Cinisuddi Fresh Cini News 

‘ಲಗಾಮ್’ ಹಾಕಿದ ಉಪೇಂದ್ರ

ಉಪೇಂದ್ರ, ಹರಿಪ್ರಿಯಾ ಅಭಿನಯದ ಲಗಾಮ್ ಚಿತ್ರದ ಚಿತ್ರೀಕರಣ ನಾಗವಾರದ ಬಳಿಯ ವೈಟ್‍ಹೌಸ್ ಮನೆಯಲ್ಲಿ ಹತ್ತು ದಿನಗಳಿಂದಲೂ ನಡೆಯುತ್ತಿದೆ.

ಕೆ.ಮಾದೇಶ್ ಈ ಚಿತ್ರಕ್ಕೆ ಆ್ಯಕ್ಷನ್‍ಕಟ್ ಹೇಳುತ್ತಿದ್ದು, ಇದೇ ಮೊದಲಬಾರಿಗೆ ಉಪೇಂದ್ರ ಜೊತೆ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಯಾರಿಗೆ, ಯಾವ ಕಾರಣಕ್ಕೆ ಲಗಾಮ್ ಹಾಕುತ್ತಾನೆ ಎನ್ನುವುದೇ ಒನ್‍ಲೈನ್ ಕಥೆ. ಹಣದ ವರ್ಗಾವಣೆ ಸುತ್ತ ನಡೆಯುವ ಕಥಾಹಂದರ ಇರುವ ಚಿತ್ರವಿದು.

ನಿರ್ದೇಶಕ ಮಾದೇಶ್ ಮಾತನಾಡುತ್ತ ಉಪೇಂದ್ರ ಅವರು ಚಿತ್ರದ ಸ್ಕ್ರಿಪ್ಟ್‍ನಲ್ಲಿ ಹೊಸ ಅಂಶಗಳನ್ನು ಹೇಳಿದರು. ಒಂದು ಸೋಷಿಯಲ್ ಕಂಟೆಂಟ್ ಚಿತ್ರದಲ್ಲಿದ್ದು, ಅದು ಎಲ್ಲರಿಗೂ ತಲುಪುವಂಥದ್ದಾಗಿರುತ್ತೆ, ಈ ಇಲ್ಲಿ ಶೂಟಿಂಗ್ ಮುಗಿಸಿದ ನಂತರ ಮೈಸೂರಿಗೆ ತೆರಳಲಿದ್ದೇವೆ.

ಅಲ್ಲಿಂದ ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಿ, ಸಾಧ್ಯವಾದ್ರೆ ಅಬ್ರಾಡ್‍ನಲ್ಲಿ ಹಾಡಿನ ಚಿತ್ರೀಕರಣ ಮಾಡೋ ಪ್ಲಾನ್ ಇದೆ ಎಂದು ಹೇಳಿದರು. ನಟಿ ಹರಿಪ್ರಿಯಾ ಚಿತ್ರದ ನಾಯಕಿಯಾಗಿದ್ದು, ಇದೇ ಮೊದಲಬಾರಿಗೆ ಉಪೇಂದ್ರ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದೇರೆ.

ತಾನೊಬ್ಬ ತನಿಖಾ ವರದಿಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ ಹರಿಪ್ರಿಯ, ಯಾವುದಕ್ಕೂ ಭಯಪಡದ ದಿಟ್ಟ ಯುವತಿಯಾಗಿ ನಟಿಸಿದ್ದೇನೆ. ಕಥೆ ಕೇಳುತ್ತಲೇ ನನಗೆ ಕುತೂಹಲ ಹುಟ್ಟಿತು, ನಾನು ಮತ್ತು ಹೀರೋ ಯಾವ ಕಾರಣಕ್ಕೆ, ಯಾವ ರೀತಿ ಮೀಟ್ ಆಗ್ತೀವಿ ಅನ್ನೋ ಅಂಶದ ಮೇಲೆ ಚಿತ್ರ ನಡೆಯುತ್ತದೆ ಎಂದು ತನ್ನ ಪಾತ್ರದ ಪರಿಚಯ ಮಾಡಿಕೊಂಡರು.

ಆನಂತರ ಮಾತು ಆರಂಭಿಸಿದ ಉಪೇಂದ್ರ, ಈ ಸಿನಿಮಾದ ಕಥೆ ಎಲ್ಲರಿಗೂ ಅನ್ವಯಿಸುವಂಥ ಒಂದು ಸೋಷಿಯಲ್ ಇಶ್ಯೂ ಮೇಲೆ ನಡೆಯುತ್ತದೆ, ಅದೇನೆಂದು ಈಗಲೇ ಹೇಳಿಬಿಟ್ರೆ ಏನೂ ಕುತೂಹಲ ಉಳಿಯಲ್ಲ, ಕೊನೆಗೆ ನಾಯಕ ಅದಕ್ಕೆ ಹೇಗೆ ಲಗಾಮ್ ಹಾಕಿ ಅದನ್ನೆಲ್ಲ ತಡೆಯುತ್ತಾನೆ ಎಂಬುದನ್ನು ಮಾದೇಶ್ ಅವರು ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಮಾಡಿದ್ದಾರೆ.

ಇನ್ನೂ 40ರಿಂದ 50ದಿನ ಶೂಟಿಂಗ್ ಮಾಡುವುದು ಬಾಕಿಯಿದೆ ಎಂದು ಹೇಳಿದರು. ಈ ಚಿತ್ರವನ್ನು ಜಿಜಿ ಫಿಲಂಸ್ ಬ್ಯಾನರ್ ಮೂಲಕ ಎ.ಕೇಶವ, ಎ.ನರಸಿಂಹ ಹಾಗೂ ಎಂ.ಆರ್.ಗೌಡ ನಿರ್ಮಿಸುತ್ತಿದ್ದಾರೆ. ಸುರೇಶ್ ಗೋಸ್ವಾಮಿ ಅವರ ಕಥೆಗೆ ಎಂ.ಎಸ್. ರಮೇಶ್ ಸಂಭಾಷಣೆ ಬರೆದಿದ್ದಾರೆ. ರಾಜೇಶ್ ಕಟ್ಟ ಅವರ ಕ್ಯಾಮೆರಾವರ್ಕ್, ಸುರಾಗ್ ಹಾಗೂ ಸಾಧು ಕೋಕಿಲಾ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Related posts