Cini Reviews Cinisuddi Fresh Cini News 

‘ಕುಳ್ಳನ ಹೆಂಡತಿ’ಯಾ ನಿರ್ಮಲ ಪ್ರೀತಿಯ ಸೆಳೆತ (ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3/5

ಚಿತ್ರ : ಕುಳ್ಳನ ಹೆಂಡತಿ
ನಿರ್ದೇಶಕ : ವಿಶಾಖ್ ಎಸ್ ಎಸ್
ನಿರ್ಮಾಣ : ಸ್ಟಾರ್ ವೆಂಚರ್ಸ್
ಸಂಗೀತ : ಪರಮ್ ನಿರ್ವಿಕಾರ್
ಛಾಯಾಗ್ರಹಕ : ಶಿನೋಬ್ ಚಾಕ್ಕೊ
ತಾರಾಯಣ : ಆಶ್ರಿತ ವಿಶ್ವನಾಥ್, ರಾಸಿಕಾ ಬೀರೇಂದ್ರ, ಅರಸೀಕೆರೆ ರಾಜು, ಕೆಂಚಣ್ಣ, ವಿದ್ಯಾ ಅಶ್ವಥ್, ಛಾಯಶ್ರೀ ಹಾಗೂ ಮುಂತಾದವರು…

ಪ್ರೀತಿ ಅನ್ನೋ ಪದವೇ ಒಂದು ಸೆಳೆತ… ಅದು ಯಾವಾಗ, ಹೇಗೆ, ಆರಂಭಗೊಳ್ಳುತ್ತೆ ಅನ್ನೋದನ್ನ ಯಾರಿಂದಲೂ ಉಹಿಸಲಾಗದು. ಪ್ರೀತಿಗೆ ಜಾತಿ, ಅಂತಸ್ತು, ವಯಸ್ಸು, ಎತ್ತರ , ಅಂತರ ಯಾವುದು ಅಗತ್ಯವಿಲ್ಲ. ಅಂತಹದ್ದೇ ಎರಡು ಕಾಲಘಟ್ಟದಲ್ಲಿ ನಡೆಯುವ ಪ್ರೇಮ ಕಥೆಯ ಎಳೆಯನ ನೈಜಕ್ಕೆ ಹತ್ತಿರ ಎನ್ನುವಂತೆ ಪ್ರೇಕ್ಷಕರ ಮುಂದೆ ಈ ವಾರ ತೆರೆದಿಟ್ಟಿರುವಂಥ ಚಿತ್ರ “ಕುಳ್ಳನ ಹೆಂಡತಿ”.

ಅನುಕೂಲಸ್ಥ ಕುಟುಂಬದವರ ಮನೆಯಲ್ಲಿ ಕೆಲಸ ಮಾಡುವ ಕುಳ್ಳನೊಬ್ಬ ಅವರ ಮನೆಯ ಸುರದ್ರೂಪಿ ಸುಂದರಿ ಎತ್ತರದ ಹುಡುಗಿಯನ್ನು ಇಷ್ಟಪಡುತ್ತಾನೆ. ಆದರೆ ಅವಳಿಗೆ ಇವನ ಬಗ್ಗೆ ಇಷ್ಟವಿದ್ಯೋ ಇಲ್ಲವೋ ಎಂಬುದಕ್ಕೆ ದೇವರ ಮುಂದೆ ಚೀಟಿ ಹಾಕಿ ಪ್ರಾರ್ಥಿಸುತ್ತೇನೆ. ಪ್ರೀತಿ ಕುರುಡು ಎಂಬಂತೆ ಅವನ ಆಸೆಗೆ ಇವಳು ಒಪ್ಪಿ ಮನೆಯಿಂದ ಹೊರ ನಡೆಯುತ್ತಾಳೆ.

ಇನ್ನು ಮತ್ತೊಂದು ಟ್ರ್ಯಾಕ್ ನಲ್ಲಿ (ಆಶ್ರಿತಾ ವಿಶ್ವನಾಥ್) ಸುಂದರ ಹುಡುಗನೊಬ್ಬ ಫೋಟೋ, ವಿಡಿಯೋಗಳನ್ನು ತೆಗೆಯುತ್ತಾ ತನ್ನ ಪ್ರೀತಿಯ ತಾಯಿ, ಅಕ್ಕ, ಬಾವ ಹಾಗೂ ಅವರ ಮಗಳೊಂದಿಗೆ ತುಂಟಾಟ, ತರ್ಲೆ ಮಾಡುತ್ತಾ ಕಾಲ ಕಳೆಯುತ್ತಾನೆ. ಇದರ ನಡುವೆ ಕರೋನಾ ಎಂಬ ಮಹಾಮಾರಿ ಇಡೀ ಜನರ ಬದುಕು ಹಾಗೂ ಮನಸ್ಥಿತಿನ ತಲ್ಲಣಗೊoಡಾಗ ಸಹಾಯಕ್ಕೆ ಬರುವ (ರಾಸಿಕಾ ಬೀರೇಂದ್ರ) ನರ್ಸ್.

ತನ್ನ ಮನೆಯ ಸಮೀಪವೇ ಇರುವ ತನಗಿಂತ ವಯಸ್ಸಿನಲ್ಲಿ ಹಿರಿಯವಳಾದ ನರಸನ್ನ ಪ್ರೀತಿಸುವ ಯುವಕ. ಇದರ ನಡುವೆ ಒಂದಷ್ಟು ತಳಮಳ. ನರ್ಸ್ ಮದುವೆ ಮಾಡಲು ಅವರ ಕುಟುಂಬದವರ ಪರದಾಟ. ತನ್ನೊಟ್ಟಿಗೆ ನರ್ಸ್ ಕೆಲಸ ಮಾಡುವ ಗೆಳತಿಯರ ಬದುಕು ಬವಣೆಗೆ ಸ್ಪಂದಿಸುವ ನಾಯಕಿ.

ಕರೋನಾ ಎಂಬ ಮಹಾಮಾರಿ ಎಲ್ಲರ ಬದುಕಿನಲ್ಲಿ ಏನೆಲ್ಲಾ ಆಟವನ್ನು ಆಡಿಸಿ ಬದುಕಿನ ಪಾಠವನ್ನು ಹೇಳಿಕೊಟ್ಟಿದೆ. ಎರಡು ಕಾಲಘಟ್ಟದ ಈ ಪ್ರೇಮ ಕಥೆ ಹೇಗೆ ಬೆಸೆದುಕೊಂಡಿದೆ. ಪ್ರೀತಿಯ ಶಕ್ತಿ ಎಂತದು ಎಂಬುದನ್ನು ತಿಳಿಯಬೇಕಾದರೆ ನೀವೆಲ್ಲರೂ ಒಮ್ಮೆ ಈ “ಕುಳ್ಳನ ಹೆಂಡತಿ” ಚಿತ್ರವನ್ನು ನೋಡಲೇಬೇಕು.

ಎರಡು ಪ್ರೇಮ ಕತೆಯನ್ನು ವಿಭಿನ್ನ ಕಾಲಘಟ್ಟಗಳಲ್ಲಿ ನೈಜಕ್ಕೆ ಹತ್ತಿರವಾಗುವಂತೆ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವುದರಲ್ಲಿ ನಿರ್ದೇಶಕ ವಿಶಾಖ್ .ಎಸ್. ಎಸ್ ಗಮನ ಸೆಳೆದಿದ್ದಾರೆ. ಪ್ರೀತಿ, ಗೆಳೆತನ, ಸಂಬಂಧದ ಮೌಲ್ಯಗಳಿಗೆ ಜೀವ ತುಂಬಿದ್ದಾರೆ. ಒಂದಷ್ಟು ಚಿತ್ರದ ಓಟದಲ್ಲಿ ಹಿಡಿತ ಸಾಧಿಸಿದರೆ ಚೆನ್ನಾಗಿರುತ್ತಿತ್ತು.

ಗೆಳೆಯರ ಸಹಕಾರದಿಂದ ನಿರ್ಮಾಣಗೊಂಡ ಈ ಚಿತ್ರದ ಸಂಗೀತ, ಛಾಯಾಗ್ರಹಣ ಹಾಗೂ ಸಂಕಲನದ ಕೆಲಸ ಗಮನಹವಾಗಿದೆ. ನಾಯಕನಾಗಿ ಅಭಿನಯಿಸಿರುವ ಆಶ್ರಿತ ವಿಶ್ವನಾಥ್ ನೋಡಲು ಮುದ್ದು ಮುದ್ದಾಗಿ ಕಾಣುತ್ತಾರೆ. ಇನ್ನೆಷ್ಟು ಪಾತ್ರಕ್ಕೆ ಜೀವ ನೀಡಬಹುದಿತ್ತು. ಇನ್ನು ನಾಯಕಿಯಾಗಿ ಅಭಿನಯಿಸಿರುವ ರಾಸಿಕಾ ಬೀರೇಂದ್ರ ನೋಡಲು ಪರಭಾಷೆ ಬೆಡಗಿಯಾಗಿ ಕಂಡರೂ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇನ್ನು ಕೆಂಚಣ್ಣ, ಅರಸೀಕೆರೆ ರಾಜು ಪಾತ್ರಗಳ ಜೊತೆಗೆ ಮುದ್ದು ಮುದ್ದಾಗಿ ಕಾಣುವ ವಿದ್ಯಾ ಅಶ್ವತ್ ಕೂಡ ಗಮನ ಸೆಳೆಯುತ್ತಾರೆ. ಒಟ್ಟಾರೆ ನೈಜ ಪ್ರೇಮ ಕಥೆಗೆ ಕೊಂಡಿಯಾಗಿ ಮನ ಸೆಳೆಯುವ ವಿಚಾರದೊಂದಿಗೆ ಪ್ರೇಕ್ಷಕರ ಮುಂದೆ ಬಂದಂತ “ಕುಳ್ಳನ ಹೆಂಡತಿ” ಚಿತ್ರವನ್ನು ಒಮ್ಮೆ ನೋಡಬಹುದಾಗಿದೆ.

Related posts