Cinisuddi Fresh Cini News 

ಅಮೆಜಾನ್‍ ಪ್ರೈಮ್‍ನಲ್ಲಿ ಜು.17 ರoದು `ಲಾ’ ಚಿತ್ರ ರೀಲೀಸ್

ಬೆಳ್ಳಿಪರದೆ ಮೇಲೆ ಬಹಳಷ್ಟು ಸಿನಿಮಾ ಕುಟುಂಬದ ಕಲಾವಿದರ ಆಗಮನ ಆಗುತ್ತಿದೆ. ಆ ನಿಟ್ಟಿನಲ್ಲಿ ರಾಗಿಣಿ ಚಂದ್ರನ್ ಕೂಡ ಒಬ್ಬರಾಗಿದ್ದಾರೆ.ಡೈನಾಮಿಕ್‍ಸ್ಟಾರ್ ದೇವರಾಜ್ ಕುಟುಂಬದ ಮುದ್ದಿನ ಸೊಸೆ , ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‍ರ ಮಡದಿ ರಾಗಿಣಿ ಚಂದ್ರನ್ ಅಭಿನಯದ `ಲಾ’ ಚಿತ್ರ ನೇರವಾಗಿ ಒಟಿಟಿ ಫ್ಲಾಟ್‍ಫಾರಂನಲ್ಲಿ ಬಿಡುಗಡೆಗೊಳ್ಳುತ್ತಿದೆ.

ರಿಷಭಪ್ರಿಯ ಕಿರುಚಿತ್ರದ ಮೂಲಕ ಬಣ್ಣದ ಲೋಕದ ಬಂದ ರಾಗಿಣಿ ಪತಿ ಪ್ರಜ್ವಲ್ ದೇವರಾಜ್ ಅವರು ನಟಿಸುತ್ತಿರುವ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ರಘು ಸಮರ್ಥ್‍ರ ವಿಜಯದಶಮಿ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.

ಮೂಲತ: ಡ್ಯಾನ್ಸರ್ ಆಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ನಿರ್ಮಾಣದಲ್ಲಿ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರ ನಿರ್ಮಾಣ ಮಾಡುವ ಹಾದಿಯಲ್ಲಿ ಸಾಗಿದ್ದಾರೆ. ಈ ನಿಟ್ಟಿನಲ್ಲಿ ಪಿಆರ್‍ಕೆ ಬ್ಯಾನರ್‍ನಡಿಯಲ್ಲಿ ನಿರ್ಮಾಣವಾಗಿರುವ ಮೂರನೆ ಚಿತ್ರ `ಲಾ’ ಬಿಡುಗಡೆಗೆ ಸಿದ್ಧವಾಗಿತ್ತು.

ಆದರೆ ಕೊರೊನಾ ಹಾವಳಿಯಿಂದ ಇಡೀ ಚಿತ್ರೋದ್ಯಮವೇ ಸ್ತಬ್ಧವಾಗಿದೆ. ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶನ ಮಾಡುವ ಅವಕಾಶ ಇಲ್ಲವಾದ ಕಾರಣ ಜನರನ್ನು ತಲುಪುವುದು ಕಷ್ಟವಾಗ ತೊಡಗಿದೆ.

ಈ ನಿಟ್ಟಿನಲ್ಲಿ ಪ್ರಸ್ತುತ ಜನರ ಬಳಿ ಹೋಗಲು ಕೆಲವು ಚಿತ್ರ ನಿರ್ಮಾಪಕರು ಒಟಿಟಿ ಪ್ಲಾಟ್‍ಫಾರಂ ಅನ್ನೇ ಬಳಸಿಕೊಳ್ಳುತ್ತಿದ್ದು, ಈಗ ಲಾ ಚಿತ್ರವು ಒಟಿಟಿ ಮೊರೆ ಹೋಗಿದೆ. ಪಿಆರ್‍ಕೆ ಬ್ಯಾನರ್ ಅಮೆಜಾನ್ ಪ್ರೇಮ್‍ನಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಈಗ ಜುಲೈ 17ರಂದು ಜನರಿಗೆ ತೋರಿಸಲು ಸಜ್ಜಾಗಿದೆ ಎಂದು ಚಿತ್ರತಂಡ ಖಚಿತ ಪಡಿಸಿದೆ..

`ಸ್ಮೈಲ್ ಪ್ಲೀಸ್’ ಚಿತ್ರ ನಿರ್ದೇಶಿಸಿದ್ದ ರಘುಸಮರ್ಥ್ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಕಾನೂನು ಕತೆಯಾಗಿದ್ದು, ಹೆಚ್ಚಿನ ವಿವರ ತಿಳಿಯಲು ಸಿನಿಮಾ ನೋಡಬೇಕಂತೆ. ಪ್ರಜ್ವಲ್‍ದೇವರಾಜ್ ಪತ್ನಿ ರಾಗಿಣಿಪ್ರಜ್ವಲ್ ಮೊದಲ ಬಾರಿ ವಕೀಲೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ತಾರಾಗಣದಲ್ಲಿ ಅವಿನಾಶ್, ಅಚ್ಯುತಕುಮಾರ್, ಮುಖ್ಯಮಂತ್ರಿಚಂದ್ರು, ಸಿರಿಪ್ರಹ್ಲಾದ್, ಸುಧಾರಾಣಿ, ಮಂಡ್ಯಾ ರಮೇಶ್ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ವಾಸುಕಿವೈಭವ್, ಛಾಯಾಗ್ರಹಣ ಸುಜ್ಞಾನ್, ಸಂಕಲನ ಶ್ರೀಕಾಂತ್ ಅವರದಾಗಿದೆ. ಅಶ್ವಿನಿಪುನೀತ್‍ರಾಜ್‍ಕುಮಾರ್ ಅವರೊಂದಿಗೆ ಎಂ.ಗೋವಿಂದ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

Share This With Your Friends

Related posts