Cinisuddi Fresh Cini News 

ಇದೇ 21 ರಂದು ತೆರೆಗೆ ಬರುತ್ತಿದೆ ಸೆಂಟಿಮೆಂಟ್‍- ಥ್ರಿಲ್ಲರ್ ‘ಮೌನಂ’ ಚಿತ್ರ

ತಂದೆ- ಮಗನ ಸೆಂಟಿಮೆಂಟ್‍ನೊಂದಿಗೆ ಥ್ರಿಲ್ಲರ್ ಕಥೆ ಹೊಂದಿರುವ ಮೌನಂ ಚಿತ್ರವು ಇದೇ 21 ರಂದು ಬೆಳ್ಳಿಪರದೆ ಮೇಲೆ ತೆರೆ ಕಾಣಲು ಹೊರಟಿದೆ. ಬೀದರ್ ಮೂಲದ ರಾಜಪಂಡಿತ್ ನಿರ್ದೇಶನದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಾರೂರಿ ಬಾಲಾಜಿಶರ್ಮ, ಅವಿನಾಶ ನಟಿಸಿದ್ದಾರೆ. ಆರವ ರಿಶಿಕ್ ಅವರ ಸಂಗೀತ ಸಂಯೋಜನೆ, ಶಂಕರ್ ಅವರ ಕ್ಯಾಮರಾವರ್ಕ್ ಈ ಚಿತ್ರದಲ್ಲಿದ್ದು ಮೊನ್ನೆ ಈ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು.

ನಿರ್ದೇಶಕ ರಾಜ ¥ಂಡಿತ್ ಮಾತನಾಡಿ, ಮೌನಂ ಚಿತ್ರದ ಕಥೆಯನ್ನು ಹಲವಾರು ನಿರ್ಮಾಪಕರ ಬಳಿ ಹೇಳಿದಾಗ ಕಥೆ ಚೆನ್ನಾಗಿದೆ ಆದರೆ ಮೊದಲ ಚಿತ್ರದಲ್ಲೇ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಹೇಳಿದರೇ ಹೊರತು ಚಿತ್ರ ನಿರ್ಮಿಸಲು ಯಾರು ಮುಂದೆ ಬರಲಿಲ್ಲ, ಆಗ ಶ್ರೀಹರಿರೆಡ್ಡಿ ಅವರು ಕಥೆ ಒಪ್ಪಿ ಚಿತ್ರಕ್ಕೆ ಬಂಡವಾಳ ಹೂಡಿದರು. ನಟರಾದ ಅವಿನಾಶ್ ಹಾಗೂ ಮರೂರಿ ಅವರು ಕೂಡ ನನ್ನ ಪ್ರಯತ್ನವನ್ನು ಬೆಂಬಲಿಸಿ ನಟಿಸಲು ಒಪ್ಪಿಕೊಂಡರು ಎಂದು ಹೇಳಿದರು.

ನಿರ್ಮಾಪಕ ಶ್ರೀ ಹರಿ ಮಾತನಾಡಿ, ನಟನಾಗಬೇಕೆಂಬ ಕನಸು ಹೊತ್ತು ಚಿತ್ರರಂಗಕ್ಕೆ ಬಂದ ನನ್ನ ಕನಸು ಈಡೇರಲೇ ಇಲ್ಲವಾದರೂ ಈ ಚಿತ್ರವನ್ನು ನಿರ್ಮಿಸುವ ಮೂಲಕ ಆ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ, ಸಸ್ಪೆನ್ಸ್ , ಥ್ರಿಲ್ಲರ್ ಹೊಂದಿರುವ ಈ ಚಿತ್ರದಲ್ಲಿ ನಟಿಸಿರುವ ಅವಿನಾಶ್ ಅವರು ಹೊಸಬರಾದರೂ ಪ್ರಬುದ್ಧ ನಟನಂತೆ ನಟಿಸಿದ್ದಾರೆ ಎಂದು ಹೇಳಿದರು.

ನಾಯಕಿ ಮಯೂರಿ ಮಾತನಾಡಿ, ಈ ಚಿತ್ರದಲ್ಲಿ ನಾನು ಚೇಷ್ಟೆ ಮಾಡುತ್ತ ಎಲ್ಲರನ್ನೂ ರೇಗಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದೇನೆ, ವಿಶೇಷವೆಂದರೆ ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕೂಡ ಮಯೂರಿ. ಮೌನಂ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿರುವುದು ಸಂತಸವಾಗಿದೆ ಎಂದು ಹೇಳಿದರು.

ನಟ ದರ್ಶನ್ ಮಾತನಾಡಿ, ನಾನು ಇದುವರೆಗೂ 53 ಸಿನಿಮಾ ನಟಿಸಿದ್ದು, ಅದರಲ್ಲಿ ಶೇ.90ರಷ್ಟು ಸಿನಿಮಾಗಳಲ್ಲಿ ಅವಿನಾಶ್ ಅವರು ನಟಿಸಿದ್ದಾರೆ. ಅವರೊಬ್ಬರು ಶಿಸ್ತಿನ ವ್ಯಕ್ತಿ ಮೌನಂ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸದರು. ಕಾಮಿಡಿ ಕಿಲಾಡಿಯ ನಯನ, ನಾಯಕಿಯ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೆಸರು ಮೌನಂ ಆಗಿದ್ದರೂ ಕೂಡ ಚಿತ್ರ ಬಿಡುಗಡೆಯಾದ ನಂತರ ಎಲ್ಲೆಡೆ ಜೋರು ಸದ್ದು ಮಾಡಲಿ.

Share This With Your Friends

Related posts