Cini Reviews Cinisuddi Fresh Cini News 

ಆ ಸೀಟಿನಲ್ಲಿ ಕುಂತವರ ಕೊಲೆ..! : ಕೃಷ್ಣ ಟಾಕೀಸ್ ಚಿತ್ರ ಹೇಗಿದೆ..? ಇಲ್ಲಿದೆ ಚಿತ್ರವಿಮರ್ಶೆ

ರೇಟಿಂಗ್ : 3.5 / 5
ಚಿತ್ರ : ಕೃಷ್ಣ ಟಾಕೀಸ್

ಸ್ನೇಹಿತನ ಕೊಲೆ ಹಿಂದೆ ಹೊರಟವನಿಗೆ ದೆವ್ವ ಕಾಣುತ್ತಾ..? ದ್ವೇಷ ಕಾಣುತ್ತಾ..? ಕೃಷ್ಣ ಟಾಕೀಸ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್

ಕೃಷ್ಣ ಟಾಕೀಸ್ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿ, ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದೆ. ಇಷ್ಟು ದಿನ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಜಯ್ ಈ ಸಿನಿಮಾದಲ್ಲಿ ಪತ್ರಕರ್ತನಾಗಿ, ಆ ಭಯಾನಕ ಸುಳಿವಿನ ಹಿಂದೆ ಬೀಳೋ ಪತ್ರಕರ್ತನ ಪಾತ್ರ ನಿಭಾಯಿಸಿ ಗೆದ್ದಿದ್ದಾರೆ. ಯಾವುದೇ ಪಾತ್ರಕೊಟ್ಟರು ಅದಕ್ಕೆ ಜೀವ ತುಂಬುವ ತಾಕತ್ತು ಅಜಯ್ ರಾವ್ ಗಿದೆ. ಅದನ್ನ ಕೃಷ್ಣ ಟಾಕೀಸ್ ನಲ್ಲೂ ತೋರಿಸಲಾಗಿತ್ತು.

ಕೃಷ್ಣ ಟಾಕೀಸ್ ಸಿನಿಮಾ ನೈಜ ಘಟನೆಯ, ಥಿಯೇಟರ್ ಕಥೆ ಹೊಂದಿರೋ ಸಿನಿಮಾ. ಸಿನಿಮಾ ಶುರು ಆಗೋದೇನೋ ಸಿಟಿಯಲ್ಲೇ ಆದರೂ ಕ್ಯೂರಿಯಾಟಿಸಿ ಹುಟ್ಟಿಸಿ, ಸಿನಿಮಾ ಮುಗಿಯುವವರೆಗು ಕೂರುವಂತೆ ಮಾಡೋದು ಆ ಒಂದು ಕಲ್ಲು. ಕೃಷ್ಣ ಟಾಕೀಸ್ ನಲ್ಲಿ ಪ್ರತಿಸಲ ಸಿನಿಮಾ ನೋಡಿಕೊಂಡು ಹೋದವರಲ್ಲಿ ಒಬ್ಬರಲ್ಲ ಒಬ್ಬರು ಕಾಣೆಯಾಗುತ್ತಿರುತ್ತಾರೆ. ಅದು ಯಾರು ಎಫ13 ಸೀಟ್ ನಂಬರಿನಲ್ಲಿ ಕುಳಿತು ಹೋಗಿರುತ್ತಾರೋ ಅವರೇ ಅಂದೇ ಕೊಲೆಯಾಗುತ್ತಾರೆ.

ಅಜಯ್ ರಾವ್ ಸಿನಿಮಾದಲ್ಲಿ ಕ್ರೈಂ ವರದಿಗಾರನಾಗಿರುತ್ತಾನೆ. ಒಮ್ಮೆ ಆತನ ಸ್ನೇಹಿತ ಕೂಡ ಅದೇ ನಂಬರಿನ ಸೀಟಿನಲ್ಲಿ ಕೂತು ಸಿನಿಮಾ ನೋಡಿ ಬಂದಿರುತ್ತಾನೆ. ಆತನು ಕಾಣೆಯಾಗುತ್ತಾನೆ. ಇದರ ಹಿಂದೆ ಬಿದ್ದ ಕ್ರೈಂ ವರದಿಗಾರನಿಗೆ ನಾನಾ ಲೋಕಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ಸೆಕ್ಸ್, ಡ್ರಗ್, ಮಾಫಿಯಾ ಜೊತೆ ಜೊತೆಗೆ ಆತ್ಮಗಳ ವಾಯ್ಸ್, ಎಲ್ಲವೂ ನಾಯಕನಿಗೆ ಗೊಂದಲಮಯ ವಾತಾವರಣ ಸೃಷ್ಟಿಸುತ್ತವೆ. ಈ ಮಧ್ಯೆ ಸತ್ತ ಸ್ನೇಹಿತನ ಹಿಂದಿನ ಕಾರಣ ಹುಡುಕುವ ಜೊತೆಗೆ ನೊಂದ ಆತ್ಮಗಳಿಗೂ ನ್ಯಾಯ ದೊರಕಿಸಿಕೊಡುವ ಜವಬ್ದಾರಿ ಹೀರೋನದ್ದೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದ್ದು, ಪ್ರೇಕ್ಷಕರನ್ನ ಮನಸ್ಸು ಒಮ್ಮೆ ನಡುಗಿದರೆ, ಚಿಕ್ಕಣ್ಣನ ಕಾಮಿಡಿ ಹೊಟ್ಟೆ ಉಣ್ಣಾಗಿಸುವಷ್ಟು ನಗಿಸಿದೆ. ಲವ್, ಆ್ಯಕ್ಷನ್, ಸೆಂಟಿಮೆಂಟ್ ಎಲ್ಲವೂ ಸಿನಿಮಾದಲ್ಲಿ ಅಡಗಿದೆ. ನಿರ್ದೇಶಕ ವಿಜಯಾನಂದ್ ವಿಭಿನ್ನ ಚಿತ್ರವನ್ನು ತೆರೆಯ ಮೇಲೆ ತಂದಿದ್ದಾರೆ.

ನಿರ್ಮಾಪಕ ಗೋವಿಂದರಾಜು ರವರ ಈ ಪ್ರಯತ್ನ ಮೆಚ್ಚುವoತಹದ್ದು , ಹಾಗೆಯೇ ಕಲಾವಿದರಾದ ಯಶ್ ಶೆಟ್ಟಿ, ಪ್ರಮೋದ್ ಶೆಟ್ಟಿ ಕೂಡ ಎಲ್ಲರನ್ನ ರಂಜಿಸಿದ್ದಾರೆ. ಅಭಿಷೇಕ್ ಜಿ.ಕಾಸರಗೋಡು ಅವರ ಛಾಯಾಗ್ರಹಣದಲ್ಲಿ ಸುಂದರವಾದ ಚಿತ್ರಣ ಮೂಡಿಬಂದಿದೆ.

ಶ್ರೀಧರ್ ವಿ ಸಂಭ್ರಮ್ ಸಂಗೀತ ಮನಮೋಹಕವಾಗಿದೆ. ಸಸ್ಪೆನ್ಸ್, ಹಾರರ್ ಕಂ ಥ್ರಿಲ್ಲರ್ ಕಥೆಯ ಈ ಚಿತ್ರದಲ್ಲಿ ಅಪೂರ್ವ ಮತ್ತು ಸಿಂಧೂ ಲೋಕನಾಥ್  ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Related posts