Cinisuddi Fresh Cini News Tv / Serial 

ಜೀ಼ ಕನ್ನಡದಲ್ಲಿ “ಮಹರ್ಷಿ ವಾಣಿ”ಗೆ 6 ವರ್ಷಗಳ ಮೈಲಿಗಲ್ಲು

ಕನ್ನಡದ ಜನಪ್ರಿಯ ಕಿರುತೆರೆ ವಾಹಿನಿ ಜೀ಼ ಕನ್ನಡದಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿರುವ “ಮಹರ್ಷಿವಾಣಿ” ಯಶಸ್ವಿ ಆರು ವರ್ಷಗಳನ್ನು ಪೂರೈಸಿದೆ.

ಲಾಕ್ಡೌನ್ ಕಾರಣದಿಂದ 45 ದಿನಗಳ ಕಾಲ ಪ್ರಸಾರ ಸ್ಥಗಿತಗೊಂಡಿದ್ದ ಈ ಜನಪ್ರಿಯ ಕಾರ್ಯಕ್ರಮ ಜೂನ್ 1ರಿಂದ ಮಹರ್ಷಿವಾಣಿ ಪ್ರತಿನಿತ್ಯ ಬೆಳಿಗ್ಗೆ 8ರಿಂದ 9.30ವರೆಗೆ ಪ್ರಸಾರವಾಗುತ್ತಿದೆ. ಜನರ ಧ್ವನಿಯಾಗಿ, ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಪ್ರತಿಧ್ವನಿಯಾಗಿ ಈ ಕಾರ್ಯಕ್ರಮ ಎಲ್ಲರನ್ನೂ ಗೆದ್ದಿದೆ.

ಈ ಕಾರ್ಯಕ್ರಮದಲ್ಲಿ ದೇಶದ ಮೂಲೆ ಮೂಲೆಗಳಿಂದ ಜನರು ಕೇಳುವ ಪ್ರಶ್ನೆಗಳಿಗೆ ಡಾ.ಮಹರ್ಷಿ ಆನಂದ್ ಗುರೂಜಿ ಅವರು ಉತ್ತರ ನೀಡುತ್ತಾರೆ. ಜೀ಼ ಕನ್ನಡದ ಅಸಂಖ್ಯ ವೀಕ್ಷಕರು ಪ್ರತಿನಿತ್ಯ ಗುರೂಜಿ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕರಾಗಿರುತ್ತಾರೆ.

ಇಲ್ಲಿಯವರೆಗೆ 1900ಕ್ಕೂ ಹೆಚ್ಚು ಸಂಚಿಕೆಗಳನ್ನು ನಡೆಸಿಕೊಟ್ಟಿರುವ ಡಾ.ಮಹರ್ಷಿ ಆನಂದ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಸಂಖ್ಯ ಜನರು ತಮ್ಮ ಬದುಕನ್ನು ಹಸನಾಗಿಸಿಕೊಂಡಿದ್ದಾರೆ. 650ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿರುವ ಗುರೂಜಿ ಅವರ ಕುರಿತು ಆರರಿಂದ ಅರವತ್ತರ ಎಲ್ಲರಿಗೂ ಪ್ರೀತಿ.

ಲಕ್ಷಾಂತರ ಮಂದಿಗೆ ಕಿರುತೆರೆಯಲ್ಲಿ ಪರಿಹಾರ ಸೂಚಿಸಲು ಸಾಧ್ಯವಿಲ್ಲವೆಂದೇ ಅವರು ಸಾಮೂಹಿಕ ಯಾಗಗಳನ್ನು ಆಯೋಜಿಸುತ್ತಾರೆ. ಅಲ್ಲದೆ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಬೃಹತ್ ಶನೇಶ್ವರ ಯಾಗದಲ್ಲಿ ಅಸಂಖ್ಯ ಭಕ್ತರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಜನರು ತಮ್ಮ ಒತ್ತಡದ ಬದುಕಿನ ನಡುವೆ ಸಾಂತ್ವನವನ್ನು ರಾಶಿ ಭವಿಷ್ಯದಿಂದ ಪಡೆಯುತ್ತಾರೆ. ಅದರ ಮೂಲಕ ತನ್ನ ನಡೆನುಡಿ ಸರಿಪಡಿಸಿಕೊಳ್ಳುತ್ತಾರೆ. ಅವರೆಲ್ಲರನ್ನೂ ಮಹರ್ಷಿವಾಣಿ ಸರಿದಾರಿಯಲ್ಲಿ ಕೊಂಡೊಯ್ಯುತ್ತದೆ.

ಡಾ.ಮಹರ್ಷಿ ಆನಂದ್ ಗುರೂಜಿ ಜನರಿಗೆ ಬರೀ ಸಾಂತ್ವನ ಹೇಳುವುದಲ್ಲ. ಅವರ ನೋವಿಗೆ ದನಿಯಾಗಿದ್ದಾರೆ. ಧಾರ್ಮಿಕ ವಿಚಾರಗಳೇ ಅಲ್ಲದೆ ಕನ್ನಡಪರ ಸಂಘಟನೆಗಳು, ಹೋರಾಟಗಳಲ್ಲಿ ಹಾಗೂ ರೈತ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಸಂಘಟನೆಗಳ ಹೋರಾಟಗಳಲ್ಲೂ ಸಕ್ರಿಯರಾಗಿ ತೊಡಗಿಕೊಳ್ಳುವ ಮೂಲಕ ಜನರ ನೋವಿಗೆ ಸದಾ ಸ್ಪಂದಿಸುವ ಕ್ರಿಯಾಶೀಲರಾಗಿದ್ದಾರೆ.

ಪ್ರಸ್ತುತ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾಗಿದ್ದು ದೇವಾಲಯಗಳ ಅಭಿವೃದ್ಧಿಯಲ್ಲೂ ತೊಡಗಿಕೊಂಡಿದ್ದಾರೆ.

Share This With Your Friends

Related posts