Cini Reviews Cinisuddi Fresh Cini News 

ಮನಮುಟ್ಟುವ ಚಿತ್ರ “ಲವ್ mocktail” ( ಚಿತ್ರವಿಮರ್ಶೆ – ರೇಟಿಂಗ್ : 4/5

ಚಿತ್ರ : ಲವ್ mocktail
ನಿರ್ದೇಶಕ : ಡಾರ್ಲಿಂಗ್ ಕೃಷ್ಣ
ನಿರ್ಮಾಪಕರು : ಕೃಷ್ಣ , ಮಿಲನ ನಾಗರಾಜ್
ಸಂಗೀತ : ರಘು ದೀಕ್ಷಿತ್ ಛಾಯಾಗ್ರಾಹಕ : ಶ್ರೀ (ಕ್ರೇಜಿಮೈಂಡ್)
ತಾರಾಗಣ : ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಅಮೃತಾ ಅಯ್ಯಂಗಾರ್, ರಚನಾ ಅಭಿಲಾಷ್ ಹಾಗೂ ಮುಂತಾದವರು…

ಪ್ರೀತಿಯ ಸುತ್ತ ಹಲವಾರು ಪ್ರೇಮ ಕಥೆಗಳು ಬಂದು ಹೋಗಿವೆ. ಪ್ರತಿ ಕಾಲಘಟ್ಟವು ಹೊಸ ಅನುಭವವನ್ನು ನೀಡುತ್ತದೆ ಎಂಬುದನ್ನು ಬಹಳ ನವಿರಾಗಿ , ಸರಳ ರೀತಿ ಹೇಳಿರುವಂತಹ ಚಿತ್ರವೇ ಲವ್ ಮಾಕ್ಟೇಲ್. ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಒಂದು ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಪ್ರೇಕ್ಷಕರ ಮುಂದೆ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ ನಟ ಡಾರ್ಲಿಂಗ್ ಕೃಷ್ಣ.

ಚಿತ್ರದ ಕಥಾ ಹಂದರದ ಪ್ರಕಾರ ನಾಯಕ ಕೃಷ್ಣ ತನ್ನ ಮನಸ್ಸಿನಲ್ಲಿ ಹಲವಾರು ಆಲೋಚನೆಯೊಂದಿಗೆ ಒಂಟಿಯಾಗಿ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾನೆ. ದಕ್ಷಿಣ ಕನ್ನಡದ ಸುಂದರ ಪರಿಸರದ ನಡುವೆ ಸಾಗುವಾಗ ಮಾರ್ಗಮಧ್ಯೆ ಅಚಾನಕ್ಕಾಗಿ ಒಂದು ಸುಂದರ ಹುಡುಗಿ ರಚನಾ ಎದುರಾಗುತ್ತಾಳೆ. ಆಕೆಗೆ ಡ್ರಾಪ್ ನೀಡುಲು ನಾಯಕ ಮುಂದಾಗುತ್ತಾನೆ.

ಸಾಗುವ ದಾರಿಯಲ್ಲಿ ನಾಯಕನ ಸೌಂದರ್ಯ ಕಂಡ ಯುವತಿ ಪಟ ಪಟನೆ ಮಾತನಾಡುತ್ತಾ ನಾಯಕನ ಲವ್ ಬಗ್ಗೆ ಕೇಳುತ್ತಾಳೆ. ಇದಕ್ಕೆ ಉತ್ತರ ನೀಡಲು ಮುಂದಾಗುವ ನಾಯಕನ ಬಾಲ್ಯ , ಯೌವನ , ವೈವಾಹಿಕ ಜೀವನದ ಎಳೆಗಳು ಹಂತ ಹಂತವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.

ಬಾಲ್ಯದಿಂದಲೂ ನಾಯಕನ ತುಂಟತನಕ್ಕೆ ಕೊರತೆ ಇರುವುದಿಲ್ಲ , ಶಾಲೆಯ ದಿನಗಳಿಂದಲೂ ಹುಡುಗಿಯರ ಬಗ್ಗೆ ಗಮನ ಹರಿಸುವ ಇವನು ತನ್ನ ಮೊದಲ ಪ್ರೀತಿ ಶುರುವಾಗುವುದು ಶಾಲಾ ದಿನಗಳ ಅವಧಿಯಲ್ಲೇ. ಚಿಗುರು ಮೀಸೆಯ ತುಂಟ ವಿದ್ಯಾರ್ಥಿಗಳ ಆಟ , ಪ್ರೇಮ, ಮನಸೆಳೆಯುವ ಕ್ರಶ್ ಹೀಗೆ ಅದಕ್ಕೊಂದು ರೂಪ ಪಡೆದುಕೊಳ್ಳುತ್ತದೆ.

ತದನಂತರ ಕಾಲೇಜು ಜೀವನದ ಯೌವನದ ಹಾದಿಯಲ್ಲಿ ಪ್ರೀತಿಯು ಮೊಬೈಲ್ , ಮೆಸೇಜ್ ಮೂಲಕ ಇನ್ನೊಂದು ರೂಪ ತೆರೆದುಕೊಳ್ಳುತ್ತದೆ.ನಾಯಕ ಕೃಷ್ಣನ ಪ್ರೀತಿಗೆ ನಾಯಕಿ ಅಮೃತಾ ಅಯ್ಯಂಗಾರ್ ಜೀವ ತುಂಬುತ್ತಾಳೆ. ಆದರೆ ಪ್ರೀತಿ ಹೊಟ್ಟೆ ತುಂಬುವುದಿಲ್ಲ , ಬದುಕಿಗಾಗಿ ದುಡಿಮೆ ಅಗತ್ಯ ಎಂದು ಹೇಳ ಹೊರಡುವ ಕಥೆಯಲ್ಲಿ ಮತ್ತೊಬ್ಬ ನಾಯಕಿ ಮಿಲನಾ ನಾಗರಾಜ್ ಪ್ರವೇಶವಾಗುತ್ತದೆ.

ನಾಯಕ ಕೃಷ್ಣ ಕೆಲಸ ಮಾಡುವ ಕಂಪನಿಯಲ್ಲಿ ನಾಯಕಿ ಮಿಲನ ಕೆಲಸ ಮಾಡಿ ಕೃಷ್ಣನ ಸ್ನೇಹವನ್ನು ಗಳಿಸುತ್ತಾಳೆ. ಮುಂದೆ ಹಂತ ಹಂತವಾಗಿ ಹಲವಾರು ತಿರುವುಗಳು ತಿಳಿದುಕೊಳ್ಳುತ್ತಾ ಹೋಗುತ್ತದೆ. ನಿಜವಾಗಿಯೂ ನಾಯಕನ ಬದುಕಿನಲ್ಲಿ ಪ್ರೀತಿ ಯಾವ ರೂಪ ಪಡೆಯುತ್ತದೆ… ಅವನ ಬದುಕಿನಲ್ಲಿ ನಡೆಯುವ ಗೊಂದಲಗಳು ಏನು…? ಯಾರನ್ನು ಮದುವೆಯಾಗುತ್ತಾನೆ…ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ ಬೇಕಾದರೆ ನೀವು ಎಲ್ಲರೂ ಒಮ್ಮೆ ಚಿತ್ರವನ್ನು ನೋಡಲೇಬೇಕು.

ಇಡೀ ಚಿತ್ರವನ್ನು ವಾಸ್ತವಕ್ಕೆ ಹತ್ತಿರವಾಗಿರುವಂತೆ ಸೆರೆ ಹಿಡಿದಿಡುವದರಲ್ಲಿ ನಿರ್ದೇಶಕ ಕೃಷ್ಣ ಗೆದ್ದಿದ್ದಾರೆ.ಮೂರು ಕಾಲಘಟ್ಟವನ್ನು ಹಂತಹಂತವಾಗಿ ಹೇಳಿರುವ ನಿರ್ದೇಶಕರು ಚಿತ್ರದ ಮೊದಲ ಭಾಗವನ್ನು ಒಂದಷ್ಟು ಕಡಿತ ಗೊಳಿಸಿದ್ದಾರೆ ಓಟಕ್ಕೆ ಚೆನ್ನಾಗಿರುತಿತ್ತು , ಇನ್ನೂ ಎರಡನೇ ಭಾಗ ಬಹಳಷ್ಟು ಸೂಕ್ಷ್ಮವಾಗಿ ನೋಡುಗರ ಗಮನ ಮಿಸುಕಾಡದಂತೆ ಹಿಡಿದಿಟ್ಟಿರುವುದು ಗಮನಾರ್ಹವಾಗಿದೆ. ಇನ್ನು ನಾಯಕನ ಪಾತ್ರದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಇನ್ನು ಮೂವರು ನಟೀಮಣಿಯರಾದ ಮಿಲನಾ ನಾಗರಾಜ್ , ಅಮೃತಾ ಅಯ್ಯಂಗಾರ್ ಹಾಗೂ ರಚನಾ ಸಿಕ್ಕ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿ ಅಭಿನಯಿಸಿದ್ದಾರೆ. ಉಳಿದ ಪಾತ್ರಧಾರಿಗಳು ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಇನ್ನು ರೊಮ್ಯಾಂಟಿಕ್ ದೃಶ್ಯಗಳು ಹಾಗೂ ಮನ ಮಿಡಿಯುವಂತ ಸನ್ನಿವೇಶಗಳು ಸಿನಿ ಪ್ರಿಯರ ಗಮನವನ್ನು ಸೆಳೆಯುತ್ತದೆ. ಅಷ್ಟೇ ಉತ್ತಮವಾಗಿ ರಘು ದೀಕ್ಷಿತ್ ರ ಸಂಗೀತ ಮೋಡಿ ಮನಸ್ಸಿಗೆ ಮುದ ನೀಡುತ್ತದೆ. ಇನ್ನು ಛಾಯಾಗ್ರಾಹಕ ಶ್ರೀ ಕ್ರೇಜಿಮೈಂಡ್ ಕೆಲಸ ಗಮನಾರ್ಹವಾಗಿದೆ. ಒಟ್ಟಾರೆ ಇಡೀ ಕುಟುಂಬ ಕುಳಿತು ಈ ಲವ್ ಮಾಕ್ಟೇಲ್ ಚಿತ್ರವನ್ನು ನೋಡಬಹುದು.

Share This With Your Friends

Related posts