Cinisuddi Fresh Cini News Tollywood 

ಟಾಲಿವುಡ್‍ನಲ್ಲಿ ನಭಾ ನಟೇಶ್ ಸದ್ದು

ಚಿಲ್ಲಿ ದೇಸ್ ಮೇ ಕೊಯಿ ಬಿಲ್ಲಿ ಆಯಾ ರೇ… ಹೆಣ ಬೀಳೋ ಜಾಗದಲ್ ನೊಣ ಇರ್ಬೇಕು, ಇಲ್ಲ ಈ ಪಟಾಕ ಹವಾ ಇರಬೇಕು ಎಂಬ ಮಾಸ್ ಪಂಚ್‍ನಿಂದ ಗಮನ ಸೆಳೆದಿದ್ದ ನಭಾ ನಟೇಶ್ ತಾನು ನಟಿಸಿದ ಮೊದಲ ಚಿತ್ರ ವಜ್ರಕಾಯದಲ್ಲೇ ತಮ್ಮ ಹವಾ ಎಬ್ಬಿಸಿದ್ದರು.

ನಂತರ ಲೀ, ಸಾಹೇಬದಲ್ಲಿ ತನ್ನ ಅಭಿನಯದ ಕಂಪು ಸೂಸಿದ ನಭಾನಟೇಶ್ ಟಾಲಿವುಡ್‍ನಲ್ಲೂ ತನ್ನ ಹವಾ ಎಬ್ಬಿಸಿದ್ದು `ನನ್ನು ದೋಚುಕೊಂಡುವಂಟೆ’ ಚಿತ್ರದ ಮೂಲಕ. ನಂತರ ಟಾಲಿವುಡ್‍ನಲ್ಲೇ ಬ್ಯುಸಿಯಾಗಿರುವ ನಭಾಗೆ ರಾಮ್‍ಪೋತಿನೇನಿ ಅಭಿನಯದ `ಇಸ್ಮಾರ್ಟ್ ಶಂಕರ್’ ಅವರನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ದಿತು. ಈಗ ಟಾಲಿವುಡ್‍ನಲ್ಲಿ ಕನ್ನಡತಿಯರೇ ಆದ ರಶ್ಮಿಕಾಮಂದಣ್ಣ, ಪೂಜಾಹೆಗಡೆ ಅವರು ನಂಬರ್ 1 ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದರೆ, ನಭಾ ನಟೇಶ್ ಆ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಪಟಾಕ ಹವಾ ಎಷ್ಟರ ಮಟ್ಟಿಗೆ ಇದೆಯೆಂದರೆ ಟಾಲಿ ವುಡ್‍ನ ಯಂಗ್ ಟೈಗರ್ ಜ್ಯೂನಿಯರ್ ಎನ್‍ಟಿಆರ್ ನಟಿಸಲಿರುವ ನೂತನ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

ಈಗಾಗಲೇ ರವಿತೇಜರ ಡಿಸ್ಕೋ ಡ್ಯಾನ್ಸರ್, ಸೋಲೋ ಬರ್ತುಕೆ ಸೋ ಬೆಟರ್, ಅಲ್ಲುಡು ಅದುರ್ಸ್ ಚಿತ್ರಗಳಲ್ಲಿ ನಟಿಸುತ್ತಿರುವಾಗಲೇ ಯಂಗ್ ಟೈಗರ್‍ನೊಂದಿಗೆ ನಟಿಸುವ ಅವಕಾಶ ಸಿಕ್ಕಿರು ವುದರಿಂದ ಮುಂದೊಂದು ದಿನ ನಭಾ ನಟೇಶ್ ಟಾಲಿವುಡ್‍ನ ನಂಬರ್ 1 ನಾಯಕಿಯಾಗುವ ಕಾಲ ಬಲುದೂರ ಇಲ್ಲ.

ಲಾಕ್‍ಡೌನ್ ನಡುವೆಯೂ ಜ್ಯೂನಿಯರ್ ಎನ್‍ಟಿಆರ್ ಹಲವು ಚಿತ್ರಗಳ ಕಥೆಗಳನ್ನು ಕೇಳಿದ್ದಾರೆ, ಅದರಲ್ಲಿ ಕನ್ನಡಿಗರಿಗೂ ಹೆಚ್ಚಿನ ಮಹತ್ವ ನೀಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುವುದು ಖಚಿತವಾಗುತ್ತಿದ್ದಂತೆಯೇ, ಮತ್ತೊಂದು ಚಿತ್ರದಲ್ಲಿ ಕನ್ನಡತಿ ನಭಾನಟೇಶ್‍ಗೆ ಹೀರೋಯಿನ್ ಛಾನ್ಸ್ ನೀಡಿದ್ದಾರೆ.

ನಭಾ ನಟೇಶ್‍ರೊಂದಿಗೆ ಎನ್‍ಟಿಆರ್ ನಟಿಸುತ್ತಿರುವ ಚಿತ್ರವು ಅವರ ವೃತ್ತಿ ಜೀವನದ 30ನೆ ಚಿತ್ರವೆಂಬುದು ವಿಶೇಷ. ಸದ್ಯ ಎನ್‍ಟಿಆರ್ ಕಲಾತ್ಮಕ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಚಿತ್ರದಲ್ಲಿ ಫುಲ್ ಬ್ಯುಜಿಯಾಗಿದ್ದು ಈ ಚಿತ್ರದ ನಂತರ ಎನ್‍ಟಿಆರ್‍ರ 30ನೆ ಚಿತ್ರದ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಈ ಚಿತ್ರಕ್ಕೆ ಅಲಾವೈಕುಂಟಪುರಮುಲೋ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಲಿದ್ದು, ಬಹುತೇಕ ಕನ್ನಡತಿ ನಭಾ ನಟೇಶ್ ಹೀರೋಯಿನ್ ಆಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ತಾರಕ್ ನಟನೆಯ 30ನೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಒಬ್ಬ ನಾಯಕಿಗೆ ತೆಲಂಗಾಣ ಪ್ರಾಂತ್ಯದ ತೆಲುಗು ಭಾಷೆಯ ಟಚ್ ಇದ್ದು ಆ ಪಾತ್ರ ದಲ್ಲಿ ನಭಾ ನಟೇಶ್ ನಟಿಸಲಿದ್ದಾರಂತೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲವಾದರೂ ತಾತ್ಕಾಲಿಕ ವಾಗಿ ಚಿತ್ರಕ್ಕೆ ಎನ್‍ಟಿಆರ್ 30 ಎಂಬ ಹೆಸರಿಡಲಾಗಿದೆ.

ಸದ್ಯ ಟಾಲಿವುಡ್‍ನಲ್ಲಿ ನಭಾಗೆ ಒಂದರ ಹಿಂದೊ ದರಂತೆ ಚಿತ್ರಗಳು ಸಿಗುತ್ತಿರು ವಾಗಲೇ ತಾರಕ್‍ನ ಚಿತ್ರ ದಲ್ಲಿ ನಟಿಸುವ ಅವಕಾಶ ಸಿಕ್ಕಲಿರು ವುದು ಅವರ ಇಮೇಜ್‍ಅನ್ನು ಮತ್ತಷ್ಟು ಪ್ರಜಲಿಸಲಿದೆ.

Related posts