Cinisuddi Fresh Cini News 

ಎಂ.ಆರ್.ಪಿ. ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಗಣ್ಯರು.

ಯಾವುದೇ ಚಿತ್ರವಾಗಲಿ ಮೊದಲು ಆಕರ್ಷಣೆ ಮಾಡುವುದೇ ಚಿತ್ರದ ಶೀರ್ಷಿಕೆ . ಹೌದು ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ಯಾವುದೇ ಒಂದು ವಸ್ತುವನ್ನು ಖರೀದಿಸುವಾಗ ಅದರ ನಿಖರವಾದ ಬೆಲೆಯನ್ನು ಪರೀಕ್ಷಿಸುತ್ತೇವೆ. ಇದೇ ಪದವನ್ನು ಇಟ್ಟುಕೊಂಡು ಬಾಹುಬಲಿ ಅವರು ಎಂ.ಆರ್.ಪಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರ ಪ್ರಕಾರ ಎಂಆರ್.ಪಿ. ಎಂದರೆ ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್. ಸಂಪೂರ್ಣ ಮನರಂಜನೆ ಕಥಾಹಂದರವನ್ನು ಹೊಂದಿರುವ ಈ ಚಿತ್ರವನ್ನು ಎಂ.ಡಿ.ಶ್ರೀಧರ್, ಛಾಯಾಗ್ರಾಹಕ ಎ.ವಿ.ಕೃಷ್ಣಕುಮಾರ್, ಮೋಹನ್‍ಕುಮಾರ್ .ಎನ್.ಜಿ. ಹಾಗೂ ರಂಗಸ್ವಾಮಿ ಕೆ.ಆರ್. ಹೀಗೆ ನಾಲ್ಕು ಜನ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸ್ಥೂಲಕಾಯದ ವ್ಯಕ್ತಿಯೊಬ್ಬನ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ನಟ ವಸಿಷ್ಠ ಎನ್.ಸಿಂಹ, ಸಂಗೀತ ನಿರ್ದೇಶಕ ಸಾಧು ಕೋಕಿಲ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಬಾಹುಬಲಿ ನಮ್ಮ ಚಿತ್ರದ ಕ್ಲಿಪಿಂಗ್ಸ್ ನೋಡಿ ಅಪ್ಪು ಅವರು ಕರೆದು ಶುಭಹಾರೈಸಿದ್ದರು. ಸ್ಥೂಲಕಾಯದ ವ್ಯಕ್ತಿಯೊಬ್ಬನ ಜೀವನದ ಕಥೆಯನ್ನು ಈ ಚಿತ್ರದಲ್ಲಿ ಹೇಳಿದೇವೆ. ಧಡೂತಿ ದೇಹದ ವ್ಯಕ್ತಿಯೊಬ್ಬ ಐಟಿ ಕಂಪನಿಯಲ್ಲಿ ಕೆಲಸ ಮಾಡುವಾಗ ಏನೆಲ್ಲ ತೊಂದರೆ ಅನುಭವಿಸುತ್ತಾನೆ, ಎಂತೆಂಥಾ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಹಾಸ್ಯಮಿಶ್ರಿತವಾಗಿ ಹೇಳಲು ಪ್ರಯತ್ನಿಸಿದೇನೆ. ನಾಯಕ ತಾನೇನು ಅಂದುಕೊಂಡಿರು ತ್ತಾನೋ ಅದನ್ನು ಸಾಧಿಸಲು ಹೊರಟಾಗ ಏನೇನಾಗುತ್ತೆ, ಅಂಥಾ ವ್ಯಕ್ತಿಗಳು ಕೂಡ ಸಾಧನೆ ಮಾಡಬಲ್ಲರು ಎನ್ನುವುದೇ ಚಿತ್ರದ ತಿರುಳು. ನವರಸನಾಯಕ ಜಗ್ಗೇಶ್ ಅವರ ಧ್ವನಿಯ ಮೂಲಕ ನಾಯಕನ ಜರ್ನಿ ಸಾಗಲಿದೆ. ಅಕ್ಟೋಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಉದೇಶವಿದೆ ಎಂದು ಹೇಳಿದರು. ನಿರ್ಮಾಪಕ ಎಂ.ಡಿ.ಶ್ರೀಧರ್ ಮಾತನಾಡುತ್ತ ಹೆಣ್ಣಿನ ವಯಸ್ಸು, ಸಿನಿಮಾದ ಬಜೆಟ್ ಕೇಳಬೇಡಿ, ನನ್ನಜೊತೆ ಕೆಲಸ ಮಾಡಿದ ಬಾಹುಬಲಿ ಅವರಿಗೆ ಒಳ್ಳೆಯದಾಗಲಿ ಎಂದರು. ಈ ಚಿತ್ರದ ನಿರ್ಮಾಪಕ ಮೋಹನ್ ಕುಮಾರ್ ಮಾತನಾಡುತ್ತಾ ಈ ಚಿತ್ರದ ಶೀರ್ಷಿಕೆ ಹುಟ್ಟಿದೆ ಬಹಳ ವಿಭಿನ್ನವಾಗಿದೆ. ಇದಕ್ಕೆ 1ಮೊಟ್ಟೆಯ ಕಥೆ ಚಿತ್ರವೇ ಸ್ಫೂರ್ತಿ. ನಾವು ಇದನ್ನ 1 ಹೊಟ್ಟೆಯ ಕಥೆ ಅಂತ ಇಡಬೇಕು ಅಂದುಕೊಂಡಿದ್ದೆ. ನಂತರ ಗೆಳೆಯರೆಲ್ಲ ಸೇರಿ ನಿರ್ಧರಿಸಿ ಎಂ.ಆರ್. ಪಿ ಎಂದು ಟೈಟಲ್ ಇಟ್ಟಿದ್ದೇವೆ. ಈಗ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಮುಂದಿನ ತಿಂಗಳು ತೆರೆ ಮೇಲೆ ಬರ್ತಿದೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.

ಚಿತ್ರದ ನಾಯಕ ಹರಿ ಮಾತನಾಡುತ್ತ ಸ್ಥೂಲಕಾಯದ ವ್ಯಕ್ತಿಯೊಬ್ಬ ತನ್ನ ದಪ್ಪ ದೇಹದ ಕಾರಣದಿಂದ ಏನೇನೆಲ್ಲ ತೊಂದರೆ ಅನುವಿಸುತ್ತಾನೆ ಎಂಬುದನ್ನು ನಿರ್ದೇಶಕರು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು. ಹರ್ಷವರ್ಧನ್ ರಾಜ್ ಈ ಚಿತ್ರದ 3 ಹಾಡುಗಳಿಗೆ ಮ್ಯೂಸಿಕ್ ಕಂಪೋಜ್ ಮಾಡಿದ್ದು, ಗುಂಡ್ಲುಪೇಟೆ ಸುರೇಶ್ ಹಾಗೂ ಕೆ.ಕೆ. ಕ್ಯಾಮೆರಾವರ್ಕ್ ಮಾಡಿದ್ದಾರೆ. ಚೈತ್ರಾ ರೆಡ್ಡಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಲ ರಾಜವಾಡಿ, ವಿಜಯ್ ಚೆಂಡೂರ್, ಸುದಾ ಬೆಳವಾಡಿ ಉಳಿದ ಪಾತ್ರವರ್ಗದಲ್ಲಿದ್ದಾರೆ. ಚಿತ್ರ ಈಗ ಪ್ರಚಾರದ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ನೀಡುವುದರ ಜೊತೆಗೆ ತೆರೆ ಮೇಲೆ ಬರಲಿದೆ.

Related posts