Cinisuddi Fresh Cini News 

ಸಂತೋಷ್ ವೆಂಕಿ ಕಂಠದಲ್ಲಿ “ಮರೆಯದೆ ಕ್ಷಮಿಸು” ಸಾಂಗ್

ಯುವ ಪಡೆಗಳು ಸಿದ್ಧಪಡಿಸುತ್ತಿರುವ “ಮರೆಯದೇ ಕ್ಷಮಿಸು” ಚಿತ್ರದ ಸಾಂಗ್ ರೆಕಾರ್ಡಿಂಗ್ ಕಾರ್ಯ ಅದ್ದೂರಿಯಾಗಿ ಕಾರ್ತಿಕ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದು , ಸಂತೋಷ್ ವೆಂಕಿ ಒಂದು ಹಾಡಿಗೆ ಧ್ವನಿ ನೀಡುವ ಮೂಲಕ ಹಾಡಿಗೆ ಮತ್ತಷ್ಟು ಮೆರಗನ್ನ ನೀಡಿದ್ದಾರೆ.

ಕಾರ್ತಿಕ್ ವೆಂಕಟೇಶ್ ಸಂಗೀತ ಹಾಗೂ ರೀ- ರೆಕಾರ್ಡಿಂಗ್ ನೀಡುತ್ತಿರುವ ಈ ಚಿತ್ರವನ್ನು ಯುವ ನಿರ್ದೇಶಕ ಕ್ರಿಶ್ ರಾಘವ್ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ.

ಪ್ರಥಮ ಬಾರಿಗೆ ನಿರ್ದೇಶಿಸುತ್ತಿರುವ ಈ ಚಿತ್ರದ ನಾಲ್ಕು ಹಾಡುಗಳಿಗೆ ಅವರೇ ಸಾಹಿತ್ಯ ಬರೆದಿದ್ದು , ಕರಿಯ ಹಾಗೂ ಎಕ್ಸ್ ಕ್ಯೊಸ್ ಮಿ ಚಿತ್ರದ ಖ್ಯಾತಿಯ ನಿರ್ದೇಶಕ ನಂದ ಮಾಸ್ಟರ್ ಈ ಚಿತ್ರಕ್ಕೆ ನೃತ್ಯ ನಿರ್ದೇಶನ ಹಾಗೂ ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಮಾಡಲಿದ್ದಾರೆ.

ಈಗಾಗಲೇ ಮಾತಿನ ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು , ಸಾಹಸ ಹಾಗೂ ನೃತ್ಯ ಭಾಗ ಬಾಕಿ ಉಳಿದಿದೆ. ಇದೊಂದು ಎಮೋಷನಲ್ ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು , ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆಯಂತೆ.

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು , ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಂಡ ನಿರತವಾಗಿದೆ. ಚಿತ್ರ ಅತೀ ಶೀಘ್ರದಲ್ಲಿ ಸಿದ್ಧವಾಗಿ ಸೆನ್ಸರ್ ಮುಂದೆ ಹೋಗಲು ತಯಾರಿಯನ್ನು ನಡೆಸುತ್ತಿದೆ.

ಆರ್. ವಿ. ಎಸ್ ಪ್ರೊಡಕ್ಷನ್ಸ್ ಮೂಲಕ ವಿ. ಶಿವರಾಮ್ ನಿರ್ಮಾಣದಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಯುವ ಪಡೆಗಳ ಪ್ರಯತ್ನದ ಈ ಚಿತ್ರ ವರ್ಷದ ಅಂತ್ಯದಲ್ಲಿ ತೆರೆಯ ಮೇಲೆ ಬರುವ ಸಾಧ್ಯತೆ ಇದೆ.

Share This With Your Friends

Related posts