Cinisuddi Fresh Cini News 

ಈ ವಾರ ‘ಲೋಫರ್ಸ್’ ತೆರೆಗೆ

ಎ.ಎನ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಎನ್.ಗಂಗಾಧರ್ ಅವರು ನಿರ್ಮಿಸಿರುವ ಲೋಫರ್ಸ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಎಸ್.ಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ದಿನೇಶ್ ಕುಮಾರ್ ಅವರ ಸಂಗೀತ ನಿರ್ದೇಶನವಿದೆ. ಪ್ರಸಾದ್ ಬಾಬು ಛಾಯಾಗ್ರಹಣ, ಶಿವು ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಚೇತನ್, ಅರ್ಜುನ್ ಆರ್ಯ, ಮನೋಜ್, ಕೆಂಪೇಗೌಡ, ಶ್ರಾವ್ಯ, ಸುಷ್ಮ, ಸಾಕ್ಷಿ, ಎಂ.ಎಸ್.ಉಮೇಶ್, ಟೆನ್ನಿಸ್ ಕೃಷ್ಣ, ಭಾರತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 
Share This With Your Friends

Related posts