Cinisuddi Fresh Cini News 

ನವೀನ್ ಸಜ್ಜು ನಟನೆಯ ‘ಮ್ಯಾನ್ಷನ್ ಹೌಸ್ ಮುತ್ತು’ ಚಿತ್ರದ  ಡಬ್ಬಿಂಗ್ ಕಂಪ್ಲೀಟ್.

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗಾಯಕ ಕಂ ಸಂಗೀತ ನಿರ್ದೇಶಕ ನವೀನ್ ಸಜ್ಜು ಹೀರೋ ಆಗಿ ನಟಿಸಿರುವ ‘ಮ್ಯಾನ್ಷನ್ ಹೌಸ್ ಮುತ್ತು’ ಸಿನಿಮಾದ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ನವೆಂಬರ್ ನಲ್ಲಿ ಸಿನಿಮಾ ರಿಲೀಸ್ ಗೆ ತಯಾರಿ ನಡೆಯುತ್ತಿದೆ. ಕೆಮಿಸ್ಟ್ರೀ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು ಸಿನಿಮಾ ಸಾರಥಿ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಗಿರೀಶ್ ಶಿವಣ್ಣ, ಸಮೀಕ್ಷಾ ರಾಮ್, ಸತೀಶ್ ಚಂದ್ರ, ವಿಜೇತ್ ಸುಮಂತ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ಕಾಮಿಡಿ ಥ್ರಿಲ್ಲರ್ ‘ಮ್ಯಾನ್ಷನ್ ಹೌಸ್ ಮುತ್ತು’ ಸಿನಿಮಾದಲ್ಲಿ ಒಂದಷ್ಟು ಸಂದೇಶ ಸಾರುವ ಅಂಶಗಳಿದ್ದು, ಪ್ರಕೃತಿ ಪ್ರೇಮಿ ಮುತ್ತಿನ ಸುತ್ತಾ ಇಡೀ ಕಥಾನಕ ಸಾಗುತ್ತದೆ. ಕೇಸರಿ ಫಿಲ್ಮಂ ಕ್ಯಾಪ್ಟರ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನವೀನ್ ಸಜ್ಜು ತೆರೆಮೇಲೆ ಹಾಗೂ ತೆರೆಹಿಂದಿಯೂ ಕೆಲಸ ಮಾಡಿದ್ದಾರೆ. ನಾಯಕನ ಜೊತೆಗೆ ನವೀನ್ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದು, ನವೀನ್ ಕುಮಾರ್ ಚೆಲ್ಲ ಛಾಯಾಗ್ರಾಹಣ ಸಿನಿಮಾಕ್ಕಿದೆ. ಮಡಿಕೇರಿ ಸುತ್ತಮುತ್ತ ಬರೋಬ್ಬರಿ 40 ದಿನಗಳ ಕಾಲ ಸಿನಿಮಾದ ಶೂಟಿಂಗ್ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ನವೆಂಬರ್ ನಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Related posts