Cinisuddi Fresh Cini News 

‘ಕೃಷ್ಣ ಗಾರ್ಮೆಂಟ್ಸ್’ ಚಿತ್ರದ ಆಡಿಯೋ ರಿಲೀಸ್

ಸ್ಯಾಂಡಲ್‍ವುಡ್ ಎಂಬ ಮಾಯಲೋಕವೇ ಹಾಗೆ. ನಿರ್ದೇಶಕನಾಗಬೇಕೆಂದು ಬಯಸಿ ಬರುವವರು ಸ್ಟಾರ್ ಹೀರೋಗಳಾಗುತ್ತಾರೆ, ಹೀರೋ ಆಗಬೇಕೆಂದುಕೊಂಡವರು ನಿರ್ದೇಶಕರಾಗುತ್ತಾರೆ, ಅದೇ ರೀತಿ ಸಿದ್ಧು ಪೂರ್ಣಚಂದ್ರ ಅವರು ಸಾಹಿತಿ ಆಗಬೇಕೆಂದುಕೊಂಡು ಬಂದವರು ಕೃಷ್ಣ ಗಾರ್ಮೆಂಟ್ಸ್ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನ ಪಟ್ಟವನ್ನು ಅಲಂಕರಿಸಿದ್ದಾರೆ.

 ಸಿದ್ದು ಪೂರ್ಣಚಂದ್ರ ಅವರು  ನಿರ್ದೇಶಿಸುತ್ತಿರುವ ಕೃಷ್ಣ ಗಾರ್ಮೆಂಟ್ಸ್‍ಗೆ ಅವರೇ ಕಥೆ, ಚಿತ್ರಕಥೆಯನ್ನು  ಒದಗಿಸಿದ್ದು , ಸಾಹಿತಿಯಾಗಿರುವ  ಸಿದ್ದು ಅವರೇ ಎಲ್ಲಾ ಹಾಡುಗಳನ್ನು ಅವರೇ ರಚಿಸಿದ್ದಾರೆ. ಮೊನ್ನೆ ಈ ಚಿತ್ರದ  ಧ್ವನಿಸುರುಳಿ ಹಾಗೂ ಟ್ರೈಲರ್  ಬಿಡುಗಡೆ ಸಮಾರಂಭ  ನಡೆಯಿತು. ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡರು  ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.

ರಘು ಧನ್ವಂತ್ರಿ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಭಾಸ್ಕರ್, ನೀನಾಸಂ, ರಶ್ಮಿತ್, ಚಂದುಗೌಡ, ವರ್ಧನ್ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದ ನಿರ್ದೇಶಕ ಸಿದ್ದು, ಕೃಷ್ಣ ಗಾರ್ಮೆಂಟ್ಸ್ ಚಿತ್ರವು ಡಿಫರೆಂಟ್ ಚಿತ್ರವಾಗಿದ್ದು ಒಂದೇ ಕ್ಯಾಟರಿಗೆ ಹೋಲಿಸಲು ಆಗುವುದಿಲ್ಲ, ಪ್ರತಿಯೊಂದು ದೃಶ್ಯದಲ್ಲೂ ಟ್ವಿಸ್ಟ್‍ಗಳಿವೆ.

ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಕಾಡಲಿದೆ. 2 ವರ್ಷಗಳ ಕಾಲ ತೆಗೆದುಕೊಂಡು ಬರೆದ ಈ ಕಥೆಯನ್ನು ನಿರ್ಮಾಪಕ ಷಣ್ಮುಖ ಅ.ಬೆಂಡಿಗೇರಿ ಹೇಳಿದಾಗ ಕಥೆ ತುಂಬಾ ಚೆನ್ನಾಗಿದೆ ನೀವೇ ನಿರ್ದೇಶಿಸಿ ಎಂದು ಹೇಳಿದರು. ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿದ್ದರೆ, ಹೋಮ್ಲಿ ಬೆಡಗಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ಹಾಸನ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಬೇಲೂರು ಸುತ್ತುಮುತ್ತ ಚಿತ್ರೀಕರಣ ಮಾಡಿದ್ದೇವೆ . ಮೇ ತಿಂಗಳಲ್ಲಿ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ.
ನಿರ್ಮಾಪಕ ಷಣ್ಮುಖ ಮಾತನಾಡಿ, ಸಿನಿಮಾವು ತುಂಬಾ ನೈಜವಾಗಿ ಬಂದಿದ್ದು, ನಿರ್ದೇಶಕ ಸಿದ್ದು ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ ಎಂದು ಹೇಳಿದರು.

ಭಾಸ್ಕರ್ ಮಾತನಾಡಿ, ನನಗೆ ಶ್ರೀಮಾನ್ ಶ್ರೀಮತಿ ಸೀರಿಯಲ್ ತುಂಬಾ ಹೆಸರು ತಂದುಕೊಟ್ಟಿತು. ಲೌಡ್‍ಸ್ಪೀಕರ್ ಮೂಲಕ ಬೆಳ್ಳಿತೆರೆಗೆ ಬಂದ ನನಗೆ ಕೃಷ್ಣಗಾರ್ಮೆಂಟ್ಸ್ 2ನೆ ಚಿತ್ರ. ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರ ತುಂಬಾ ಚೆನ್ನಾಗಿದೆ ಎಂದು ಹೇಳಿದರು.

ನಾಯಕಿ ರಶ್ಮಿತಾ ಮಾತನಾಡಿ, ನನಗೆ ಮೊದಲಿನಿಂದಲೂ ಸಿನಿಮಾ ಹೀರೋಯಿನ್ ಆಗಬೇಕೆಂಬ ಕನಸು ಇತ್ತು, ಅದು ಕೃಷ್ಣಗಾರ್ಮೆಂಟ್ಸ್ ಮೂಲಕ ನೆರವೇರಿದೆ. ಈ ಚಿತ್ರದಲ್ಲಿ ನಾನು ಗ್ಲಾಮರ್ ಇಲ್ಲದ ಸಾಮಾನ್ಯ ಹುಡುಗಿ ಪಾತ್ರದಲ್ಲಿದ್ದೇನೆ. ನಿರ್ದೇಶಕ ಸಿದ್ದು ಅವರು ಬರೆದಿರುವ ಕಥೆ ತುಂಬಾ ನೈಜವಾಗಿ ಪ್ರೇಕ್ಷಕರ ಮನಗೆಲ್ಲಲಿದೆ ಎಂದರು.
ಈ ಚಿತ್ರದಲ್ಲಿ 3 ಹಾಡುಗಳಿದ್ದರೂ ಆನಂದ್ ಆಡಿಯೋ ಅವರು ಮಾರ್ಕೆಟಿಂಗ್ ಮಾಡಿದ್ದಾರೆ.
ಮೊದಲ ಪ್ರಯತ್ನದಲ್ಲೇ ಶತಕ ಬಾರಿಸಲು ಹೊರಟಿರುವ ನಿರ್ದೇಶಕ ಸಿದ್ದು ಅವರು ಪ್ರೇಕ್ಷಕರಿಂದ ಉತ್ತಮ ಪ್ರೋತ್ಸಾಹ ದೊರೆಯುವಂತಾಗಲಿ.

Share This With Your Friends

Related posts