Cinisuddi Fresh Cini News 

ಜೀರೋ ಬಜೆಟ್‍ನಲ್ಲಿ ‘ಮದುವೆ ಊಟ’ದ ಸಿನಿಮಾ

ಒಂದು ಮದುವೆ ಊಟವನ್ನು ಹಾಕಿಸಬೇಕಾದರೆ ಏನಿಲ್ಲವೆಂದರೂ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ, ಆದರೆ ಮಹೇಶ್‍ಲೋನಿ ಅವರು ಜೀರೋ ಬಜೆಟ್‍ನಲ್ಲಿ ಮದುವೆ ಊಟ ಎಂಬ ಸಿನಿಮಾವನ್ನು ಮಾಡಲು ಹೊರಟಿರುವುದು ಅಚ್ಚರಿ ಮೂಡಿಸಿದೆ.ಜೀರೋ ಬಜೆಟ್‍ನಲ್ಲಿ ಸಿನಿಮಾ ನಿರ್ಮಿಸುವುದು ದುಸ್ಸಾಹಸವಾದರೂ ಕೂಡ ಅಂತದ್ದೊಂದು ಪ್ರಯತ್ನಕ್ಕೆ ಕೈ ಹಾಕಿರುವ ಮಹೇಶ್ ಲೋನಿ ಅವರು ಚಿತ್ರೀಕರಣಕ್ಕೆ ಬೇಕಾದ ಸಲಕರಣೆ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರಂತೆ.

ಈ ಚಿತ್ರದಲ್ಲಿ ಜೈಸಾವನ್‍ಸಿಂಗ್, ಜೈಸಾವನ್‍ಸಿಂಗ್, ಗಾಯತ್ರಿ , ರಂಜಿತ್, ಧರ್ಮೇಂದ್ರ, ಅರಸ್, ಮಹೇಶ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.ಮೊನ್ನೆ ಈ ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣ ಮಾಡಲಾಯಿತು.ನಿರ್ದೇಶಕ ಮಹೇಶ್ ಲೂನಿ ಮಾತನಾಡಿ, ನಾನು ಈ ಹಿಂದೆ ಸ್ಟುಡಿಯೋದಲ್ಲಿ ಕೆಲಸ ಮಾಡಿದ್ದರಿಂದ ರಾತ್ತರಿ ವೇಳೆ ಮಾತ್ರ ಸ್ಟುಡಿಯೋವನ್ನು ಬಳಸಿಕೊಂಡು ಆರ್‍ಆರ್ ಮಾಡಿದ್ದೇವೆ (ರೀರೆಕಾರ್ಡಿಂಗ್), ಇದೇ ರೀತಿ ಚಿತ್ರಕ್ಕೆ ಬಂಡವಾಳವನ್ನು ಹಾಕದೆ ಚಿತ್ರೀಕರಿಸಿದ್ದೇನೆ, ಅದಕ್ಕೆ ನನ್ನ ಗೆಳೆಯರು ಕೈಜೋಡಿಸಿದ್ದು, ಮನುಷ್ಯನಾಗಿ ಹುಟ್ಟಿದ ಮೇಲೆ ಏನೆಲ್ಲಾ ಸಂಕಷ್ಟಗಳನ್ನು ಎದುರಿಸುತ್ತಾನೆ ಎಂಬುದನ್ನೇ ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದೇನೆ ಎಂದು ಹೇಳಿದರು.

ಹಲವು ಚಿತ್ರಗಳಿಗೆ ಪ್ರೊಗ್ರಾಮರ್, ಮ್ಯೂಜಿಕ್ ಕಂಪೋಸರ್, ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿರುವ ಮಧುಸೂದನ್ ಅವರು ಈ ಚಿತ್ರದಲ್ಲಿರುವ 4 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ವಿಕಾಸ ವಸಿಷ್ಟ, ಶ್ರೀಕಾಂತ್, ಅತಿ ಗೀತೆಗಳನ್ನು ಹಾಡಿದ್ದಾರೆ.

ಅಂದ ಹಾಗೆ ಮದುವೆ ಊಟಕ್ಕೆ ಮಹೇಶ ನೂನಿ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರೊಂದಿಗೆ ನಾಯಕನಟನಾಗಿಯೂ ಅಭಿನಯಿಸಿದ್ದಾರೆ.ಮದುವೆ ಊಟದ ಮೂಲಕ ಹೊಸದೊಂದು ದಾಖಲೆ ನಿರ್ಮಿಸಲು ಹೊರಟಿರುವ ಮಹೇಶರ ಪ್ರಯತ್ನವನ್ನು ಪ್ರೇಕ್ಷಕರನ್ನು ಮೆಚ್ಚಿಕೊಂಡಾಡುವಂತಾಗಲಿ.

Related posts