Cinisuddi Fresh Cini News 

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸಿನಿಮಾ ತರಬೇತಿ ಶಾಲೆ ಆರಂಭ

ಬಣ್ಣದ ಲೋಕಕ್ಕೆ ಆಸೆ ಪಟ್ಟು ಹಲವು ಪ್ರತಿಭೆಗಳು ಬರುತ್ತಾರೆ. ಆದರೆ ಸೂಕ್ತವಾದ ವೇದಿಕೆ ಇಲ್ಲದೆ ಪರದಾಡುತ್ತಾರೆ. ಅಂತಹವರಿಗಂತಲೇ ‘ಎಂ.ಜಿ.ಫ್ಯಾಶನ್’ ಸಂಸ್ಥೆಯೊಂದು ತೆರೆದಿದೆ.

ಇದರಲ್ಲಿ ಮಾಡೆಲಿಂಗ್ ತರಭೇತಿ, ಈವೆಂಟ್ಸ್, ಫಿಲಿಂ ಫೋಟೋ ಶೂಟ್ ಮುಂತಾದವುಗಳಿಗೆ ಸೇವೆ ಲಭ್ಯವಿರುತ್ತದೆ. ಮಾಡೆಲ್ ತರಭೇತುದಾರ ಮತ್ತು ಈವೆಂಟ್ ನಡೆಸಿದ ಅನುಭವವಿರುವ ಮಹೇಶ್‍ಗೌಡ ಮಾಲೀಕತ್ವದಲ್ಲಿ ಶುರುಗೊಂಡಿದೆ.

ಇದರ ಮೂಲಕ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡಿ, ಅವರಿಗೆ ಸರಿಯಾದ ಅವಕಾಶ ಮಾಡಿಕೊಡಲು ಸಂಸ್ಥೆಯು ಸದಾ ಸಿದ್ದವಿರುತ್ತದೆ. ಮೊನ್ನೆ ನಡೆದ ಉದ್ಗಾಟನೆ ಸಮಾರಂಭದಲ್ಲಿ ಸರಿಗಮಪ ವಿಜೇತ ಮತ್ತು ಗಾಯಕ ಚಿನ್ಮಯ್, ಗಣ್ಯರುಗಳಾದ ಭರತ್, ಪಾರ್ಥ, ಪ್ರೇಮ ಮುಂತಾದವರು ಆಗಮಿಸಿ ಶುಭ ಹಾರೈಸಿದರು.

Related posts