Cinisuddi Fresh Cini News 

ಏಪ್ರಿಲ್  01ರಂದು “ಮಾಜರ್” ಹಾಡುಗಳು ರಿಲೀಸ್.

ಕನ್ನಡ ಚಿತ್ರರಂಗಕ್ಕೆ ಗೀತರಚನೆಕಾರನಾಗಿ ಪ್ರವೇಶಿಸಿದ ಲೋಕಲ್ ಲೋಕಿ, ಈ ತನಕ 120ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಈಗ ಅವರ ಪ್ರಥಮ ನಿರ್ದೇಶನದಲ್ಲಿ “ಮಾಜರ್” ಸಿನಿಮಾ ಮೂಡಿಬಂದಿದೆ.

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಹಾಡುಗಳು ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದು.

ಸಂಗೀತ ಸಿನಿ ಹೌಸ್ ಲಾಂಛನದಲ್ಲಿ ಮುರುಗನಂಥನ್ ಎಂ ನಿರ್ಮಿಸಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ವಿನಯ್ ಗೌಡ, ಗಗನ್ ಗೌಡ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಸಂಕಲನ, ರಾಕೇಟ್ ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಸೈ ಗೀತ, ವಾಸ್ತು ನಾಗ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಉಗ್ರಂ ರವಿ, ಸಂಭ್ರಮ ಗೌಡ, ಅರ್ಜುನ್ , ಪುಲಿ ಮುರುಗನ್, ಲೋಕಲ್ ಲೋಕಿ, ಹರೀಶ್, ರಾಜು, ವಿಶ್ವ ಮುಂತಾದವರು “ಮಾಜರ್” ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts