Cini Gossips Cinisuddi Fresh Cini News 

ರಸ್ತೆ ರಿಪೇರಿ ಮಾಡಿದ ಹಂಸಲೇಖಾ.. !

ಇಡೀ ಭಾರತವೇ ಲಾಕ್‍ಡೌನ್‍ನಿಂದ ಬಂದ್ ಆಗಿರುವ ಸಂದರ್ಭದಲ್ಲೂ ಒಂದಷ್ಟು ವಿಶೇಷತೆಗಳನ್ನು ಮೆರೆಯುವ ಮೂಲಕ ಕೆಲವರು ಸುದ್ದಿಯಾಗುತ್ತಿದ್ದಾರೆ. ಅಂಥವರ ಸಾಲಿಗೆ ಈಗ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖಾ ಅವರು ಕೂಡ ಸೇರಿದ್ದಾರೆ.

ಮೇಲಿನ ಚಿತ್ರವನ್ನು ನೋಡಿದಾಗ ಇದೇನಪ್ಪಾ ಹಂಸಲೇಖಾ ಅವರು ಚಿತ್ರರಂಗಕ್ಕೆ ಬರೋದಕ್ಕಿಂತ ಮುಂಚೆ ಕಟ್ಟಡ ಕಾರ್ಮಿಕರಾಗಿ ದುಡೀತಿದ್ದರೇನೋ ಎಂಬ ಭಾವನೆ ಎಲ್ಲರಲ್ಲೂ ಮೂಡುವುದು ಸಹಜ, ಆದರೆ ನಿಮ್ಮ ಊಹೆ ತಪ್ಪು, ಇದೆಲ್ಲಾ ಕೊರೊನಾ ಲಾಕ್ಡೌನ್‍ನಿಂದಾದ ಎಫೆಕ್ಟ್ ಆಗಿದೆ. ಕೊರೋನಾದಿಂದಾಗಿ ಇಡೀ ದೇಶದ ಜನತೆ ಈಗ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಸೆಲೆಬ್ರಿಟಿಗಳು ಕೂಡಾ ಇದರಿಂದ ಹೊರತಾಗಿಲ್ಲ.

ಅವರು ಮನೆಯಲ್ಲೇ ಕುಳಿತು ಬೋರಿಂಗ್ ಲೈಫ್ ಲೀಡ್ ಮಾಡ್ತಿ ದ್ದಾರೆ. ಇದರ ನಡುವೆಯೇ ಏನಾದ್ರೂ ಒಂದು ವಿಭಿನ್ನ ಕೆಲಸ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಾಕ್ತಾನೇ ಇರ್ತಾರೆ. ಈಗ ಸುದ್ದಿಯಾಗಿರುವವರು ಸಂಗೀತ ನಿರ್ದೇಶಕ ಮತ್ತು ಸಾಹಿತಿ ಹಂಸಲೇಖ. ನೂರಾರು ಜನಪ್ರಿಯ ಹಾಡುಗಳನ್ನು ಬರೆಯುವ ಮೂಲಕ ಕನ್ನಡ ನಾಡಿನ ಜನಮಾನಸದಲ್ಲಿ ಅಚ್ಚಳಿಯದೇ ನಿಂತಿರುವ ಹಂಸಲೇಖಾ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಒಂದು ವಿಶೇಷವಾದ ಕೆಲಸಕ್ಕೆ ಕೈಹಾಕಿದ್ದಾರೆ.

ಸಂಗೀತ ಲೋಕದ ದಿಗ್ಗಜ ಹಂಸಲೇಖ ಮೊನ್ನೆ ತಮ್ಮ ಕೈನಲ್ಲಿ ಸಲಿಕೆ ಹಿಡಿದು ಮನೆ ಮುಂದಿನ ರಸ್ತೆಗೆ ಕಾಂಕ್ರೀಟ್ ಹಾಕುವ ಕೆಲಸಕ್ಕೆ ಮುಂದಾಗಿದ್ದರು. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿರೋ ತಮ್ಮ ಮನೆಯ ಮುಂದೆ ಇರುವ ರಸ್ತೆಯಲ್ಲಿ ಬಿಬಿಎಂಪಿಯವರು ತೋಡಿದ್ದ ಹಳ್ಳವನ್ನು ಮುಚ್ಚುವಲ್ಲಿ ಹಂಸಲೇಖ ಅವರು ನಿರತರಾಗಿದ್ದರು. ಜಲ್ಲಿ, ಸಿಮೆಂಟ್ ಕಲಸಿ ಅದನ್ನು ರಸ್ತೆಗೆ ಹಾಕಿ ಸ್ವತಃ ತಾವೇ ಕಾಂಕ್ರಿಟ್ ಹಾಕಿ ಹಳ್ಳವನ್ನು ಮುಚ್ಚಿದ್ದಾರೆ.

ಈ ಮೂಲಕ ಬಿಬಿಎಂಪಿ ಸಿಬ್ಬಂದಿ ಮಾಡಬೇಕಿದ್ದ ಕಾರ್ಯವನ್ನು ಹಂಸಲೇಖ ಅವರೇ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

Share This With Your Friends

Related posts