Cinisuddi Fresh Cini News 

ಡಾ. ಶಿವಣ್ಣ ಹುಟ್ಟುಹಬ್ಬದ ವಿಶೇಷ ಕಾಮನ್ ಡಿಪಿ (CDP) ರಿಲೀಸ್ ಮಾಡಿದ್ರು ಕಿಚ್ಚ

ಈ ಬಾರಿ ಕರುನಾಡ ಚಕ್ರವರ್ತಿ ಡಾ ಶಿವಣ್ಣ ಹುಟ್ಟುಹಬ್ಬದ ಸಂಭ್ರಮ ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದು, ಎಲ್ಲರಲ್ಲೂ ಒಂಥರಾ ಸಂಭ್ರಮದ ವಾತಾವರಣ ಮೂಡಿದೆ.

ಹೌದು, ಸ್ಯಾಂಡಲ್ ವುಡ್ ನಲ್ಲಿ ವಿಲನ್ ಸಿನಿಮಾ ವೇಳೆ ಹಲವಾರು ರೀತಿಯಲ್ಲಿ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ನಡೆದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಅಲ್ಲಿಂದಲೂ ಇರಸು ಮುರುಸಿನ ಲಕ್ಷಣಗಳೇ ಕಾಣುತಿದ್ದು, ಈ ವರ್ಷ ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ರೆಡಿ ಮಾಡಿರೋ ವಿಶೇಷ ಕಾಮನ್ ಡಿಪಿ (CDP) ಯನ್ನ ಅಭಿನಯ ಚಕ್ರವರ್ತಿ ಬಿಡುಗಡೆ ಮಾಡಿದ್ದು, ಚಂದನವನದಲ್ಲಿ ಹೊಸದೊಂದು ಸಂತಸದ ಅಲೆ ಎದ್ದಂತಾಗಿದೆ.

ಶಿವಸೈನ್ಯ ತಂಡ ರೂಪಿಸಿರೋ ವಿಶೇಷ ಕಾಮನ್ ಡಿಪಿಯನ್ನು ಕಿಚ್ಚ ಸುದೀಪ್ ಅವರು, ಅವರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

ಜುಲೈ 12 ಕ್ಕೆ ಶಿವಣ್ಣ 58 ನೇ ವಸಂತಕ್ಕೆ ಕಾಲಿಡುತ್ತಿದ್ದು, ಕಿಚ್ಚ ಸುದೀಪ್ ಜೊತೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಹ ಬರ್ತ್ ಡೇ ಟ್ವಿಟ್ಟರ್ ಟ್ರೆಂಡ್ ನ ಹ್ಯಾಷ್ ಟ್ಯಾಗ್ ಲಾಂಚ್ ಮಾಡಿರೋದು ಖುಷಿಯ ವಿಚಾರ. ಈ ವರ್ಷದ ಸಂಭ್ರಮಾಚರಣೆಯನ್ನು “ಶಿವಣ್ಣ ಮಹೋತ್ಸವ” ಎಂಬ ಹೆಸರಿನಿಂದ ಆಚರಿಸುತಿದ್ದು, ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಅವರು ಆ ಟೈಟಲ್ ನ್ನ ಲಾಂಚ್ ಮಾಡಿದ್ದರು.

ಶಿವಣ್ಣ ಅವರ ಹುಟ್ಟುಹಬ್ಬ ಈ ವರ್ಷ ಕರೋನಾ ಕಾಟದಿಂದಾಗಿ ಮತ್ತು ಅಭಿಮಾನಿಗಳ ಸುರಕ್ಷತೆಗಾಗಿ ಸ್ವತಃ ಶಿವಣ್ಣ ಅವರೇ ಖುದ್ದಾಗಿ ದಯವಿಟ್ಟು ಮನೆ ಹತ್ರ ಬರಬೇಡಿ, ಆಚರಣೆ ಮಾಡಬೇಡಿ ಎಂಬ ಸಂದೇಶ ರವಾನೆ ಮಾಡಿದ್ದು, ಅಭಿಮಾನಿಗಳ ಮೇಲಿನ ಪ್ರೀತಿಗೆ ಶಿವಣ್ಣ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ. .

Share This With Your Friends

Related posts