Cinisuddi Fresh Cini News 

ಖಾಕಿ ತೊಟ್ಟು “5ಡಿ”ಗನ್ ಹಿಡಿದ ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್

ಬಣ್ಣದ ಪ್ರಪಂಚದ ಆಕರ್ಷಣೆ ಬಹಳ ವಿಚಿತ್ರವಾದದ್ದು , ಯಾವಾಗ , ಯಾರನ್ನ , ಯಾವ ರೀತಿ ಬಳಸಿಕೊಳ್ಳುತ್ತದೆ ಅನ್ನೋದನ್ನ ಹೇಳುವುದೇ ಕಷ್ಟ. ಸರಿ ಸುಮಾರು ಎರಡು ದಶಕ7 ಗಳಿಂದಲೂ ಚಿತ್ರೋದ್ಯಮದಲ್ಲಿ ಘಟಾನುಘಟಿಗಳ ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡು ಬೆಳೆದವರು ಮಾಲೂರು ಶ್ರೀನಿವಾಸ್. ಈಗ “5ಡಿ” ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಾಲೂರು ಗನ್ ಹಿಡಿದು ಪೊಲೀಸ್ ಅಧಿಕಾರಿಯಾಗಿ ಸದ್ದು ಮಾಡಲು ಸಿದ್ಧರಾಗಿದ್ದಾರೆ.

ಬಹುತೇಕ ಸ್ಟಾರ್ ನಟರು ಹಾಗೂ ಯುವ ಪ್ರತಿಭೆಗಳಿಗೂ ಕೂಡ ನೃತ್ಯ ನಿರ್ದೇಶನ ಮಾಡಿ ಸೈ ಎನಿಸಿಕೊಂಡ ಮಾಲೂರ್ ಶ್ರೀನಿವಾಸ್ ರವರು ನವರಸ ನಾಯಕ ಜಗ್ಗೇಶ್ , ಎಸ್. ನಾರಾಯಣ್ ಅವರಿಗೆ ಬಹಳ ಆತ್ಮೀಯರು ಕೂಡ , ಈಗಾಗಲೇ ಐನೂರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ ಖ್ಯಾತಿ ಹೊಂದಿರುವ ಶ್ರೀನಿವಾಸ್ ಹಲವಾರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸಿ ಉತ್ತಮ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಇದಲ್ಲದೆ ತಮ್ಮದೇ ಆದ ನೃತ್ಯ ತರಬೇತಿ ಶಾಲೆಯನ್ನು ಕೂಡ ತೆರೆದಿದ್ದು ಹಲವಾರು ವಿದ್ಯಾರ್ಥಿಗಳಿಗೆ ನಟನೆ , ನಿರ್ದೇಶನ ಸೇರಿದಂತೆ ಹಲವು ವಿಭಾಗಗಳ ತರಬೇತಿಯನ್ನು ವಿವಿಧ ಚಿತ್ರೋದ್ಯಮದ ಗಣ್ಯರಿಂದ ಕೊಡಿಸಿದ್ದಾರೆ. ಹಾಗೆಯೇ ಕಿರುತೆರೆ ಹಾಗೂ ಸಿನಿಮಾಗಳಿಗೆ ಅವಕಾಶವನ್ನು ಕೂಡ ಕೊಡಿಸಿದ್ದಾರೆ.

ಇವೆಲ್ಲವೂ ಒoದು ಭಾಗವಾದರೆ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಟನೆಯಲ್ಲೂ ಕೂಡ ಸೈ ಎನಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಆಗಾಗ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಖಡಕ್ ಪೊಲೀಸ್ ಅಧಿಕಾರಿಯಾಗಿ ಪೂರ್ಣ ಪ್ರಮಾಣದ ಚಿತ್ರದಲ್ಲಿ ತಮ್ಮ ಖದರ್ ತೋರಿಸಲು ಸಿದ್ಧರಾಗಿದ್ದಾರೆ.

ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್ ರವರ ಮೆಚ್ಚಿನ ಗುರುಗಳಾದ ಎಸ್. ನಾರಾಯಣ್ ಸಾರಥ್ಯದಲ್ಲಿ ಚಿತ್ರೀಕರಣಗೊಳ್ಳುತ್ತಿರುವ “5ಡಿ” ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗನ್ ಹಿಡಿದಿದ್ದಾರೆ. ಇದೇ ಮೊದಲ ಬಾರಿಗೆ ಗನ್ ಹಿಡಿದು ಪೊಲೀಸ್ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಎಸ್ .ನಾರಾಯಣ್ ನಿರ್ದೇಶನದ ಬಹುತೇಕ ಚಿತ್ರಗಳನ್ನು ಮಾಲೂರು ಶ್ರೀನಿವಾಸ್ ರವರೇ ನೃತ್ಯ ನಿರ್ದೇಶನ ಮಾಡುತ್ತಿದ್ದು , ಈ ಚಿತ್ರದಲ್ಲಿ ನಟನೆಯ ಜೊತೆಗೆ ನೃತ್ಯ ನಿರ್ದೇಶನ ಕೂಡ6 ಮಾಡುತ್ತಿರುವುದು ವಿಶೇಷ. ಮಾಲೂರು ಶ್ರೀನಿವಾಸ್ ಪ್ರಕಾರ ಇದು ಮೊದಲ ಪೊಲೀಸ್ ಪಾತ್ರವಾಗಿದೆ.

ಈ ರೀತಿಯ ಪಾತ್ರ ಮಾಡಿರಲಿಲ್ಲ. ನಾನೊಬ್ಬ ತನಿಖಾ ಆಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈಗಾಗಲೇ 3 ದಿನಗಳ ಕಾಲ ನನ್ನ ದೃಶ್ಯಗಳನ್ನು ಚಿತ್ರೀಕರಣ ಮಾಡಿ ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ನನ್ನಗೊoದು ಇಂಟ್ರಡಕ್ಷನ್ ಸೀನ್ ಕೂಡ ಇದ್ದು ತೆರೆಯ ಮೇಲೆ ಬೇರೆ ರೀತಿ ಕಾಣುತ್ತೇನೆ ಎಂಬ ಬರವಸೆ ಇದೆಯೆಂತೆ.

ಇಂಥದ್ದೊಂದು ವಿಭಿನ್ನ ಪಾತ್ರವನ್ನು ಪಾತ್ರವನ್ನು ಎಸ್. ನಾರಾಯಣ್ ಸರ್ ನೀಡಿದ್ದಾರೆ. ಅವರು ಕರೆದಾಗ ಇಲ್ಲ ಎನ್ನುವುದಕ್ಕೆ ಆಗಲಿಲ್ಲ ಹಾಗಾಗಿ ಒಪ್ಪಿಕೊಂಡೆ , ಖಂಡಿತ ನನ್ನ ಪಾತ್ರ ನಿಮಗೆ ಇಷ್ಟ ಆಗುತ್ತದೆ. ಮುಂದೆ ಕೂಡ ಉತ್ತಮ ಪಾತ್ರಗಳು ಬಂದರೆ ಪರದೆ ಮೇಲೆ ನಿಮ್ಮನ್ನು ರಂಜಿಸುತ್ತೇನೆ ಎಂದು ಹೇಳಿದ್ದಾರೆ.

ಈಗಾಗಲೇ ತೆರೆಯ ಹಿಂದೆ ನೃತ್ಯ ನಿರ್ದೇಶಕರಾಗಿ ಗಮನಸೆಳೆದಿರುವ ಮಾಲೂರು ಶ್ರೀನಿವಾಸ್ ಹಲವಾರು ವಾಹಿನಿಗಳಲ್ಲಿ ರಿಯಾಲಿಟಿ ಶೋಗಳಲ್ಲಿಯೂ ಹೆಸರು ಮಾಡಿದ್ದು , ಈಗ ಬೆಳ್ಳಿಪರದೆ ಮೇಲೆಯೂ ಸೈ ಎನಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಒಟ್ಟಾರೆ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡ ಮಾಲೂರು ಶ್ರೀನಿವಾಸ್ ತೆರೆಹಿಂದೆ ಹೇಗೆ ಹೆಸರು ಮಾಡಿದಾರೋ , ಅದೇ ರೀತಿ ತೆರೆಯ ಮುಂದೆಯೂ ಕೂಡ ಮಿಂಚುವಂತಾಗಲಿ.

Related posts