Cinisuddi Fresh Cini News 

ಜೂನ್‌ನಲ್ಲಿ `ನನ್ನ ಪ್ರಕಾರ’ ಚಿತ್ರ ಬಿಡುಗಡೆ , ಸದ್ಯದಲ್ಲೇ ಅಡಿಯೋ ರಿಲೀಸ್

ಜಿ.ವಿ.ಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಅವರು ನಿರ್ಮಾಣ ಮಾಡಿರುವ `ನನ್ನ ಪ್ರಕಾರ’  ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ರಿಲೀಸ್ ಆಗಲಿದ್ದು, ಜೀ ಮ್ಯೂಸಿಕ್ ಅವರು ಈ ಚಿತ್ರದ ಹಾಡುಗಳ ಸೀಡಿಯನ್ನು ಮಾರುಕಟ್ಟೆಗೆ ತರುತ್ತಿದ್ದಾರೆ.

 ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ  ಹುಲಿರಾಯ ಖ್ಯಾತಿಯ ಅರ್ಜುನ್ರಾ್ಮು ಸಂಗೀತ ಸಂಯೋಜನೆ ಮಾಡಿದ್ದಾರೆ. ಮನ್ವರ್ಷಿ, ವಿನಯ್ಬಾ0ಲಾಜಿ, ಅವರ ಸಂಭಾಷಣೆ ಬರೆದಿದ್ದಾರೆ. 

ಮನೋಹರ್ಜೋಈಷಿ ಛಾಯಾಗ್ರಹಣ, ಸತೀಶ್ ಸಂಕಲನ ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮದನ್ – ಹರಿಣಿ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ವಿನೋದ್ ರಾವ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಕವಿರಾಜ್, ಬಹದ್ದೂರ್ ಚೇತನ್, ಕಿರಣ್ ಕಾವೇರಿಯಪ್ಪ ಬರೆದಿದ್ದಾರೆ.

ಕಿಶೋರ್, ಪ್ರಿಯಾಮಣಿ, ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share This With Your Friends

Related posts