ಕಿಚ್ಚು ಹಚ್ಚುತ್ತಿರುವ ಪ್ರಣೀತಾಳ ನ್ಯೂಲುಕ್
ಕೊರೊನಾ ನಡುವೆಯೂ ಇಡೀ ಜಗತ್ತು ಹೊಸ ಬಾಳಿನತ್ತ ಹೆಜ್ಜೆ ಇಟ್ಟಿದೆ, ಸದಾ ಬಣ್ಣದ ಲೋಕದಲ್ಲಿ ಮಿಂದು ಜನರನ್ನು ರಂಜಿಸುತ್ತಿದ್ದ ಹಿರಿತೆರೆಯ ನಟ, ನಟಿಯರು ಕೂಡ ಈಗ ಹೊಸ ಸ್ಟೈಲ್, ನವ ಚೇತನದೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಜ್ಜಾಗಿ ನಿಂತಿದ್ದಾರೆ.
ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರುಗಳ ಚಿತ್ರಗಳ ಶೂಟಿಂಗ್ ಆರಂಭಗೊಳ್ಳುವ ಸೂಚನೆ ಸಿಕ್ಕುತ್ತಿದ್ದಂತೆ, ಲಾಕ್‍ಡೌನ್ ವೇಳೆ ತಮ್ಮ ಮನೆಯಲ್ಲೇ ಕಾಲ ಕಳೆಯುತ್ತಿದ್ದ ನಮ್ಮ ಕರುನಾಡಿನ ಚೆಂದುಳ್ಳಿ ಚೆಲುವೆ ನಟಿಯರು ಕೂಡ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳಲು ಹೊರಟಿರುವುದು ನೋಡಿದರೆ ಇವರು ಕೂಡ ಶೂಟಿಂಗ್ ಆರಂಭಗೊಳ್ಳುವುದನ್ನೇ ಎದುರು ನೋಡುತ್ತಿದ್ದಾರೆ ಎಂದೆನಿಸುತ್ತದೆ.
ಪೆÇೀಕರಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಣೀತಾ ಕನ್ನಡ ಚಿತ್ರಗಳಲ್ಲಿ ಮಿಂಚುತ್ತಿರುವುದಾಗಲೇ ತೆಲುಗು, ತಮಿಳು ಚಿತ್ರಗಳಲ್ಲೂ ಬ್ಯುಸಿಯಾದರು, ಈಗ ಅವರ ಸಿನಿ ಜೀವನವು ಕೂಡ ಬದಲಾಗಿದ್ದು ಬಾಲಿವುಡ್‍ನಲ್ಲಿ ಅವರಿಗೆ 2 ಚಿತ್ರಗಳಲ್ಲಿ ನಟಿಸಲು ಆಫರ್ ಸಿಕ್ಕಿದೆ.
ಲಾಕ್‍ಡೌನ್ ಸಮಯದಲ್ಲಿ ನೊಂದವರಿಗೆ ನೆರವು ನೀಡಿದ್ದ ಪ್ರಣೀತಾ ಚಿತ್ರರಂಗದಲ್ಲಿ ಮಿಂಚಲು ಬೇಕಾದ ಎಲ್ಲ ತಯಾರಿಯನ್ನು ನಡೆಸಿದ್ದರು. ವರ್ಕೌಟ್‍ನೊಂದಿಗೆ ತಮ್ಮ ಸ್ಟೈಲ್ ಅನ್ನು ಬದಲಾಯಿಸಿಕೊಂಡಿರುವ ಅವರು ಸಲೂನ್‍ಗೆ ಹೋಗಿ ಹೇರ್ ಕಟಿಂಗ್ ಮಾಡಿಸಿಕೊಂಡು ಸ್ಟೈಲಿಶ್ ಆಗಿದ್ದಾರೆ, ಆ ಫೋ ಟೋಗಳನ್ನು ಅಂತಾರ್ಜಾಲದಲ್ಲೂ ಹರಿಬಿಟ್ಟಿದ್ದು, ಇದನ್ನು ನೋಡಿದ ಕೆಲವರು ಪ್ರಣೀತಾ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರೆ ಎಂಬ ಕಾಮೆಂಟ್ ಕೂಡ ಮಾಡಿದ್ದಾರೆ.
ಈಗ ಎಲ್ಲ ಲಾಕ್‍ಡೌನ್‍ಗಳು ತೆರವುಗೊಂಡಿದ್ದು ಧಾರಾವಾಹಿಗಳ ಚಿತ್ರೀಕರಣಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದೆ, ಸದ್ಯದಲ್ಲೇ ಸಿನಿಮಾ ಶೂಟಿಂಗ್ ಆರಂಭಗೊಳ್ಳುವ ಸೂಚನೆಗಳು ಸಿಕ್ಕಿರುವುದರಿಂದ ಕಲಾವಿದರು ಚಿತ್ರೀಕರಣದಲ್ಲಿ ಯಾವ ರೀತಿ ಮುನ್ಸೂಚನೆಗಳನ್ನು ಅನುಸರಿಸಬೇಕು, ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದರ ಬಗ್ಗೆಯೂ ಚಿಂತಿಸಿದ್ದಾರೆ.
ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಪ್ರಣೀತಾ ಸುಭಾಷ್ ಕೂಡ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರ ಕೈಯಲ್ಲಿ ಈಗ ರಾಮನ ಅವತಾರ ಎಂಬ ಕನ್ನಡ ಸಿನಿಮಾದೊಂದಿಗೆ ಬಾಲಿವುಡ್‍ನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಹಂಗಮಾ 2 ಚಿತ್ರಗಳಲ್ಲಿ ನಟಿಸುತ್ತಿದ್ದು ಈ ಚಿತ್ರಗಳ ಮೂಲಕ ಅವರಿಗೆ ಬಾಲಿವುಡ್‍ನಲ್ಲೂ ಉತ್ತಮ ಅವಕಾಶಗಳು ದೊರೆಯಲಿ.