್ರಕಥೆಯಲ್ಲಿ ಮತ್ತುಷ್ಟು ಬಿಗಿತ ಇದ್ದಿದ್ದರೆ ಚಿತ್ರಕ್ಕ ಇನ್ನೂ ಹೆಚ್ಚು ಅನುಕೂಲವಾಗುತ್ತಿತ್ತು.

ಇನ್ನು ನಾಯಕನಾಗಿ ಅಭಿನಯಿಸಿರುವ ಭರತ್ ಕೂಡ ಗಮನಾರ್ಹವಾಗಿ ಅಭಿನಯಿಸಿದ್ದಾರೆ. ನಾಯಕಿಯ ಪಾತ್ರ ನಿರ್ವಹಿಸಿರುವ ಶೃತಿ ಗೊರಾಡಿಯಾ ಕೂಡ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಮುದ್ದಾಗಿ ಕಾಣಿಸುವ ಈ ಬೆಡಗಿ ನೈಜವಾಗಿ ನಟಿಸಿದ್ದಾರೆ.

ಇನ್ನು ಗೆಳೆಯನ ಪಾತ್ರದಲ್ಲಿ ನಟಿಸಿರುವ ಅಕ್ಷಯ ಪವರ್ ತನ್ನ ನಟನ ಸಾಮರ್ಥ್ಯವನ್ನು ತೋರಿಸಿದ್ದಾರೆ. ತನ್ನ ಡೈಲಾಗ್ ಹಾಗೂ ಹಾವಭಾವಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಉಳಿದಂತೆ ಬರುವ ಪಾತ್ರದಾರಿಗಳು ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಸಮೀರ್ ಕುಲಕರ್ಣಿ ಸಂಗೀತ , ಹಿನ್ನೆಲೆ ಸಂಗೀತವನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಬಹುತೇಕ ರಾತ್ರಿಯಲ್ಲಿ ಹೆಚ್ಚು ಚಿತ್ರೀಕರಣವಾಗಿದ್ದು ,
ಅರುಣ್ ಅಲೆಕ್ಸಾಂಡರ್ ತಮ್ಮ ಕ್ಯಾಮೆರಾ ಕೈಚಳಕವನ್ನು ತೋರಿಸಿದ್ದಾರೆ.

ಒಟ್ಟಾರೆ ಒಬ್ಬ ಆಟೋ ಡ್ರೈವರ್ ನ ಬದುಕಿನಲ್ಲಿ ಪ್ರೀತಿಯ ಅಲೆ ಬೀಸಿದಾಗ ಏನಿಲ್ಲಾ ಎದುರಾಗುತ್ತದೆ ಎಂಬುವುದನ್ನು ವಿನೂತನ ರೀತಿಯ ನಿರೂಪಣೆ ಶೈಲಿಯಲ್ಲಿ ತೋರಿಸಿದ್ದಾರೆ. ಸಸ್ಪೆನ್ಸ್ ,ಥ್ರಿಲ್ಲರ್ ಜೊತೆಗೆ ಸೂಕ್ಷ್ಮ ವಿಷಯವನ್ನು ಒಳಗೊಂಡಿರುವ ಈ “ನೈಟ್ ಔಟ್” ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.

Share This With Your Friends

Related posts