Cini Reviews Cinisuddi Fresh Cini News 

ಹಾಸ್ಯ ಮಿಶ್ರಣದ “ಮತ್ತೆ ಉದ್ಭವ” (ಚಿತ್ರ ವಿಮರ್ಶೆ – ರೇಟಿಂಗ್ : 4/5)

ಚಿತ್ರ : ಮತ್ತೆ ಉದ್ಭವ
ನಿರ್ದೇಶಕ : ಕೋಡ್ಲು ರಾಮಕೃಷ್ಣ
ನಿರ್ಮಾಪಕರು : ನಿತ್ಯಾನಂದ್ ಭಟ್ , ಗುರು ಪ್ರಸಾದ್ ಮುದ್ರಾಡಿ
ಛಾಯಾಗ್ರಾಹಕ : ಮೋಹನ್
ಸಂಗೀತ : ವಿ. ಮನೋಹರ್
ತಾರಾಗಣ : ಪ್ರಮೋದ್, ಮಿಲನಾ ನಾಗರಾಜ್, ರಂಗಾಯಣ ರಘು, ಸುಧಾಬೆಳವಾಡಿ,
ಅವಿನಾಶ್, ಮೋಹನ್ ಹಾಗೂ ಮುಂತಾದವರು…

ದಶಕಗಳ ಹಿಂದೆ ಬಿಡುಗಡೆಗೊಂಡ ಉದ್ಭವ ಚಿತ್ರಕ್ಕೆ ಸರಿಸಮನಾಗಿ ತೂಗಿಸುವ ನಿಟ್ಟಿನಲ್ಲಿ ಬಿಡುಗಡೆಗೊಂಡಿರುವ ಚಿತ್ರವೇ “ಮತ್ತೆ ಉದ್ಭವ” ಈ ಹಿಂದೆ ಬoದ ಉದ್ಭವ ಸಿನಿಮಾದ ಮುಂದುವೆರದ ಭಾಗ ಎನ್ನುವಂತಿದೆ.

ಜನಸಾಮಾನ್ಯರು ತಮ್ಮ ನಿತ್ಯದ ಬದುಕಿನಲ್ಲಿ ಏನೆಲ್ಲಾ ನೋಡುತ್ತಾರೋ, ಕೇಳುತ್ತಾರೋ ಅವೆಲ್ಲದರ ಮಿಶ್ರಣ ಈ ಚಿತ್ರದಲ್ಲಿದೆ ಎನ್ನಬಹುದು. ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಸಿನಿಮಾದ ಮೂಲಕ ಕೋಡ್ಲು ರಾಮಕೃಷ್ಣ ಅಚ್ಚುಕಟ್ಟಾಗಿ ಕಥೆ ಹೆಣೆದಿದ್ದಾರೆ. ಮನುಷ್ಯ ಎಷ್ಟೇ ಸುಳ್ಳು ಹೇಳಿದರೂ ಒಂದೆಲ್ಲ ಒಂದು ದಿನ ಅದು ಬಯಲಿಗೆ ಬರಲೇಬೇಕು. ದುಡ್ಡಿನ ಅಹಂನಿಂದ ಮನುಷ್ಯ ಹೇಗೆ ಬದಲಾಗುತ್ತದೆ ಎಂಬ ಸಂದೇಶವನ್ನು ಹೇಳಿದ್ದಾರೆ.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಜನರಿಗೆ ಮೋಸ ಮಾಡುವ ಹಾದಿಯಲ್ಲಿ. ಚಿತ್ರದ ಕಥಾ ನಾಯಕ ಗಣೇಶ (ಪ್ರಮೋದ್) ಕೆಲಸವಿಲ್ಲದೆ ದುಡ್ಡಿಗಾಗಿ ದೇವರ ನೆಪ ಹೇಳಿ ವಂಚಿಸುತ್ತಿರುತ್ತಾನೆ. ಹಣ ಲೂಟಿ ಮಾಡುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಿ ಸಂಪಾದನೆ ಮಾಡಿಕೊಳ್ಳುತ್ತಾನೆ. ಅಚಾನಕ್ ಆಗಿ ನಾಯಕಿ ಸ್ಪಂದನ (ಮಿಲನಾ ನಾಗರಾಜ್) ನಾಯಕನಿಗೆ ಭೇಟಿ ಆಗುತ್ತಾಳೆ. ಅವಳ ಸಿನಿಮಾ ನಟಿಯಾಗಿರುತ್ತಾಳೆ.

ಜೊತೆಗೆ ಪರಿಸರದ ಬಗ್ಗೆ ಕಾಳಜಿ ಇರುತ್ತದೆ. ಹಾಗಾಗಿ ಸ್ಪಂದನಾ ನರ್ಸರಿ ಮಾಡಿಕೊಂಡಿರುತ್ತಾಳೆ.ಅವರಿಬ್ಬಗೂ ಪರಿಚಯವಾಗಿ ಪ್ರೀತಿ ಚಿಗುರುತ್ತದೆ. ಈ ನಡುವೆ ರಾಜಕೀಯ ತೊಳಲಾಟ ಶುರುವಾಗುತ್ತದೆ. ಅಲ್ಲಿಂದ ಸಿನಿಮಾದ ಕಥೆ ಕುತೂಹಲ ಕೆರಳಿಸುತ್ತದೆ. ಮುಂಬರುವ ಚುನಾವಣೆಗೆ ರಂಗನಾಥ್ ರೆಡ್ಡಿ ವಿರುದ್ಧ ಸ್ಪಂದನಾಳನ್ನು ನಾಯಕ ಗಣೇಶ್ ಅಭ್ಯರ್ಥಿಯಾಗಿ ನಿಲ್ಲಿಸುತ್ತಾನೆ. ಬಹುಮತ ಅಂತರದಿಂದ ಗೆಲ್ಲುವ ಸಾಧಿಸುತ್ತಾಳೆ. ಅಲ್ಲಿಂದ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ ಸಿನಿಮಾ.

ಈ ಹಿಂದೆ ಉದ್ಭವ ಆದ ಗಣೇಶ ಮೂರ್ತಿ ದೇವಸ್ಥಾನ ಹಣಕ್ಕಾಗಿ ತೆರವುಗೊಳಿಸುವ ಪ್ರಸಂಗ ಬರುತ್ತದೆ. ಅದು ಯಾಕೆ, ಏನು ಎಂಬುದು ತಿಳಿದುಕೊಳ್ಳಲು ಇಡೀ ಸಿನಿಮಾ ನೋಡಬೇಕಾಗುತ್ತದೆ. ಮಧ್ಯಂತರ ನಂತರ ಕೋರ್ಟ್, ಹೋರಾಟ, ರಾಜಕೀಯ ಕಥೆ ತೆರೆದುಕೊಳ್ಳುತ್ತದೆ. ಎಲ್ಲೂ ಬೋರ್ ಆಗದ ರೀತಿಯಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದಿಂದ ಜನರಿಗೆ ಮನರಂಜನೆ ಸಿಗುತ್ತದೆ. ನಿರೂಪಣೆ ಶೈಲಿ ಚೆನ್ನಾಗಿ ಮೂಡಿಬಂದಿದ್ದು, ಕಥೆ ಕೂಡ ಸಿನಿಮಾ ಕೊನೆವರೆಗೂ ಕುತೂಹಲದಿಂದ ಸಾಗಿಸುತ್ತದೆ.

ನಿರ್ದೇಶಕ ಕೋಡ್ಲು ರಾಮಕೃಷ್ಣ ಪ್ರಸ್ತುತ ರಾಜಕೀಯದ ವಿಡಂಬನೆಗಳು, ಕಂಡರೂ ಕಾಣದಂತೆ ನಡೆಯುತ್ತಿರುವ ಕೆಲವು ಕಳ್ಳಾಟಗಳನ್ನ ಅನಾವರಣ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯದ ಮುಖಂಡರು , ಸ್ವಾಮೀಜಿಗಳು, ನಟಿ ಮಣಿ, ಜನರ ನಂಬಿಕೆ ಹೀಗೆ ಎಲ್ಲ ವಿಚಾರಗಳನ್ನು ತೆರೆದಿಡುವ ಮೂಲಕ ಸತ್ಯ , ಅಸತ್ಯತೆಗಳನ್ನು ಬಗ್ಗೆ ತಿಳಿದುಕೊಳ್ಳಿ ಎನ್ನುವಂತಿದೆ.

ರಾಜಕೀಯ ಅಭ್ಯರ್ಥಿಯಾಗಿ ಅವಿನಾಶ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಷ್ಟೇ ಗಮನ ಸೆಳೆಯುವ ಪಾತ್ರದಲ್ಲಿ ರಂಗಾಯಣ ರಘು ನಾಯಕನ ತಂದೆಯಾಗಿ ಹಾಗೂ ದೇವಸ್ಥಾನದ ಮುಖ್ಯ ರೂವಾರಿಗಳಾಗಿ ತಮ್ಮ ಪಾತ್ರ ಪೋಷಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಮೋಸದಾಟ, ಆ ಕಾಮಿಡಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕಿಕ್ ಕೊಡುವುದಂತೂ ಪಕ್ಕಾ. ಇನ್ನು ಮೋಹನ್ ಅವರ ಸ್ವಾಮೀಜಿ ನಟನೆ ಚೆನ್ನಾಗಿದೆ. ಆಪ್ತೆ ಭಕ್ತೆಯಾಗಿ ಶುಭರಕ್ಷಾ ನಟಿಸಿದ್ದು, ಅವರಿಬ್ಬರ ರಸಿಕತನ ಕಾಮಿಡಿ ಸ್ವಲ್ಪ ಅತಿರೇಕ ವಾಯಿತು ಎನಿಸುತ್ತದೆ.

ಇನ್ನೂ ನಾಯಕ ನಟ ಪ್ರಮೋದ್ ನಟನೆ ಚೆನ್ನಾಗಿದ್ದು, ಬಹುಮುಖ ಪ್ರತಿಭೆ ಎಂದು ಪರದೆ ಮೇಲೆ ತೋರಿಸಿದ್ದಾರೆ.ಮತ್ತೊಬ್ಬ ಭರವಸೆಯ ಪ್ರತಿಭೆ ಗಾಂಧಿನಗರದಲ್ಲಿ ಛಾಪು ಮೂಡಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ನಟಿ, ಎಂ.ಎಲ್‍.ಎ ಪಾತ್ರವನ್ನು ಮಿಲನಾ ನಾಗರಾಜ್ ನಿರ್ವಹಿಸಿದ್ದು, ಅವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸುಧಾ ಬೆಳವಾಡಿ, ಪಿ.ಡಿ. ಸತೀಶ್, ಗಿರೀಶ್ ಭಟ್, ನರೇಶ್, ಶಂಕರ್ , ನಿರಂಜನ್ ಸೇರಿದಂತೆ ಎಲ್ಲ ಪಾತ್ರಗಳು ಜೀವ ತುಂಬಿ ಅಭಿನಯಿಸಿದ್ದಾರೆ .

ವಿ. ಮನೋಹರ್ ಅವರ ಸಂಗೀತ ನಿರ್ದೇಶನದ ಮೂರು ಹಾಡುಗಳು ಕೇಳುಗರಿಗೆ ಹಿತವೆನಿಸುತ್ತದೆ. ಮೋಹನ್ ಅವರ ಛಾಯಾಗ್ರಹಣ ದೃಶ್ಯಕ್ಕೆ ತಕ್ಕಂತೆ ಕಲರ್‍ಪುಲ್ ಆಗಿ ಮೂಡಿಬಂದಿದೆ. ಈ ಮತ್ತೆ ಉದ್ಭವ ಚಿತ್ರವನ್ನು ಇಡೀ ಕುಟುಂಬ ಸಮೇತ ಕುಳಿತು ನೋಡಿ ಎಂಜಾಯ್ ಮಾಡಬಹುದಾಗಿದೆ.

Share This With Your Friends

Related posts