Cinisuddi Fresh Cini News 

‘ಮೂಕವಿಸ್ಮಿತ’ ಸಿನಿಮಾವಾಗುತ್ತಿದೆ ಟಿ.ಪಿ.ಕೈಲಾಸಂರ ಟೊಳ್ಳುಗಟ್ಟಿ ನಾಟಕದ ಕಥೆ

ಟಿ.ಪಿ.ಕೈಲಾಸಂರ ಕಥೆಯ ಸ್ಫೂರ್ತಿಯಿಂದ ಹಲವು ಚಿತ್ರಗಳು ತೆರೆಗೆ ಬಂದಿವೆ, ಈಗ ಅವರ ಟೊಳ್ಳುಗಟ್ಟಿ ನಾಟಕದ ಕಥೆಯು ಮೂಕವಿಸ್ಮಿತ ಚಿತ್ರವಾಗಿ ಬೆಳ್ಳಿತೆರೆಗೆ ಬರಲು ಅಣಿಯಾಗಿದ್ದು ಮೇ 17 ರಂದು ರಾಜ್ಯಾದಾದ್ಯಂತ ತೆರೆ ಕಾಣುತ್ತಿದೆ.

ವಿದ್ಯಾರ್ಥಿ ಜೀವನದಲ್ಲೇ ರಂಗಭೂಮಿಯ ಬಗ್ಗೆ ಒಲವು ಮೂಡಿಸಿಕೊಂಡಿದ್ದ ಗುರುದತ್ ಶ್ರೀಕಾಂತ್ ಗೇಮ್ ಆಫ್ ಶಾಡೋಸ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದು, ಈಗ ಮೂಕವಿಸ್ಮಿತ ಚಿತ್ರವನ್ನು ನಿರ್ದೇಶಿಸುವ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಪಡೆದಿದ್ದಾರೆ.

ನಿರ್ದೇಶಕ ಗುರುದತ್ ಮಾತನಾಡಿ, ಸಾಗರ, ಶಿವಮೊಗ್ಗ, ಭದ್ರಾವತಿ ಸುತ್ತಮುತ್ತ ಚಿತ್ರೀಕರಣ ಮಾಡಿರುವ ಈ ಚಿತ್ರದಲ್ಲಿ 1920ರಲ್ಲಿ ಕೈಲಾಸಂ ಅವರು ಬರೆದ ನಾಟಕದ ಎಳೆಯನ್ನು ಹೊಂದಿದ್ದು, ಅದನ್ನು ಈಗಿನ ಟ್ರೆಂಡ್‍ಗೆ ಹೊಂದಿಕೆಯಾಗುವಂತೆ ಅಲ್ಲಲ್ಲಿ ಸಣ್ಣ ಪುಟ್ಟ ಚೇಂಜಸ್ ಮಾಡಿಕೊಂಡಿದ್ದೇವೆ,

ಈ ಚಿತ್ರದಲ್ಲಿ ನಾನು ಕೂಡ 2 ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದು, ಒಂದರಲ್ಲಿ ಯುವ ಪ್ರೇಮಿಯಾಗಿ ಕಾಣಿಸಿಕೊಂಡಿದ್ದರೆ, ಮತ್ತೊಂದರಲ್ಲಿ ಹುಚ್ಚನ ಗೆಟಪ್‍ನಲ್ಲಿ ನಟಿಸಿದ್ದೇನೆ ಎಂದು ಹೇಳಿದರು.

ನಟ ಸಂದೀಪ್ ಮಲಾನಿ ಮಾತನಾಡಿ, ಕುಟುಂಬದ ಹಿರಿಯನ ಪಾತ್ರ ನಿರ್ವಹಿಸಿರುವ ನನಗೆ ಸಿಟ್ಟು, ಕೋಪ ಜೊತೆಗೆ ಸ್ವಾಭಿಮಾನವನ್ನು ಬೆಳೆಸಿಕೊಂಡಿರುತ್ತೇನೆ. ಇಡೀ ಚಿತ್ರದಲ್ಲಿ ನಾನು ಶರ್ಟ್ ಹಾಕಿಲ್ಲ, ನನ್ನ 25 ವರ್ಷಗಳ ಚಿತ್ರ ಜೀವನದಲ್ಲಿ ಇದೊಂದು ವಿಶಿಷ್ಟ ಪಾತ್ರ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ನಟಿ ಶುಭರಕ್ಷಾ ಮಾತನಾಡಿ, ಮನೆಯ ಹಿರಿಯ ಸೊಸೆಯಾಗಿರುವ ನಾನು ಯಾರಿಗೂ ಡೋಂಟ್ ಕೇರ್ ಅನ್ನದ ಪಾತ್ರದಲ್ಲಿ ನಟಿಸಿz್ದÉೀನೆ ಎಂದು ಹೇಳಿದರು. ಹಿರಿಯ ನಟಿ ವಾಣಿಶ್ರೀ ಮಾತನಾಡಿ, ಈ ಚಿತ್ರದಲ್ಲಿ ಒಂದು ಉತ್ತಮ ಸಾಂಸಾರಿಕ ಚಿತ್ರಕ್ಕೆ ಬೇಕಾದ ಅಂಶಗಳಿವೆ.

ನಾನು ಇಲ್ಲಿ ಸಾತು ಕುಟುಂಬದ ಯಜಮಾನಿಯ ಪಾತ್ರದಲ್ಲಿ ನಟಿಸಿದ್ದೇನೆ. ಕೈಲಾಸಂರ ಕಥೆಗಳು ಓದುಗರ ಗಮನ ಸೆಳೆದಂತೆ ಈ ಚಿತ್ರವು ಕೂಡ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬ ವಿಶ್ವಾಸದ ಮಾತುಗಳನ್ನಾಡಿದರು.

ಮಾನವೀಯ ಮೌಲ್ಯಗಳೇ ನಿಜವಾದ ಶಿಕ್ಷಣ ಎಂದು ಹೇಳಲು ಹೊರಟಿರುವ ಮೂಕವಿಸ್ಮಿತದಲ್ಲಿರುವ 4 ಹಾಡುಗಳಿಗೆ ಚಿನ್ಮಯಿ ಸಂಗೀತ ಒದಗಿಸಿದ್ದಾರೆ. ರೀಮೇಕ್ ಚಿತ್ರಗಳು, ಡಬ್ಬಿಂಗ್ ಸಿನಿಮಾಗಳ ಹಾವಳಿಯ ನಡುವೆಯೂ ಟಿ.ಪಿ.ಕೈಲಾಸಂರ ಕಥೆ ಆಧಾರಿಸಿ ನಿರ್ಮಾಣವಾಗುತ್ತಿರುವ ಮೂಕವಿಸ್ಮಿತ ಚಿತ್ರವು ಗೆಲುವಿನ ನಗೆಯನ್ನು ಚೆಲ್ಲುವಂತಾಗಲಿ.

Share This With Your Friends

Related posts