Cinisuddi Fresh Cini News 

ರಿಷಭ್ ಶೆಟ್ಟಿ ನಿರ್ಮಾಣದ “ಲಾಫಿಂಗ್ ಬುದ್ದ” ಚಿತ್ರ ಆರಂಭ

ಖ್ಯಾತ ನಟ, ನಿರ್ದೇಶಕ ರಿಷಭ್ ಶೆಟ್ಟಿ, ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ “ಲಾಫಿಂಗ್ ಬುದ್ದ” ಚಿತ್ರ ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ಆರಂಭವಾಯಿತು.

ಎಂ.ಭರತ್ ರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ ನಟಿಸುತ್ತಿದ್ದಾರೆ.

ವಿಷ್ಣುವಿಜಯ್ ಸಂಗೀತ ನಿರ್ದೇಶನ, ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಭದ್ರಾವತಿಯಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

Related posts