Cinisuddi Fresh Cini News 

ವಾರ ರಾಜ್ಯಾದಾದ್ಯಂತ ಚಿತ್ರಮಂದಿರಗಳಲ್ಲಿ ‘ಮಜ್ಜಿಗೆ ಹುಳಿ’

ಮಜ್ಜಿಗೆ ಹುಳಿಗೂ ಮಧುಚಂದ್ರಕ್ಕೆ ಹೋಗುವ ಜೋಡಿಗಳಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ. ಆದರೆ ನಿರ್ದೇಶಕ ರವೀಂದ್ರ ಕೊಟಕಿ ಅವರು ಇವೆರಡಕ್ಕೂ ಹೊಸ ಅರ್ಥವನ್ನು ಕೊಡಲು ಈ ವಾರ ರಾಜ್ಯಾದಾದ್ಯಂತ ಚಿತ್ರಮಂದಿರಗಳಿಗೆ ಮಜ್ಜಿಗೆ ಹುಳಿ ತರುತ್ತಿದ್ದಾರೆ.

ಸಚಿತ್ ಫಿಲಂಸ್‍ನ ವೆಂಕಟ್ ಅವರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮಜ್ಜಿಗೆ ಹುಳಿಯನ್ನು ಪ್ರೇಕ್ಷಕರಿಗೆ ಬಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಈ ವಿಷಯವನ್ನು ತಿಳಿಸಲೆಂದೇ ಚಿತ್ರತಂಡವು ಮಲ್ಲೇಶ್ವರಂನ ಎಸ್‍ಆರ್‍ವಿ ಥಿಯೇಟರ್‍ನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು.

ಹಾರರ್ ಹಾಗೂ ಥ್ರಿಲ್ಲರ್ ಕಥೆಯೊಂದಿಗೆ ಮಜ್ಜಿಗೆ ಹುಳಿಯ ಸವಿಯಷ್ಟೇ ಚಿತ್ರವನ್ನು ತಯಾರಿಸಿರುವ ರವೀಂದ್ರ ಕೊಟಕಿ ನವದಂಪತಿಗಳು ತಂಗಿದ್ದ ಕೋಣೆಯಲ್ಲಿ ನಡೆಯುವ ಕಥೆಯನ್ನು ಹೇಳಲು ಹೊರಟಿದ್ದಾರೆ. ದೀಕ್ಷಿತ್ ವೆಂಕಟೇಶ್ ಮತ್ತು ನಟಿ ರೂಪಿಕಾ ಅವರು ಈ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ನಟಿಸಿದ್ದು, ರಾಮಚಂದ್ರ ಹಾಗೂ ವೈ.ರಘುರಾಜ್ ಚಿತ್ರಕ್ಕೆ ಬಂಡವಾಳ ಹೂಡಿದರೆ, ಶಂಕರ್‍ರಾವ್ ಇಂಪಾದ ಸಂಗೀತವನ್ನು ಒದಗಿಸಿದ್ದಾರೆ.

ನಿರ್ದೇಶಕ ರವೀಂದ್ರ ಕೊಟಕಿ ಮಾತನಾಡಿ, ಇದು ಹೆಸರಿಗಷ್ಟೇ ಮಜ್ಜಿಗೆಹುಳಿ ಆದರೆ ಇದರಲ್ಲಿ ಮಾಂಸಾಹಾರಿ ಪ್ರಿಯರಿಗೆ ಭರ್ಜರಿ ಬಾಡೂಟವೂ ಇದೆ. ಹೊಸದಾಗಿ ಮದುವೆಯಾದ ದಂಪತಿಗಳು ಫಸ್ಟ್ ನೈಟ್ ಮಾಡಿಕೊಳ್ಳಲು ಹೊಟೇಲ್ ಒಂದಕ್ಕೆ ಬಂದು ತಂಗುತ್ತಾರೆ, ಅವರೊಂದಿಗೆ ಆ ಹೋಟೇಲ್‍ನಲ್ಲಿ 28 ಮಂದಿ ವಾಸವಾಗಿರುತ್ತಾರೆ. ಆ ರಾತ್ರಿ ಹೊಟೇಲ್‍ನಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಮಜ್ಜಿಗೆಹುಳಿಯಲ್ಲಿ ಪ್ರೇಕ್ಷಕರಿಗೆ ತೋರಿಸಲಿದ್ದೇವೆ ಎಂದು ಹೇಳಿದರು.

ನಾಯಕಿ ರೂಪಿಕಾ ಮಾತನಾಡಿ, ನಾನು ಇದುವರೆಗೂ ಗಂಭೀರ ಪಾತ್ರಗಳಲ್ಲಿ ನಟಿಸಿದ್ದೆ, ಮಜಾ ಟಾಕೀಸ್‍ನಲ್ಲಿ ನಟಿಸಿದ್ದ ನಂತರ ಕಾಮಿಡಿಯ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ತಿಳಿದುಕೊಂಡೆ. ಈ ಚಿತ್ರದಲ್ಲಿ ಗಂಡನ ರಕ್ಷಣೆ ಮಾಡುವ ಹೆಂಡತಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನೃತ್ಯ ಅಂದರೆ ನನಗೆ ತುಂಬಾ ಇಷ್ಟ.

ಈ ಚಿತ್ರದಲ್ಲಿ ಟಪ್ಪಾಂಗುಚಿ ಹಾಡಿಗೆ ಸಖತ್ತಾಗಿ ನೃತ್ಯ ಮಾಡಿದ್ದೇನೆ ಎಂದು ಹೇಳಿದರು. ನಾಯಕ ವೆಂಕಟೇಶ್ ಮಾತನಾಡಿ, ನನ್ನದು ಇದರಲ್ಲಿಸಾಫ್ಟ್ ವೇರ್ ಇಂಜಿಯರ್ ಪಾತ್ರಘಿ. ಕೊಳ್ಳೇಗಾಲದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿದ್ದೆ, ಅದರಲ್ಲಿ ಸಾಫ್ಟ್ ಕಾರ್ನರ್ ಹುಡುಗನ ಪಾತ್ರ.

ಚಿತ್ರದಲ್ಲಿ ಬರುವ 28 ಪಾತ್ರಗಳೂ ಪ್ರೇಕ್ಷಕರನ್ನು ಕಾಡಲಿವೆ. ಹಣ ಕೊಟ್ಟು ಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಮಜ್ಜಿಗೆ ಹುಳಿಯನ್ನು ಸವಿದಂತಹ ಅನುಭವ ನೀಡಲಿದೆ ಎಂದರು. ಚಿತ್ರದ ನಿರ್ಮಾಪಕ ರಘುರಾಜ ವೈ ಮಾತನಾಡಿ, ನನಗೆ ಮೊದಲಿನಿಂದಲೂ ಒಂದು ಉತ್ತಮ ಚಿತ್ರವನ್ನು ನಿರ್ಮಿಸಬೇಕೆಂಬ ಆಸೆಯಿತ್ತು. ನಿರ್ದೇಶಕ ರವೀಂದ್ರ ಕೊಟಕಿ ಹೇಳಿದ ಕಾನ್ಸೆಪ್ಟ್ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ ಎಂದು ಹೇಳಿದರು.

ಚಿತ್ರದ ಮತ್ತೊಬ್ಬ ನಿರ್ಮಾಪಕ ರಾಮಚಂದ್ರ ಮಜ್ಜಿಗೆಹುಳಿಯ ವೈಶಿಷ್ಟ್ಯ ಗಳ ಬಗ್ಗೆ ವಿವರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಇಡೀ ಚಿತ್ರತಂಡ ಹಾಜರಿದ್ದು ಚಿತ್ರದ ವಿಶೇಶತೆಗಳ ಬಗ್ಗೆ ಹೇಳಿಕೊಂಡಿತು. ಮಜ್ಜಿಗೆ ಹುಳಿಗೂ ಮಧುಚಂದ್ರಕ್ಕೆ ಹೋಗುವ ನವ ಜೋಡಿಗೂ ಏನು ಸಂಬಂಧ ಎಂದು ತಿಳಿಯಬೇಕಾದರೆ ಚಿತ್ರಮಂದಿರಕ್ಕೆ ಹೋಗಲೇಬೇಕು.

Related posts