Cinisuddi Fresh Cini News 

ಈ ವಾರ ತೆರೆ ಮೇಲೆ ಅನಾವರಣವಾಗಲಿದೆ ಮಾಹಾಕಾವ್ಯ’

ಎಸ್.ಆರ್.ಕೆ ಪಿಕ್ಚರ್ಸ್ ಲಾಂಛನದಲ್ಲಿ ವಿಜಯ ಎಸ್ ಅವರು ನಿರ್ಮಿಸಿರುವಮಾಹಾಕಾವ್ಯ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶ್ರೀದರ್ಶನ್ ಪರಿಕಲ್ಪನೆ, ಚಿತ್ರಕಥೆ, ನಿರ್ದೇಶನದ ಈ ಚಿತ್ರಕ್ಕೆ ಮನೋರಂಜನ್ ಪ್ರಭಾಕರ್ ಸಂಗೀತ ನೀಡಿದ್ದಾರೆ. ಸಂಗೀತ ರಾಜ ಹಿನ್ನಲೆ ಸಂಗೀತ ನೀಡಿದ್ದಾರೆ.

ಮುತ್ತುರಾಜ್ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನವಿರುವ ಈ ಚಿತ್ರಕ್ಕೆ ವಸಂತ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ. ಶ್ರೀದರ್ಶನ್ ಹಾಗೂ ಪುರುಷೋತ್ತಮ್ ಕಣಗಾಲ್ ಸಂಭಾಷಣೆ ಬರೆದಿದ್ದಾರೆ.

ಶ್ರೀದರ್ಶನ್, ರಶ್ಮಿ ಪ್ರಭಾಕರ್, ರಾಮಕೃಷ್ಣ, ಅನಂತವೇಲು, ಲಕ್ಷ್ಮೀ ಭಟ್, ವಲ್ಲಭ್, ಗಿರೀಶ್, ಗಣೇಶ್ ರಾವ್, ಅರವಿಂದ್, ಸ್ನೇಹ ಸ್ವಾಭಿಮಾನಿ, ನಾಗರಾಜ್ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share This With Your Friends

Related posts