Cinisuddi Fresh Cini News 

ರಿಯಲ್ ಲೈಫಲ್ಲೂ ಲವ್ವಲ್ಲಿ ಬಿದ್ದ ‘ಲವ್ ಮಾಕ್ಟೆಲ್’ ಜೋಡಿ..!

ಕಳೆದ ವಾರವಷ್ಟೇ ಬಿಡುಗಡೆಗೊಂಡಿದ್ದ ಲವ್ ಮಕ್ಟೇಲ್ ಚಿತ್ರದಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರು ನಿಜ ಜೀವನದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಲವ್ ಮಾಕ್ಟೇಲ್ ಚಿತ್ರಕ್ಕೆ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಬಂಡವಾಳ ಹೂಡಿದ್ದು ಬಿಡುಗಡೆಗೊಂಡ ಎಲ್ಲ ಕಡೆಯೂ ಉತ್ತಮ ಪ್ರತಿಕ್ರಿಯೆಗಳು ಕೇಳಿ ಬರುತ್ತಿರುವುದು ಚಿತ್ರತಂಡದವರ ಸಂತಸವನ್ನು ಹೆಚ್ಚಿಸಿದ್ದು ಮೊನ್ನೆ ಸಂತಸಕೂಟವನ್ನು ಹಮ್ಮಿಕೊಂಡಿದ್ದರು.

2013ರಲ್ಲಿ ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ ನಟಿಸಿದ್ದ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಡುವೆ ಅಂದಿನಿಂದಲೂ ಪ್ರೀತಿ ಬೆಸುಗೆ ಹಾಕಿತ್ತು, ಈಗ ಅವರ ಮದುವೆಗೆ ಎರಡು ಮನೆಯವರೂ ಒಪ್ಪಿಗೆ ಸೂಚಿಸಿದ್ದೂ ಈ ವರ್ಷವೇ ಅವರು ಮದುವೆಯಾಗಲಿದ್ದಾರೆ.

ಎಂಬಿಎ ಪದವೀಧರರಾಗಿರುವ ಕೃಷ್ಣ ಅವರು ಮದರಂಗಿ , ಜಾಕಿ, ರುದ್ರತಾಂಡವ, ದೊಡ್ಮನೆ ಹುಡುಗ, ಹುಚ್ಚ 2 ಚಿತ್ರಗಳಲ್ಲಿ ನಟಿಸಿದ್ದರೆ, ಹಾಸನದವರಾದ ಮಿಲನ ನಾಗರಾಜ್ ಎಂಜಿನಿಯರ್ ಪದವೀಧರೆ. ರಾಜ್ಯಮಟ್ಟದ ಈಜುಗಾರ್ತಿ ಆಗಿರುವ ಮಿಲನಾ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಂಡ ನಂತರ ಚಿತ್ರರಂಗಕ್ಕೆ ಬಂದ ಇವರು ನಂದುನಿಯಾ ನಂ ಸ್ಟೈಲ್, ಬೃಂದಾವನ, ಚಾರ್ಲಿ, ಜಾನಿ , ಲವ್‍ಮಾಕ್‍ಟೇಲ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಈಗ ಲವ್ ಮಾಕ್‍ಟೆಲ್ ಚಿತ್ರಕ್ಕೆ ಮಿಲನ ನಾಗರಾಜ್ ನಿರ್ಮಾಪಕಿ ಹಾಗೂ ನಾಯಕಿಯಾಗಿದ್ದರೆ, ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡುವುದರ ಜೊತೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ಕನ್ನಡಿಗರು ಯಾವತ್ತೂ ಕೈಬಿಡಲ್ಲ ಎನ್ನುವುದಕ್ಕೆ ಸೋತು ಗೆದ್ದ ಲವ್ ಮಾಕ್‍ಟೆಲ್ ಚಿತ್ರಕ್ಕಿಂತ ಬೇರೆ ಉದಾಹರಣೆ ಬೇಕೆ ? ಆರಂಭದಲ್ಲಿ ಚಿತ್ರಮಂದಿರಗಳ ಸಮಸ್ಯೆ ಎದುರಿಸಿದ ಈ ಸಿನಿಮಾಗೆ ಈಗ ಎಲ್ಲಾ ಪ್ರಾಬ್ಲಂ ದೂರಾಗಿದೆ. ಗೆಲುವಿನ ಸಕ್ಸಸ್‍ನಲ್ಲಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರು ಆದಷ್ಟು ಬೇಗ ಹಸೆಮಣೆ ಏರುವಂತಾಗಲಿ.

Share This With Your Friends

Related posts