Cinisuddi Fresh Cini News mollywood 

2022ರ ಮಾಲಿವುಡ್ ಬಿಗ್ ಬ್ಲಾಕ್ ಬ್ಲಸ್ಟರ್ ಸಿನಿಮಾ ‘ಜಯ ಜಯ ಜಯ ಜಯ ಹೇ’

ಬಾಸಿಲ್ ಜೋಸೆಫ್, ದರ್ಶನ ರಾಜೇಂದ್ರನ್ ನಟನೆಯ ‘ಜಯ ಜಯ ಜಯ ಜಯ ಹೇ’ ಸಿನಿಮಾ ಮಾಲಿವುಡ್ ಅಂಗಳದಲ್ಲಿ ಅತಿದೊಡ್ಡ ಗೆಲುವನ್ನು ತನ್ನದಾಗಿಸಿಕೊಂಡಿದೆ. ಎಲ್ಲೆಡೆ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರ್ತಿದ್ದು, ಈ ವರ್ಷದ ಮಾಲಿವುಡ್ ಅಂಗಳದ ಮೆಗಾ ಫ್ಯಾಮಿಲಿ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ ಈ ಚಿತ್ರ. ಅಕ್ಟೋಬರ್ 28ರಂದು ಈ ಸಿನಿಮಾ ಕೇರಳದಾದ್ಯಂತ ತೆರೆಕಂಡಿತ್ತು. ಬಿಡುಗಡೆಯಾದ ದಿನದಿಂದಲೇ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳಿಂದ ಬಹು ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇಲ್ಲಿವರೆಗೆ ಬರೋಬ್ಬರಿ 35 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮಲಯಾಳಂ ಚಿತ್ರರಂಗದ ಈ ವರ್ಷದ ಬಿಗ್ ಬ್ಲಾಕ್ ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ.

ಈ ಚಿತ್ರವನ್ನು ಚೀರ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಲಕ್ಷ್ಮೀ ವಾರಿಯರ್, ಗಣೇಶ್ ಮೆನನ್ ನಿರ್ಮಾಣ ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಸೂಪರ್ ಸಕ್ಸಸ್ ಆಗುವ ಮೂಲಕ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕೀರ್ತಿಯನ್ನು ಚೀರ್ಸ್ ಎಂಟಟೈನ್ಮೆಂಟ್ ತನ್ನದಾಗಿಸಿಕೊಂಡಿದೆ. ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್ ಹಾಗೂ ಬೇಡಿಕೆ ಕಂಡು ನವೆಂಬರ್ 11ರಂದು ಬೇರೆ ರಾಜ್ಯಗಳಲ್ಲೂ ಸಿನಿಮಾ ಬಿಡುಗಡೆ ಮಾಡಲಾಗಿದೆ. ಅಲ್ಲಿಯೂ ಕೂಡ ಭರ್ಜರಿ ಒಪನಿಂಗ್ ತನ್ನದಾಗಿಸಿಕೊಳ್ಳುವ ಮೂಲಕ ಗೆಲುವಿನ ಓಟವನ್ನು ಮುಂದುವರೆಸಿದೆ.

‘ಜಯ ಜಯ ಜಯ ಜಯ ಹೇ’ ಫ್ಯಾಮಿಲಿ ಎಂಟಟೈನೆಂಟ್ ಸಿನಿಮಾ. ರಾಜೇಶ್ ಮತ್ತು ಜಯ ದಂಪತಿಗಳ ಜೀವನದ ಸುತ್ತ ಹೆಣೆಯಲಾದ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಅತ್ಯಂತ ಪ್ರಸ್ತುತ ಸಬ್ಜೆಕ್ಟ್ ಒಳಗೊಂಡ ಈ ಚಿತ್ರವನ್ನು ನಿರ್ದೇಶಕ ವಿಪಿನ್ ದಾಸ್ ಕಟಿಕೊಟ್ಟ ಪರಿಗೆ, ಬಾಸಿಲ್ ಜೋಸೆಫ್, ದರ್ಶನ ರಾಜೇಂದ್ರನ್ ಅಮೋಘ ಅಭಿನಯ ಪ್ರೇಕ್ಷಕರನ್ನು ಹಿಡಿದಿಟ್ಟಿದೆ. ಚಿತ್ರದಲ್ಲಿ ಆನಂದ್ ಮನ್ಮಧನ್, ಅಜೀಜ್ ನೆಡುಮಂಗಡ, ಸುದೀರ್ ಪರವೂರ್ ಒಳಗೊಂಡ ತಾರಾಗಣವಿದೆ. ಬಬ್ಲು ಅಜು ಕ್ಯಾಮೆರಾ ವರ್ಕ್, ಜಾನ್ ಕುಟ್ಟಿ ಸಂಕಲನ, ಅಂಕಿತ್ ಮೆನನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Related posts