Cinisuddi Fresh Cini News 

“ಮದುವೆ ಮಾಡ್ರಿ ಸೆರಿ ಹೋಗ್ತಾನೆ” ಸಾoಗ್ಸ್ ರೀಲೀಸ್

ಗೋಪಿ ಕೆರೂರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಮದುವೆ ಮಾಡ್ರೀ ಸರಿಹೋಗ್ತಾನೆ. ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳ ಸಿಡಿ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬಿಡುಗಡೆಯಾಯಿತು.

ಯಾವುದೇ ಕೆಲಸ ಮಾಡದೆ ಸೋಮಾರಿಯಾಗಿ ತಿರುಗಾಡಿಕೊಂಡು ಊರ ಜನರಿಂದ ಬೈಸಿಕೊಳ್ಳುವ ನಾಯಕನ ಬದುಕಿನಲ್ಲಿ ಪ್ರೀತಿ ಎನ್ನುವುದು ಹುಟ್ಟಿಕೊಂಡಾಗ, ಆತನ ಗುಣದಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ, ಆತ ಎಲ್ಲರಿಂದಲೂ ಹೇಗೆ ಭೇಷ್ ಅನ್ನಿಸಿಕೊಳ್ಳುತ್ತಾನೆ ಎಂದು ನನ್ನ ಪಾತ್ರದ ಮೂಲಕ ಹೇಳಲಾಗಿದೆಯೆಂದು ನಾಯಕ ಶಿವಚಂದ್ರಕುಮಾರ್ ತನ್ನ ಪಾತ್ರದ ಪರಿಚಯ ಮಾಡಿಕೊಂಡರು.

ನಾಯಕನ ಗೆಳಯರುಗಳಾಗಿ ಚಕ್ರವರ್ತಿ ದಾವಣಗೆರೆ, ಸದಾನಂದ ಕಾಳೆ ಅಭಿನಯಿಸಿದ್ದಾರೆ. ಎರಡನೇ ಬಾರಿಗೆ ನಿರ್ದೇಶಕನಾಗಿರುವ ಗೋಪಿ ಕೆರೂರ್ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಇವರು ಹೇಳುವಂತೆ ಮುಖ್ಯ ಪಾತ್ರಗಳು ಹೊಸಬರಾಗಿದ್ದರೂ, ಅನುಭವಿ ತಂತ್ರಜ್ಘರು ಕೆಲಸ ಮಾಡಿರುವುದು ಪ್ಲಸ್ ಪಾಯಿಂಟï ಆಗಿದೆ.

ಹೆಸರಿನಲ್ಲೇ ಎಲ್ಲವು ಇರುವುದರಿಂದ ವಿವರ ಹೇಳುವ ಅಗತ್ಯವಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಕಲ್ಯಾಣ ಎನ್ನುವುದು ದಿಬ್ಬಣ ಇದ್ದಂತೆ. ಆ ಸಿದ್ಧಾಂತಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದರು. ನಾಯಕಿ ಆರಾದ್ಯ, ಅರುಣ ಬಾಲರಾಜï, ಕಮಲ ದೇವಾಂಗ ಚಿಕ್ಕದಾಗಿ ಮಾತನಾಡಿದರು.

ನನಗೆ ಯಾವುದೇ ಸಂಗೀತ ಜ್ಞಾನ ಇರುವುದಿಲ್ಲ. ಆದರೂ ಚಿತ್ರದಲ್ಲಿ ಮ್ಯೂಸಿಕ್ ಟೀಚರ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ರಮೇಶ್ ಭಟ್ ಹೇಳಿದರು. ಉದ್ಯಮಿ ಶಿವರಾಜ್ ಲಕ್ಷಣರಾವ್ ದೇಸಾಯಿ ಎಸ್. ಎಲ್.ಡಿ. ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿರುವ ಹನ್ನೊಂದು ಹಾಡುಗಳಿಗೆ ಅವಿನಾಶ್ ಬಾಸತ್ಕೂರ್ ಅವರ ಸಂಗೀತವಿದೆ. ಉತ್ತರ ಕರ್ನಾಟಕದವರೇ ಆಗಿರುವ ಗುರುರಾಜ ಹೊಸಕೋಟೆ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ನಾಲ್ಕು ಹಾಡುಗಳನ್ನು ಪರದೆ ಮೇಲೆ ತೋರಿಸಲಾಯಿತು.

Share This With Your Friends

Related posts