Cinisuddi Fresh Cini News 

“ಮಂಗಳವಾರ‌ ರಜಾ ದಿನ” ಚಿತ್ರದಲ್ಲಿ ‘ಪವರ್’ ಸಾಂಗ್

ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯದ ಮಂಗಳವಾರ ರಜಾದಿನ‌ ಚಿತ್ರದ ‘ ನೀನೆ ಗುರು, ನೀನೆ ಗುರಿ, ನೀನೆ ಗುರುತು’ ಹಾಡನ್ನು ಅಭಿಷೇಕ್ ಅಂಬರೀಶ್ ಗಣರಾಜ್ಯೋತ್ಸವದ ದಿನ ಬಿಡುಗಡೆ ಮಾಡಿದ್ದಾರೆ.  ‘ತಂದೆ – ಮಗನ‌ ಭಾಂದವ್ಯದ ಈ ಹಾಡನ್ನು ಗೌಸ್ ಫೀರ್ ಚೆನ್ನಾಗಿ ಬರೆದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೊಗಸಾಗಿ ಹಾಡಿದ್ದಾರೆ.  ಈ ಹಾಡು ಕೇಳಿದ ಎಲ್ಲರಿಗೂ ಅವರ ತಂದೆ ನೆನಪಾಗುತ್ತಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಅಭಿಷೇಕ್ ಅಂಬರೀಶ್ ಶುಭಕೋರಿದ್ದಾರೆ.

ತ್ರಿವರ್ಗ ಫಿಲಂಸ್ ‌ನಿರ್ಮಾಣದ, ಯುವಿನ್ ನಿರ್ದೇಶಿಸಿರುವ ಈ ಚಿತ್ರ ಇದೇ ಫೆಬ್ರವರಿ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಋತ್ವಿಕ್ ಮುರಳಿಧರ್ ಸಂಗೀತ ನೀಡಿದ್ದು, ಈಗಾಗಲೇ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಗೊಂಡಿದೆ.

Related posts