Cinisuddi Fresh Cini News 

ಮೇನಲ್ಲಿ ಬಿಡುಗಡೆಯಾಗಲಿದೆ ಕೃಷ್ಣ ಗಾರ್ಮೆಂಟ್ಸ್ ಚಿತ್ರ

ಆದಿತ್ಯ ಸಿನಿ ಕಂಬೈನ್ಸ್ ಲಾಂಛನದಲ್ಲಿ ಷಣ್ಮುಖ ಜಿ ಬೆಂಡಿಗೇರಿ ಅವರು ನಿರ್ಮಿಸಿರುವ ಕೃಷ್ಣ ಗಾರ್ಮೆಂಟ್ಸ್ ಚಿತ್ರ ಮೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಏಪ್ರಿಲ್ 22ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ.

ರಘು ಧನ್ವಂತ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಚಿತ್ರದ ಮೂರು ಹಾಡುಗಳು ಆನಂದ್ ಆಡಿಯೋ ಮೂಲಕ ಲೋಕಾರ್ಪಣೆಯಾಗಲಿದೆ. ಪ್ರಶಾಂತ್‍ರಾವ್ ವರ್ಮ ಅವರು ನಿರ್ಮಾಣದ ನಿರ್ವಹಣೆಯ(ಎಕ್ಸಿಕ್ಯೂಟಿವ್ ಪ್ರೊಡ್ಯುಸರ್) ಜವಾಬ್ದಾರಿ ಹೊತ್ತಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಹಾಸನ, ದೊಡ್ದಬಳ್ಳಾಪುರ, ಬೆಂಗಳೂರು, ಶ್ರವಣ ಬೆಳಗೊಳ, ಚನ್ನಪಟ್ಟಣದಲ್ಲಿ 35ದಿನಗಳ ಕಾಲ ಚಿತ್ರೀಕರಣ ನಡೆದಿದೆ.

ಶ್ರೀಮಾನ್ ಶ್ರೀಮತಿ ಧಾರಾವಾಹಿ ಖ್ಯಾತಿಯ ಭಾಸ್ಕರ್ ನೀನಾಸಂ ಚಿತ್ರದ ನಾಯಕರಾಗಿ ನಟಿಸಿದ್ದು, ಬ್ರಹ್ಮಾಸ್ತ್ರ ಧಾರಾವಾಹಿಯ ರಶ್ಮಿತ ನಾಯಕಿಯಾಗಿ ಅಭಿನಯಿಸಿದ್ದಾರೆ.

ಚಂದು(ಲಕ್ಷ್ಮೀ ಬಾರಮ್ಮ), ರಾಜೇಶ್ ನಟರಂಗ, ಪ್ರಮಿಳಾ ಸುಬ್ರಮಣ್ಯಂ, ಲಕ್ಷ್ಮೀನರಸಿಂಹ, ರಜನಿಕಾಂತ್, ವರ್ಧನ್ ತೀರ್ಥಹಳ್ಲಿ, ಹೆಚ್.ಎಂ.ಟಿ.ವಿಜಯ್, ಕಿರಣ್ ಹೊನ್ನಾವರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿದಾನಂದ್ ಹಾಗೂ ಚಂದ್ರಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.

Share This With Your Friends

Related posts