Cinisuddi Fresh Cini News 

ಮಾಂಜ್ರಾ ಚಿತ್ರದ ಟೀಸರ್ ಬಿಡುಗಡೆ

ಶ್ರೀ ದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಅರ್ಜುನ್ ಪೂಜೇರ ನಿರ್ಮಿಸುತ್ತಿರುವ ಮಾಂಜ್ರಾ ಚಿತ್ರದ ಚಿತ್ರದ ಟೀಸರ್ ಲಹರಿ ವೇಲು ಅವರು ಬಿಡುಗಡೆಗೊಳಿಸಿದರು.ಮುತ್ತುರಾಜ್ ರೆಡ್ಡಿ , ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

2005 ರಲ್ಲಿ ನಡೆದಂತ ನೈಜ ಕಥೆಯನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ಈಗಾಗಲೇ ಸೆನ್ಸಾರ್ ಮುಗಿದಿದ್ದು ಮುಂದಿನ ತಿಂಗಳ ಕೊನೆಯವಾರ ಅಥವಾ ಹೊಸ ವರ್ಷದಲ್ಲಿ ಚಿತ್ರವನ್ನು ಬಿಡುಗಡೆ ಗೊಳಿಸಲಾಗುವುದು.

ಚಿತ್ರಕ್ಕೆ ಸಯ್ಯದ್ ಯಾಸಿನ್ ಹಾಗು ಶರತ್ ಛಾಯಾಗ್ರಹಣ,ಡಾ.ಚಿನ್ಮಯ್ ಎಂ.ರಾವ್ ಸಂಗೀತ‌ ಮತ್ತು ಸಾಹಿತ್ಯ,ಆಕಾಶ್ ಜಾಧವ್ ಹಿನ್ನೆಲೆ ಸಂಗೀತ,ಸಂಗಮೇಶ ಕಮತಿ,ಅಂಜಿಕ್ಯ ಶಿಂಧೆ ಸಂಕಲನ,ಕೌರವ ವೆಂಕಟೇಶ್ ಸಾಹಸ, ರಮ್ಯ ಉಡುಪಿ,ರಕ್ಷಾ ಉಡುಪಿ ನೃತ್ಯ‌ನಿರ್ದೇಶನವಿದೆ. ಗಣಿ ಸಹ ಸಂಗೀತ,ಗೌತಮ್ ನಾಯ್ಕ್ ಡಿ.ಐ ಚಿತ್ರಕ್ಕಿದೆ.

ರಂಜಿತ್ ಸಿಂಗ್, ಅಪೂರ್ವ,ನಿತ್ಯರಾಜ್, ರಂಜನ್ ಪಣಗುತ್ತಿ,,,ಸಿ.ಎಸ್ ಪಾಟೀಲ್,ನಳಿನ್ ವಿದ್ಯಾಸಾಗರ್,ಮಂಜುನಾಥ ಗೌಡ ಪಾಟೀಲ್ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

Related posts