Cinisuddi Fresh Cini News 

ಏಪ್ರಿಲ್‍ನಲ್ಲಿ “ಮದಕರಿಪುರ” ಚಿತ್ರ ಬಿಡುಗಡೆ

ತಾತಾ ಪ್ರೊಡಕ್ಷನ್ಸ್ 4ನೇ ಕಾಣಿಕೆ “ಮದಕರಿಪುರ” ಕಿಚ್ಚ ಮಾತಾಡ್ತಾನೆ. ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿರುವ ಈ ಚಿತ್ರವು ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಹಾಡುಗಳೊಂದಿಗೆ ನಿರ್ಮಿಸಿ, ನಿರ್ದೇಶಿಸಿದ್ದಾರೆ ಪಲ್ಲಕ್ಕಿ.

ಛಾಯಾಗ್ರಹಣ-ರಾಜಾಶಿವಶಂಕರ್, ಸಂಗೀತ -ಸ್ಯಾಮ್, ಸಂಕಲನ –ಗೌತಮ್ ಪಲ್ಲಕ್ಕಿ, ಸಾಹಸ- ಡಿಫರೆಂಟ್ ಡ್ಯಾನಿ, ನೃತ್ಯ-ತ್ರಿಭುವನ್, ನಿರ್ವಹಣೆ-ನರಸಿಂಹ ಜಾಲಹಳ್ಳಿ, ವಾಲ್ಮೀಕಿ ರಾಮಾಯಣದ ಎಳೆಯೊಂದನ್ನು ಆಧರಿಸಿ, ಕಾಮಿಡಿ, ಮರ್ಡರ್ ಮಿಸ್ಟ್ರಿ ಕಥೆ ಮತ್ತು ನೈಜ ಘಟನೆಗಳನ್ನು ಆಧರಿಸಿ ಅಪ್ರಕಟಿತ ಕಾದಂಬರಿ ನಾಟಕ “ಗಿಡ್ಡೋಬಾ ಮಾತಾಡ್ತಾನೆ” ಆಧರಿಸಿ ಚಿತ್ರ ನಿರ್ಮಾಣವಾಗಿದೆ.

ಚಿತ್ರೀಕರಣ, ಬೆಂಗಳೂರು ಸುತ್ತಮುತ್ತ-ಹಿರಿಯೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ನಂದಿಗ್ರಾಮ, ಮತ್ತು ಕೈವಾರ ತಾತಯ್ಯ ಸ್ಟುಡಿಯೋವಿನಲ್ಲಿ ನಡೆದಿದೆ. ತಾರಾಗಣದಲ್ಲಿ – ಡಾ.ರಾಧಾಕೃಷ್ಣ ಪಲ್ಲಕ್ಕಿ, ಪ್ರಕಾಶ್ ಅರಸ್, ಎಂ.ಕೆ.ಮಠ, ಶ್ರೀನಿವಾಸ ಗುರೂಜಿ, ನೈಋತ್ಯ, ಸೀನೂ ಮಾರ್ಕಾಳಿ, ವಿನಯ್ ಬಲರಾಮ್, ಅರ್ಗವಿ ರಾಯ್, ರೆಡ್ಡಿ ಹಿರಿಯೂರ್, ಸವಿತಾ ಚಿನ್ಮಯಿ, ವೆಂಕಟಾಚಲ, ಹಾಗೂ ಪಲ್ಲಕ್ಕಿ ಫಿಲಂ ಇನ್ಟಿಟ್ಯೂಟ್ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.

Related posts