Bollywood Cinisuddi Fresh Cini News 

ಕೃತಿಗೆ ಸೋಷಿಯಲ್ ಮೀಡಿಯಾದಲ್ಲಿ 26 ದಶಲಕ್ಷ ಹಿಂಬಾಲಕರು..!

ಕೃತಿ ಸನೋನ್-ಬಾಲಿವುಡ್‍ನ ಬೇಡಿಕೆಯ ನಟಿಯಾಗಿ ಭದ್ರ ನೆಲೆ ಕಂಡುಕೊಂಡಿದ್ದಾಳೆ. ಈ ಸ್ಟೈಲಿಷ್ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ. ಕೃತಿಗೆ ಲಕ್ಷಾಂತರ ಜನರ ಫ್ಯಾನ್‍ಗಳು ಮತ್ತು ಫಾಲೋವರ್‍ಗಳಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಈ ಬೆಡಗಿಗೆ ಇರುವ ಹಿಂಬಾಲಕರ ಸಂಖ್ಯೆ 26.1 ದಶಲಕ್ಷ.

ಕೃತಿ ಇಷ್ಟು ಜನಪ್ರಿಯತೆ ಪಡೆಯಲು ಕಾರಣವೂ ಇದೆ. ಈ ಸೌಮ್ಯ ನಟಿ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುತ್ತಾರೆ. ಶೂಟಿಂಗ್ ಮತ್ತು ಪ್ರೊಫೆಷನಲ್ ಕಮಿಟ್‍ಮೆಂಟ್ ಇಲ್ಲದಿದ್ದರೆ ತನ್ನ ಬಹುಪಾಲು ಸಮಯವನ್ನು ಅಭಿಮಾನಿಗಳ ಜೊತೆ ಇನ್‍ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿರಲು ಬಯಸುತ್ತಾಳೆ.

ಜೊತೆಗೆ ಫ್ಯಾಷನ್ ಪ್ರಿಯೆಯೂ ಕೃತಿ. ಆಗಾಗ ತನ್ನ ನವೀನ ವಸ್ತ್ರಗಳೊಂದಿಗೆ ಆಕರ್ಷಕ ಭಂಗಿಯ ಫೋಟೋಗಳು ಮತ್ತು ವಿಡಿಯೋಗಳನ್ನು ಅಪ್‍ಲೋಡ್ ಮಾಡುತ್ತಾಳೆ. ತನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನ ವಿಷಯಗಳನ್ನು ಫ್ಯಾನ್‍ಗಳು ಮತ್ತು ಫಾಲೋವರ್‍ಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಾಳೆ. ಈಕೆಯ ಸೋಷಿಯಲ್‍ನೆಸ್ ಬಾಲಿವುಡ್ ಮಂದಿಗೂ ಇಷ್ಟವಾಗಿದೆ.

ಮೊನ್ನೆ ಇನ್‍ಸ್ಟಾ ಪೋಸ್ಟ್ ನಲ್ಲಿ ಕೃತಿ ತನ್ನ ಹೊಸ ಉಡುಗೆಗಳೊಂದಿಗೆ ಫೋಟೋಗಳನ್ನು ಅಭಿಮಾನಿಗಳಿಗಾಗಿ ಪೋಸ್ಸ್ ಮಾಡಿದಳು. ಹೊಸ ಲುಕ್‍ನಲ್ಲಿ ಮಿಂಚಿದ ಕೃತಿ ಅಭಿಮಾನಿಗಳ ಹೃದಯ ಗೆದ್ದಿದ್ದಾಳೆ.

ಈ ನಟಿ ಈಗ ತನಗಿಂತಲೂ ರೂಪಸಿಯಾದ ಸೋದರಿ ನೂಪರ್ ಸನೋನ್‍ಳನ್ನು ಬಾಲಿವುಡ್‍ಗೆ ಕರೆತರಲು ವೇದಿಕೆ ಸಜ್ಜುಗೊಳಿಸಿದ್ದಾಳೆ. ಕೃತಿ ಅಭಿನಯದ ಹೌಸ್‍ಫುಲ್-4 ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದೆ.

ಈ ಚಿತ್ರ ಪ್ರೊಮೋಷನ್‍ನಲ್ಲಿ ಸನೋನ್ ಬ್ಯುಸಿ. ಅಕ್ಷಯ್ ಕುಮಾರ್, ರಿತೇಶ್ ದೇಶ್‍ಮುಖ್, ಬಾಬಿ ಡಿಯೋಲ್ ಕೃತಿ ಕರಬಂಧ ಮತ್ತು ಪೂಜಾ ಹೆಗ್ಡೆ ಈ ಚಿತ್ರದ ಇತರ ಪಾತ್ರಧಾರಿಗಳು ಸೂಪರ್‍ಹಿಟ್ ಲುಕಾ ಚುಪ್ಪಿ-2 ಚಿತ್ರಕ್ಕೂ ಕೃತಿ ಸಜ್ಜಾಗುತ್ತಿದ್ದಾಳೆ. ಅಲ್ಲದೇ ಇನ್ನೂ ಮೂರು ದೊಡ್ಡ ಬ್ಯಾನರ್‍ಗಳಿಂದ ಈ ನಟಿಗೆ ಆಫರ್‍ಗಳು ಬಂದಿವೆ.

Share This With Your Friends

Related posts