Cinisuddi Fresh Cini News 

ಅಮೆಜಾನ್ ಪ್ರೈಂನಲ್ಲಿ ಕನ್ನಡ ಸೇರಿ 3 ಭಾಷೆಗಳಲ್ಲಿ MMOF

ಆರ್​ಆರ್​ಆರ್​ ಪ್ರೊಡಕ್ಷನ್ಸ್​ ಮತ್ತು ಜೆಕೆ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ಸಿದ್ಧವಾಗಿರುವ MMOF ಚಿತ್ರ ಓಟಿಟಿಯಲ್ಲಿ ಬಿಡುಗಡೆ ಆಗಿದೆ. ಮೂಲ ತೆಲುಗಿನ ಈ ಸಿನಿಮಾ ತಮಿಳು ಮತ್ತು ಕನ್ನಡಕ್ಕೆ ಡಬ್ ಆಗಿ ಅಮೆಜಾನ್​ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ. ಯೆನ್ ಎಸ್​. ಸೀ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಜೆ ಡಿ ಚಕ್ರವರ್ತಿ ನಾಯಕನಾಗಿ ನಟಿಸಿದ್ದಾರೆ.

ಫೆಬ್ರವರಿ 24ರಂದು ಚಿತ್ರಮಂದಿರದಲ್ಲಿ ತೆರೆಕಂಡಿದ್ದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ MMOF ಚಿತ್ರ, ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇದೀಗ ಓಟಿಟಿಗೆ ಲಗ್ಗೆ ಇಟ್ಟಿದೆ. ಚಿತ್ರಮಂದಿರವೊಂದರಲ್ಲಿ ನಡೆಯುವ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿದ್ದು, ರೋಚಕವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಯೆನ್. ಎಸ್. ಸೀ.

ರಾಘವ್ ಬರಹಗಾರರಾಗಿ ಕೆಲಸ ಮಾಡಿದರೆ, ಗರುಡವೇಗ ಅಂಜಿ ಛಾಯಾಗ್ರಹಣ, ಸಾಯಿ ಕಾರ್ತಿಕ್ ಸಂಗೀತ, ಸವುಲು ವೆಂಕಟೇಶ್ ಸಂಕಲನ, ಜೋ ಜೋ ನೃತ್ಯ ನಿರ್ದೇಶನ, ಅವಿನಾಶ್ ಸಾಹಸ ನಿರ್ದೇಶನ ಮಾಡಿದ್ದಾರೆ.

ರಾಜಶೇಖರ್, ಜೆಡಿ ಕಾಸಿಮ್ ಚಿತ್ರದ ನಿರ್ಮಾಪಕರಾಗಿದ್ದಾರೆ.ಇನ್ನುಳಿದಂತೆ ತಾರಾಗಣದಲ್ಲಿ ಜೆಡಿ ಚಕ್ರವರ್ತಿ, ಅಕ್ಷತಾ, ಮನೋಜ್ ನಂದನ್, ಅಕ್ಷಿತ ಮುದ್ಗಲ್, ಬ್ಯಾನರ್ಜಿ, ಕಿರಾಕ್ ಆರ್​ಪಿ, ಚಮ್ಮಕ್ ಚಂದ್ರ, ಶ್ರೀರಾಮ್ ಚಂದ್ರ, ಸಂಪೂರ್ಣೆಶ್ ಬಾಬು, ರಾಜೀವ್, ತಾರ್ಜನ್, ಗೌತಮ್ ಮತ್ತು ರಾಜು ನಟಿಸಿದ್ದಾರೆ.

Related posts