ಡಿಜಿಟಲ್ ಲೋಕದಲ್ಲಿ “NFT” ಹೊಸ ಕ್ರಾಂತಿಗೆ ಸೌತ್ ಸ್ಟಾರ್ ಎಂಟ್ರಿ .
ಸಿನಿಮಾ ಮಾರುಕಟ್ಟೆ ಜಗತ್ತು ಈಗ ದೊಡ್ಡ ಮಟ್ಟದ ಅಲೆಯನ್ನು ಎಬ್ಬಿಸಿದ್ದು, ಡಿಜಿಟಲ್ ಯುಗದಲ್ಲಿ ಬರುತ್ತಿರುವ ಬಹುತೇಕ ಚಿತ್ರಗಳು ಪ್ಯಾನ್ ಇಂಡಿಯಾ ಮೂಲಕ ದೊಡ್ಡ ಸದ್ದನ್ನೇ ಮಾಡುತ್ತಿದೆ. ಈಗಾಗಲೇ ಸ್ಟಾರ್ ನಟರುಗಳು ಒಬ್ಬೊಬ್ಬರಾಗಿಯೇ NFT ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಸನ್ನಿ ಲಿಯೋನ್ ಸೇರಿದಂತೆ ಹಲವರು ಗುರುತಿಸಿ ಕೊಂಡಿದ್ದಾರೆ.
ಇದೀಗ ಮತ್ತೊಬ್ಬ ಸೌತ್ ಇಂಡಸ್ಟ್ರೀಯ ಸೂಪರ್ ಸ್ಟಾರ್ ಒಬ್ರು NFT ವಲಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿ ಬಹಳಷ್ಟು ಕುತೂಹಲವನ್ನೂ ಮೂಡಿಸಿದೆ. ಭಾರತೀಯ ಚಿತ್ರರಂಗದ ಬಿಗೆಸ್ಟ್ ಸಿನಿಮಾವೊಂದು ಶೀರ್ಘದಲ್ಲಿಯೇ NFT ಮಾರುಕಟ್ಟೆಗೆ ಎಂಟ್ರಿ ಕೊಡಲಿದೆಯಂತೆ. ಮಾರ್ವೆಲ್ಸ್ ಸಿನಿಮಾ ಬಳಿಕ ಭಾರತೀಯ ಸಿನಿಮಾಗಳು NFT ಮಾರುಕಟ್ಟೆಯಲ್ಲಿ ರಾರಾಜಿಸಲು ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ನಡಿ ಡಿಜಿಟಲ್ ಲೋಕದಲ್ಲಿ NFT ಹೊಸ ಕ್ರಾಂತಿಗೆ ನಾಂದಿ ಹಾಡಲು ಸಜ್ಜಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ವೊಬ್ಬರು ತಮ್ಮದೇ ಸ್ವತಃ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ NFT ವಲಯದಲ್ಲಿ ಭಾರತೀಯ ಚಿತ್ರರಂಗ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ. ಈಗಾಗಲೇ ಡಿಜಿಟಲ್ ಯುಗದಲ್ಲಿ ಹಲವಾರು ಸ್ಟಾರ್ ನಟರ ಸಿನಿಮಾಗಳು ಕೈಜೋಡಿಸಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಆ ಸಾಲಿನಲ್ಲಿ NFT ಮುಂಚೂಣಿಯಲ್ಲಿ ನಿಲ್ಲುವ ಎಲ್ಲಾ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ. ಹೊಸ ಅಲೆಯ ಡಿಜಿಟಲ್ ಮಾರುಕಟ್ಟೆ ಬರುತ್ತಿರುವುದು ಚಿತ್ರೋದ್ಯಮಕ್ಕೆ ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು.