Cinisuddi Fresh Cini News Tv / Serial 

ನನ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಪುಟಾಣಿ ಸಮನ್ವಿ(6) ದುರ್ಮರಣ

ಅಯ್ಯೋ… ಇದೆಂಥ ಘೋರ ವಿಧಿಯೇ. ಈ ಪುಟಾಣಿಯ ಸಾವು ನ್ಯಾಯವೇ. ಖ್ಯಾತ ಹರಿಕಥೆ ದಾಸರು ಗುರುರಾಜ್ ನಾಯ್ಡುರವರ ಮುಮ್ಮೊಗಳು , ವಾಹಿನಿಯ ನಿರೂಪಕಿ , ಕಿರುತೆರೆ ಕಲಾವಿದೆ ಅಮೃತಾ ನಾಯ್ಡು ಮಗಳು ಸಮನ್ವಿ(6) ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.

ಟಿಪ್ಪರ್ ಲಾರಿ ಹಾಗೂ ಟಾಟಾ ಸುಮೋ ನಡುವೆ ಸಿಲುಕಿ ಈ ಅಪಘಾತ ಸಂಭವಿಸಿದೆಯoತೆ. ಕನ್ನಡ ಖಾಸಗಿ ವಾಹಿನಿಯ ನನ್ನಮ್ಮ  ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ(6) ಅಸುನೀಗಿದ್ದಾಳೆ.
ಬೆಂಗಳೂರಿನ ಕೋಣನಕುಂಟೆ ಮಾರ್ಗವಾಗಿ ವಾಜರಹಳ್ಳಿ ಕಡೆಗೆ ತಾಯಿಯೊಂದಿಗೆ ಸ್ಕೂಟಿ ವಾಹನದಲ್ಲಿ ಪುಟಾಣಿ ಸಮನ್ವಿ ತೆರಳುತ್ತಿದ್ದಾಗ ಟಿಪ್ಪರ್ ಲಾರಿ ಹಾಗೂ ಟಾಟಾ ಸುಮೋ ಮಧ್ಯೆ ಸಿಲುಕಿ ಈ ಅಪಘಾತ ಸಂಭವಿಸಿದ್ದು, ತಾಯಿ ಮಗಳು ಇಬ್ಬರೂ ಕೆಳಗೆ ಬಿದ್ದಿದ್ದಾರೆ. ತಾಯಿಗೆ ಬಲವಾದ ಪೆಟ್ಟು ಬಿದ್ದಿದೆ. ಮಗುವಿನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮಗು ಮೃತಪಟ್ಟಿರಬಹುದು ಎನ್ನಲಾಗಿದೆ. ಈ ದುರ್ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಸ್ಥಳವನ್ನು ಪರಿಶೀಲಿಸಿದ್ದಾರೆ. ಪೊಲೀಸರು ಬಾಲಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು ಕುಮಾರಸ್ವಾಮಿ ಲೇಔಟ್ ನ ಸಂಚಾರಿ ಪೊಲೀಸರು ಈ ಪ್ರಕರಣವನ್ನು ದಾಖಲು ಮಾಡಿಕೊಂಡು ದುರ್ಘಟನೆಗೆ ಕಾರಣ ಯಾರೆಂಬುದನ್ನು ತಿಳಿಯಲು ಟಿಪ್ಪರ್ ಚಾಲಕ ಹಾಗೂ ಟಾಟಾ ಸುಮೋ ಡ್ರೈವರನ್ನು ವಶಕ್ಕೆ ಪಡೆದಿದ್ದಾರoತೆ. ಈ ದುರ್ಘಟನೆ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿಯನ್ನು ಪಡೆಯುವ ಸಾಧ್ಯತೆ ಇದ್ದು , ಇನ್ನು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Related posts