Bollywood Cinisuddi Fresh Cini News 

ಕಂಗನಾಳ ಹೊಸ ಚಿತ್ರ ‘ಮೆಂಟಲ್ ಹೇ ಕ್ಯಾ’ದ ಪೋಸ್ಟರ್ ರಿಲೀಸ್

ಗಂಭೀರ ಪಾತ್ರಗಳಲ್ಲಿ ಮಿಂಚುತ್ತಾ ಗಮನಸೆಳೆದಿರುವ ಬಾಲಿವುಡ್ ಫೈರ್‍ಬ್ರಾಂಡ್ ಕಂಗನಾ ರನೌತ್ ಕಾಮಿಡಿ ಸಿನಿಮಾಗಳಲ್ಲಿ ನಟಿಸುವುದು ಅಪರೂಪ. ಕಂಗನಾ ಮತ್ತು ಹ್ಯಾಂಡ್‍ಸಮ್ ನಟ ರಾಜಕುಮಾರ್ ರಾವ್ ಅಭಿನಯದ ಮೆಂಟಲ್ ಹೇ ಕ್ಯಾ ಸಿನಿಮಾ ರಿಲೀಸ್‍ಗೆ ಮುನ್ನವೇ ಸಾಕಷ್ಟು ಕುತೂಹಲ ಕೆರಳಿಸಿದೆ.

ಮಾರ್ಚ್ 29ಕ್ಕೆ ತೆರೆ ಕಾಣಬೇಕಿದ್ದ ಈ ಸಿನಿಮಾ ಬಿಡುಗಡೆ ಜೂನ್ 21ಕ್ಕೆ ಮುಂದೂಡಲ್ಪಟ್ಟಿದೆ. ಈ ಚಿತ್ರದ ಟೈಟಲ್ ಫಿಕ್ಸ್ ಆದ ದಿನದಿಂದಲೂ ಮೆಂಟಲ್ ಹೇ ಕ್ಯಾ ಒಂದಿಲ್ಲೊಂದು ಸುದ್ದಿ-ವಿವಾದದಿಂದ ಗಮನಸೆಳೆಯುತ್ತಿದೆ. ಈ ಚಿತ್ರದ ಫಸ್ಟ್ ಪೋಸ್ಟರ್‍ನಲ್ಲಿ ಕಂಗನಾ ಮತ್ತು ರಾವ್ ಗುರುತಿಸಲು ಕಷ್ಟವಾಗುವ ರೀತಿಯಲ್ಲಿ ದೊಡ್ಡದಾಗಿ ಕಣ್ಣು ಬಿಟ್ಟು ವಿಲಕ್ಷಣವಾಗಿ ಕಾಣಿಸಿಕೊಂಡಿದ್ದರು.

ಈ ಪೋಸ್ಟರ್ ನೋಡಿದ ಕೆಲವರು ಇದೆಂಥಾ ಟೈಟಲ್ ಇಟ್ಟಿದ್ದಾರೆ. ಬೇರೆ ಯಾವ ಹೆಸರು ಸಿಕ್ಕಿಲ್ಲವೇ? ಮೆಂಟಲ್ ಹೇ ಕ್ಯಾ ಎಂದು ಟೀಕಿಸಿದ್ದರು.
ಆದಾಗ್ಯೂ ಸಿನಿಮಾ ಸಾಕಷ್ಟು ಆಸಕ್ತಿ ಕೆರಳಿಸಿದೆ. ಈಗ ಬಿಡುಗಡೆಯಾಗಿರುವ ಹೊಸ ಪೆಪೋರ್ ಸಹ ಸುದ್ದಿಯಲ್ಲಿದೆ. ಚಾಚಿಕೊಂಡಿರುವ ರಾವ್ ಮತ್ತು ಕಂಗನಾ ನಾಲಿಗೆಗಳ ನಡುವೆ ಸೇತುವೆಯಂತಿರುವ ಬ್ಲೇಡ್ ಚಿತ್ರ ಗಮನಸೆಳೆಯುತ್ತಿದೆ.

ಏನಿದರ ಅರ್ಥ..? ಇದನ್ನು ಮೆಂಟಲ್.. ಸಿನಿಮಾ ತಂಡವೇ ಹೇಳಬೇಕು.  ಪ್ರಕಾಶ್ ಕೋವಲಮುಡಿ ನಿರ್ದೇಶನದ ವಿಚಿತ್ರ ಟೈಟಲ್‍ನ ಈ ಚಿತ್ರದ ನಿರ್ಮಾಪಕರು ಶೋಭಾ ಕಪೂರ್, ಏಕ್ತಾ ಕಪೂರ್ ಮತ್ತು ಶೈಲೇಶ್ ಸಿಂಗ್. ಕಂಗನಾ ಅಭಿನಯದ ಐತಿಹಾಸಿಕ ಸಿನಿಮಾ ಮಣಿ ಕರ್ಣಿಕಾ : ದಿ ಕ್ವೀನ್ ಆಫ್ ಝಾನ್ಸಿ ಹಾಗೂ ರಾಜಕುಮಾರ್ ರಾವ್ ನಟನೆಯ ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ ಸಿನಿಮಾಗಳು ಸೂಪರ್‍ಹಿಟ್ ಆಗಿರುವುದರಿಂದ ಈ ಚಿತ್ರ ಕೂಡ ಬಾಕ್ಸ್ ಆಫೀಸ್‍ನಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ.

ಜನರ ಮನಸ್ಸಿತಿ ಮೆಂಟಲ್… ಸಿನಿಮಾ ಮೇಲೆ ರೀತಿ ಪ್ರಭಾವ ಬೀರುತ್ತದೆಯೋ ಕಾದು ನೋಡಬೇಕು.

Share This With Your Friends

Related posts