Cinisuddi Fresh Cini News 

ಡಾರ್ಲಿಂಗ್ ಕೃಷ್ಣ ಅಭಿನಯದ “Love ಬರ್ಡ್ಸ್” ಚಿತ್ರಕ್ಕೆ ಅಪ್ಪು ಚಾಲನೆ

ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳ ಶುಭಾರಂಭ ಜೋರಾಗಿಯೇ ನಡೆಯುತ್ತದೆ. ಆ ಸಾಲಿನಲ್ಲಿ ಪಿ.ಸಿ.ಶೇಖರ್ ನಿರ್ದೇಶನದಲ್ಲಿ ಕಡ್ಡಿಪುಡಿ ಚಂದ್ರು ನಿರ್ಮಾಣದ ಡಾರ್ಲಿಂಗ್ ಕೃಷ್ಣ ನಾಯಕರಾಗಿ ಅಭಿನಯಿಸುತ್ತಿರುವ ನೂತನ “ಲವ್ ಬರ್ಡ್ಸ್” ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನೆರವೇರಿತು.

ಈ “Love ಬರ್ಡ್ಸ್” ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದ್ರೆ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ(ನoಗ್ಲಿ) ಕ್ಯಾಮೆರಾ ಚಾಲನೆ ಮಾಡಿದರು. ಇನ್ನೂ ಚಿತ್ರತಂಡಕ್ಕೆ ಶುಭಕೋರಲು ಮುಖ್ಯ ಅತಿಥಿಯಾಗಿ ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಹಾಗೂ ಸಿನಿಮಾ ಸ್ನೇಹಿತರು ಆಗಮಿಸಿದ್ದರು.

ಇನ್ನು ಈ ಸಿನಿಮಾ ವಿಚಾರವಾಗಿ ಮಾಹಿತಿಯನ್ನು ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಯನ್ನು ಆಯೋಜಿಸಿತ್ತು. ಮೊದಲಿಗೆ ಚಿತ್ರದ ನಿರ್ಮಾಪಕ ಕಡ್ಡಿಪುಡಿ ಚಂದ್ರು ಮಾತನಾಡುತ್ತಾ ಬಹಳ ಗ್ಯಾಪ್ ನಂತರ ಈ ಸಿನಿಮಾ ಆರಂಭಿಸಿದ್ದೇನೆ.

ನಿರ್ದೇಶಕ ಪಿ.ಸಿ.ಶೇಖರ್ ನನಗೆ ಹೇಳಿದ ಕಥೆ ನನಗೆ ಇಷ್ಟವಾಯಿತು. ಕಥೆ ಕೇಳಿದ ಕೆಲವೇ ದಿನಗಳಲ್ಲಿ ಚಿತ್ರದ ಮುಹೂರ್ತ ನಡೆದಿದೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿತ್ತಿದ್ದಾರೆ. ಮತ್ತೊಬ್ಬ ನಾಯಕಿ ಇರುತ್ತಾರೆ.

ಯಾರೆಂಬುದು ಇಷ್ಟರಲ್ಲೇ ತಿಳಿಯಲಿದೆ. ಸಾಧುಕೋಕಿಲ, ತಾರಾ, ಅವಿನಾಶ್, ರಂಗಾಯಣ ರಘು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ ಎಂದರು .

ಚಿತ್ರದ ನಿರ್ದೇಶಕ ಪಿ. ಸಿ. ಶೇಖರ್ ಮಾತನಾಡುತ್ತಾ ಮೊದಲು ನಿರ್ಮಾಪಕರಿಗೆ ಕಥೆ ಹೇಳಿದೆ ಅವರು ಇಷ್ಟಪಟ್ಟರು. ನಾನು ರೋಮಿಯೋ ಚಿತ್ರದ ನಂತರ ಲವ್ ಸಬ್ಜೆಕ್ಟ್ ಕಥೆ ಸಿದ್ದ ಮಾಡಿಕೊಂಡಿದ್ದೇನೆ.

ಈ ಕಥೆಗೆ ಡಾರ್ಲಿಂಗ್ ಕೃಷ್ಣ ಅವರೆ ಸೂಕ್ತ ನಾಯಕ ಅನಿಸಿತು. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿ. ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ಅರ್ಜುನ್ ಜನ್ಯ ಅವರ ರಾಗ ಸಂಯೋಜನೆಯಲ್ಲಿ ಉತ್ತಮ ಹಾಡುಗಳು ಮೂಡಿಬರತ್ತದೆ. ಎರಡು, ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಮೊದಲ ಹಂತ ಬೆಂಗಳೂರಿನಲ್ಲಿ ನಡೆದರೆ, ಮುಂದಿನ ಹಂತದ ಚಿತ್ರೀಕರಣ ಮಂಡ್ಯ ಮುಂತಾದ ಕಡೆ ನಡೆಯಲಿದೆ ಎಂದರು.

ಲವ್ ಮಾಕ್ಟೇಲ್ ನಂತರ ಡಾರ್ಲಿಂಗ್ ಕೃಷ್ಣ ಗೆ ಸಾಲು ಸಾಲಾಗಿ ಚಿತ್ರಗಳು ಕೈಗೆ ಸೇರುತ್ತದೆ. ಇನ್ನು ಈ ಚಿತ್ರದ ಬಗ್ಗೆ ಮಾತನಾಡುತ್ತಾ ನಾನು ಜಾಕಿ ಚಿತ್ರದ ಸಮಯದಿಂದಲೂ ಕಡ್ಡಿಪುಡಿ ಚಂದ್ರು ಅವರನ್ನು ಬಲ್ಲೆ. ಒಟ್ಟಾಗಿ ಅಭಿನಯ ಕೂಡ ಮಾಡಿದ್ದೇವೆ. ಆಗ ಅವರು ಒಂದು ಚಿತ್ರ ಮಾಡೋಣ ಅನ್ನುತ್ತಿದ್ದರು. ಈಗ ಸಮಯ ಕೂಡಿ ಬಂದಿದೆ. ನಿರ್ದೇಶಕ ಪಿ.ಸಿ.ಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು.

ನನಗೆ ಅವರ ನಿರ್ದೇಶನದ “ರೋಮಿಯೋ” ಮೆಚ್ಚುಗೆಯ ಚಿತ್ರ. ನಿರ್ದೇಶಕರು ಹೇಳಿದಂತೆ ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ನನ್ನದು ಸಾಫ್ಟ್ ವೇರ್ ಎಂಜಿನಿಯರ್ ಪಾತ್ರ ಎಂದು ಮಾಹಿತಿ ನೀಡಿದರು.ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಹಿರಿಯ ನಟ ರಂಗಾಯಣ ರಘು ಮಾತನಾಡುತ್ತಾ ನನಗೆ ಇನ್ನೂ ನನ್ನ ಪಾತ್ರದ ಬಗ್ಗೆ ಹೇಳಿಲ್ಲ.

ಆದರೆ ಹಳ್ಳಿಯ ಬರುವ ಪಾತ್ರ ನೀಡಿದ್ದಾರೆ. ತಂಡ ಬಹಳ ಪ್ಲಾನ್ ಮಾಡಿ ಚಿತ್ರವನ್ನ ಆರಂಭಿಸಿದ್ದಾರೆ. ಈ “Love ಬರ್ಡ್” ಚಿತ್ರ ಎಲ್ಲರ ಮೆಚ್ಚುಗೆ ಚಿತ್ರವಾಗಿ ಹೊರ ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಒಟ್ಟಾರೆ ಚಿತ್ರತಂಡ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದೆಯoತೆ.

Related posts