Cinisuddi Fresh Cini News 

ಶಿವರಾತ್ರಿಗೆ ಕೋಟಿಗೊಬ್ಬ-3 ಟೀಸರ್

ಸ್ಯಾಂಡಲ್ ವುಡ್ ನ ಬಾದ್ ಶಾ ಕಿಚ್ಚ ಸುದೀಪ್ ರ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಕೋಟಿಗೊಬ್ಬ- 3 ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಇದೇ 21 ರಂದು ಶಿವರಾತ್ರಿಯ ಹಬ್ಬಕ್ಕೆ ಕಿಚ್ಚ ಸದ್ದು ಮಾಡಲಿದ್ದಾರೆ.

ಈಗಾಗಲೇ ಈ ಚಿತ್ರದ ಮೇಕಿಂಗ್ ಸ್ಯಾಂಡಲ್ವುಡ್ ನಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಇನ್ನು ಚಿತ್ರಕ್ಕೆ ಶಿವಕಾರ್ತಿಕ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಮ್ಯಾಜಿಕಲ್‌ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡ್ತಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣ ಮಾಡಿರುವ ಈ ಚಿತ್ರವನ್ನು ಎಂ.ಬಿ .ಬಾಬು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಬಹಳಷ್ಟು ಕುತೂಹಲವನ್ನು ಹುಟ್ಟು ಹಾಕಿರುವ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಅಬ್ಬರಿಸಲಿದೆ.

Share This With Your Friends

Related posts