Cinisuddi Fresh Cini News 

ಚಿತ್ರರಂಗದ ಭರವಸೆಯ ಸಂಗೀತ ನಿರ್ದೇಶಕ ಪ್ರದ್ಯೋತನ್

ಫೆಬ್ರವರಿ ಮೊದಲ ವಾರ ‘ನಟ ಭಯಂಕರ’ ಹಾಗೂ ನೈಜ ಘಟನೆ ಆಧಾರಿತ ‘ತನುಜ’ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಎರಡೂ ಸಿನಿಮಾಗಳ ಸಂಗೀತ ನಿರ್ದೇಶಕ ಪ್ರದ್ಯೋತನ್. ಚಂದವನದಲ್ಲಿ ಭರವಸೆ ಮೂಡಿಸುತ್ತಿರುವ ಪ್ರತಿಭಾವಂತ ಸಂಗೀತ ನಿರ್ದೇಶಕ.

ಪ್ರದ್ಯೋತನ್ ಮೂಲತಃ ತೆಲುಗಿನವರು ಆದ್ರೆ ಹೆಚ್ಚು ಪ್ರೀತಿ ಅಭಿಮಾನ ಗಳಿಸಿರೋದು ಕರುನಾಡಲ್ಲಿ. ಆ ಪ್ರೀತಿಯಿಂದಲೇ ಕಳೆದೆರಡು ವರ್ಷದಿಂದ ಬೆಂಗಳೂರಲ್ಲೇ ನೆಲೆಸಿದ್ದಾರೆ. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಅವರ ಪುತ್ರ. ಮನೆಯಲ್ಲೇ ಸಂಗೀತದ ವಾತಾವರಣ ಇದ್ದದ್ದರಿಂದ ಸಂಗೀತದ ಕಡೆ ಚಿಕ್ಕ ವಯಸ್ಸಲ್ಲೇ ಸೆಳೆತ. ಆರನೇ ವಯಸ್ಸಿಗೆ ಓದಿಗೆ ಫುಲ್ ಸ್ಟಾಪ್ ಇಟ್ಟು ಸಂಗೀತ ಕಲಿಕೆಯಲ್ಲಿ ನಿರತರಾದ ಪ್ರದ್ಯೋತ್ತನ್ ಪಿಯಾನೋ ಸ್ಪೆಶಲಿಸ್ಟ್. ಲಂಡನ್ ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಪಿಯಾನೋ ಕಲಿತಿದ್ದಾರೆ. ಹನ್ನೊಂದನೇ ವಯಸ್ಸಿಗೆ ಕಿಬೋರ್ಡ್ ಪ್ಲೇಯರ್ ಆಗಿ ಕೆರಿಯರ್ ಆರಂಭಿಸಿದ ಇವರಿಗೆ ತಂದೆ, ತಾಯಿ ಹಾಗೂ ಮಣಿಶರ್ಮಾ ಸ್ಪೂರ್ತಿ.

ರಾಮ್ ಗೋಪಾಲ್ ವರ್ಮ ನಿರ್ದೇಶನದ ‘ಐಸ್ ಕ್ರೀಮ್’ ಚಿತ್ರದ ಮೂಲಕ ಸಿನಿಮಾ ಸಂಗೀತ ನಿರ್ದೇಶನಕ್ಕೆ ಮುನ್ನುಡಿ ಬರೆದ ಪ್ರದ್ಯೋತನ್ ಕನ್ನಡದಲ್ಲಿ ‘ದೇವರಂತ ಮನುಷ್ಯ’ ಸಿನಿಮಾ ಮೂಲಕ ಪರಿಚಿತರಾಗಿದ್ದಾರೆ. ಕನ್ನಡ ಹಾಗೂ ತೆಲುಗು ಎರಡೂ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. ಅದರಲ್ಲೂ ಕನ್ನಡ ಸಿನಮಾಗಳಿಗೇನೆ ಹೆಚ್ಚು ಸಂಗೀತ ನಿರ್ದೇಶನ ಮಾಡಿರೋದು ವಿಶೇಷ.

‘ದೇವರಂತ ಮನುಷ್ಯ’, ‘ಮಿಸ್ಟರ್ ಚೀಟ್ ರಾಮಾಚಾರಿ’, ‘ಗಜಾನನ ಗ್ಯಾಂಗ್’, ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿದ್ದು, ‘ಕಿರಾತಕ 2’, ‘ಜುಗಲ್ ಬಂದಿ’, ‘ಮಹಾದೇವ’, ‘ಬನ್- ಟೀ’, ‘ಬೂತ್’ (ತೆಲುಗು, ತಮಿಳು) ‘ಸರ್ಪೈಸ್’, ‘ರಾಮಾಚಾರಿ 2.0’ ಬಿಡುಗಡೆಗೆ ರೆಡಿಯಿರುವ ಚಿತ್ರಗಳು.

ಸಂಗೀತದ ಹಿನ್ನೆಲೆ ಇರುವ ಕುಟುಂಬವಾದ್ರಿಂದ ಬಹಳ ಬೇಗ ಸಂಗೀತದ ಕಡೆ ಒಲವು ಬೆಳೆಯಿತು. ಸಂಗೀತ ನಿರ್ದೇಶಕ ಮಣಿಶರ್ಮಾ ನನ್ನ ಸ್ಪೂರ್ತಿ. ವಂದೇ ಮಾತರಂ ಶ್ರೀನಿವಾಸ್ ಸರ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರ ಬಳಿ ಕಂಪೋಸಿಂಗ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೇನೆ. ಇವತ್ತು ಏನೇ ಆಗಿದ್ದರು ನನ್ನ ತಂದೆ ತಾಯಿ ಹಾಗೂ ಗುರುಗಳಾದ ಗಿರಿಧರ್ ಸರ್ ಕಾರಣ. ಕನ್ನಡ ಸಿನಿಮಾ ಪ್ರೇಕ್ಷಕರು ನನಗೆ ಅಪಾರ ಪ್ರೀತಿ ಮತ್ತು ಬೆಂಬಲ ನೀಡುತ್ತಿದ್ದಾರೆ ಅವರೆಲ್ಲರಿಗೂ ನಾನು ಋಣಿಯಾಗಿರುತ್ತೇನೆ.

ಈ ಕ್ಷೇತ್ರದಲ್ಲಿ ನನ್ನದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಬೇಕು ಅನ್ನೋದು ನನ್ನ ಆಸೆ. ಕಮಲ್ ಹಾಸನ್ ಸರ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಬೇಕು ಅನ್ನೋದು ನನ್ನ ಬಹಳ ದೊಡ್ಡ ಕನಸು ಎನ್ನುತ್ತಾರೆ ಪ್ರದ್ಯೋತ್ತನ್.

Related posts