Cinisuddi Fresh Cini News 

ಕೋಮಲ್ ಹೊಸ ಚಿತ್ರದ ಟೈಟಲ್ ಗಾಗಿ ಕಾಯುತ್ತಿದ್ದಾರೆ ರಾಜಕೀಯ ದಿಗ್ಗಜರು..!

ಚಿತ್ರ ಪ್ರೇಮಿಗಳೇ ಗಮನವಿಟ್ಟು ನೋಡಿ… ನಟ ಕೋಮಲ್ ಅಭಿನಯದ ನೂತನ ಚಿತ್ರದ ಟೈಟಲ್ ಅನಾವರಣಕ್ಕೆ ಬೆಂಬಲವಾಗಿ ಪ್ರಧಾನಮಂತ್ರಿ , ಮುಖ್ಯಮಂತ್ರಿ , ಮಾಜಿ ಮುಖ್ಯಮಂತ್ರಿಗಳು ಸಾಥ್ ನೀಡುತ್ತಿದ್ದಾರೆ. ಇದು ರಿಯಲ್ ಅಥವಾ ರೀಲೋ ಅನ್ನೋದು ನಿಮಗೆ ತಿಳಿಯಬೇಕಾ , ಸದ್ಯ ಬಿಡುಗಡೆ ಆಗಿರುವ ಈ ವೀಡಿಯೋ ನಿಮಗೆ ಒಂದಷ್ಟು ವಿಚಾರವನ್ನು ಹೇಳುತ್ತದೆ.

ನಟ ಕೋಮಲ್ , ನಿರ್ಮಾಪಕ ಡಾ. ಟಿ.ಆರ್. ಚಂದ್ರಶೇಖರ್ ಹಾಗೂ ನಿರ್ದೇಶಕ ಕೆ.ಎಲ್. ರಾಜಶೇಖರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರದಿಂದ ವಿಭಿನ್ನ ನ ಟೈಟಲ್ ಘೋಷಣೆಯ ದಿನಾಂಕವನ್ನು ಗೊತ್ತುಪಡಿಸುವ ವೀಡಿಯೋ ಬಿಡಗಡೆಯಾಗಿದ್ದು , ಟೈಟಲ್ ಇದೇ ಅಕ್ಟೋಬರ್ 30ರ ಶುಕ್ರವಾರ ಬೆಳಿಗ್ಗೆ 10ಕ್ಕೆ ಘೋಷಣೆಯಾಗಲಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಮೂಲಕ ಈ ಚಿತ್ರ ಅದ್ದೂರಿಯಾಗಿ ಸದ್ದು ಮಾಡಲಿದೆ.

Related posts