Cinisuddi Fresh Cini News 

ಸ್ಯಾಂಡಲ್‍ವುಡ್‍ಲ್ಲೊಂದು ಪುರಾಣಿಕ ‘ಮಹಾಕಾವ್ಯ’

ಚಂದನವನದಲ್ಲಿ 80, 90 ರ ದಶಕಗಳಲ್ಲಿ ಪೌರಾಣಿಕ, ಇತಿಹಾಸ, ಸಾಹಿತ್ಯಕ ಅಂಶವುಳ್ಳ ಚಿತ್ರಗಳು ಬಹಳಷ್ಟು ಬರುತ್ತಿದ್ದವು, ಕಾಲ ಬದಲಾದಂತೆ ಈಗ ಸ್ಯಾಂಡಲ್‍ವುಡ್‍ನಲ್ಲಿ ಆ್ಯಕ್ಷನ್, ಲವ್, ಹಾರರ್ ಚಿತ್ರಗಳ ಹಾವಳಿ ಹೆಚ್ಚಾಗಿದ್ದು, ಪೌರಾಣಿಕ ಕಥಾಹಂದರವುಳ್ಳ ಸಿನಿಮಾಗಳು ನಿರ್ಮಾಣವಾಗುವುದೇ ಕಡಿಮೆಯಾಗಿದೆ. ನಿರ್ಮಾವಾದರು ಯುವ ಪ್ರೇಕ್ಷಕರಿಗೆ ಆ ಕಥೆಯು ರುಚಿಸುವುದೇ ಇಲ್ಲ.
ಪೌರಾಣಿಕ ಕಥೆಗಳನ್ನು ಈಗಿನ ಟ್ರೆಂಡ್‍ಗೂ ತಲುಪಿಸಬೇಕೆಂಬ ದೃಷ್ಟಿಯಿಂದ ಕನ್ನಡ ಸಾಹಿತ್ಯದ ಮೇಲಿನ ಪ್ರೇಮದಿಂದ ಶ್ರೀ ದರ್ಶನ ಅವರು ಮಹಾಕಾವ್ಯ ಎಂಬ ಪೌರಾಣಿಕ ಹಂದರವಿರುವ ಚಿತ್ರವನ್ನು ನಿರ್ಮಿಸಿದ್ದಾರೆ.

ಕನ್ನಡದ ಆದಿ ಕವಿಗಳಾದ ಪಂಪ, ಪೊನ್ನ, ರನ್ನರ ಮಹಾಕಾವ್ಯಗಳ ಸಂಗಮದಂತಿರುವ ಈ ಚಿತ್ರವು ಏಪ್ರಿಲ್ 26 ರಂದು ಬೆಳ್ಳಿಪರದೆಗೆ ಬರುತ್ತಿದ್ದು, ಕನ್ನಡ, ಹಳಗನ್ನಡ ಎರಡನ್ನೂ ಬಳಸಿಕೊಂಡು ಮಹಾಕಾವ್ಯವನ್ನು ರಚಿಸಿದ್ದು ಪ್ರೇಕ್ಷಕರ ಗಮನ ಸೆಳೆಯುವಂತಿದೆ.

ಚಿತ್ರ ಬಿಡುಗಡೆಯ ವಿಷಯವನ್ನು ತಿಳಿಸಲೆಂದೆ ಚಿತ್ರತಂಡವು ಮೊನ್ನೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ನಟ ಅನಂತವೇಲು ಅವರು ಮಾತನಾಡಿ, ಇತ್ತೀಚೆಗೆ ಡಬ್ಬಿಂಗ್ ಚಿತ್ರಗಳ ಹಾವಳಿಯೇ ಚಿತ್ರರಂಗದಲ್ಲಿ ಹೆಚ್ಚಾಗಿದ್ದುಘಿ, ಕಾದಂಬರಿ ಆಧಾರಿತ ಸಿನಿಮಾಗಳು ಬರುವುದೇ ಕಡಿಮೆಯಾಗಿದೆ.

ನಿರ್ದೇಶಕ ಶ್ರೀದರ್ಶನ ಅವರು ಮಹಾಕಾವ್ಯದ ಮೂಲಕ ನಮ್ಮ ಕರುನಾಡಿನ ಕಂಪನ್ನು ಪಸರಿಸಲು ಹೊರಟಿದ್ದು ಇದರಲ್ಲಿ ಮಹಾಭಾರತದ ಕಥೆ ಏನು, ಭೀಮ, ದುರ್ಯೋಧನ ಯಾರು ಎಂಬುದನ್ನು ಮಕ್ಕಳಿಗೆ ತಿಳಿಸುವ ದೃಷ್ಟಿಯಿಂದ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಅವರಂತೆ ಚಿತ್ರರಂಗಕ್ಕೆ ಬರುವವರು ಪುಸ್ತಕ, ಕಥೆಗಳನ್ನು ಓದುವುದರ ಮೂಲಕ ಕನ್ನಡಕ್ಕೆ ಮತ್ತಷ್ಟು ಪೌರಾಣಿಕ ಚಿತ್ರಗಳನ್ನು ಕೊಡುವಂತಾಗಲಿ ಎಂದರು.

ನಿರ್ದೇಶಕ ಹಾಗೂ ನಟ ಶ್ರೀದರ್ಶನ್ ಮಾತನಾಡಿ, ನಮ್ಮ ಹಿಂದೂ ಸಂಸ್ಕøತಿಯಲ್ಲಿ ರಾಮಾಯಣ, ಮಹಾಭಾರತ ಕಾವ್ಯಗಳು ಪವಿತ್ರವಾದದ್ದು ಜನರು ಅವನ್ನು ಶ್ರದ್ಧೆಯಿಂದ ಪೂಜಿಸುತ್ತಾರೆ. ಈ ಚಿತ್ರದಲ್ಲಿ ನಾವು ರನ್ನನ ಗದಾಯುದ್ಧ, ಪಂಪನ ಮಹಾಭಾರತ ಹಾಗೂ ಪೊನ್ನನ ಗ್ರಂಥಗಳನ್ನು ಅಳವಡಿಸಿಕೊಂಡು ಕಥೆಯನ್ನು ಮಾಡಿದ್ದೇವೆ, ಛಾಯಾಗ್ರಾಹಕ ಮುತ್ತುರಾಜು ಅವರು ಇಡೀ ಚಿತ್ರವನ್ನು ಅದ್ಭುತವಾಗಿ ತಮ್ಮ ಕ್ಯಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ ಎಂದರು.

ಶ್ರೀದರ್ಶನ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಶ್ರೀದರ್ಶನ ರಶ್ಮಿ ಪ್ರಭಾವಿಕ, ಅನಂತವೇಲು, ಗಣೇಶ್‍ರಾವ್ ಹಾಗೂ ಇತರ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಮನೋರಂಜನ್ ಪ್ರಭಾಕರ ಅವರ ಸಂಗೀತ ನಿರ್ದೇಶನದಲ್ಲಿ 37ಕಾವ್ಯಗಳನ್ನು ಈ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಚರಿತ್ರೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂಬ ಸದುದ್ದೇಶದಿಂದ ಶ್ರೀದರ್ಶನ ಈ ಸಿನಿಮಾ ಮಾಡಿರುವ ಈ ಚಿತ್ರಕ್ಕೆ ಯುವ ಪ್ರೇಕ್ಷಕರಿಂದ ಉತ್ತಮ ಬೆಂಬಲ ದೊರೆತು ಮಹಾಕಾವ್ಯ ದೊಡ್ಡ ಯಶಸ್ಸು ಕಾಣುವಂತಾಗಲಿ.

Share This With Your Friends

Related posts