Cinisuddi Fresh Cini News 

“ಡೆನ್ವರ್” ಬ್ರಾಂಡ್ ಗೆ ಕಿಚ್ಚ ರಾಯಭಾರಿ

ಸ್ಯಾಂಡಲ್ ವುಡ್ ನ ಬಾದ್ ಶಾ , ಕಿಚ್ಚ ಸುದೀಪ ಈಗ “ಡೆನ್ವರ್ ” ಪರ್ಫ್ಯೂಮ್ ನ ಕರ್ನಾಟಕದ ರಾಯಭಾರಿ ಯಾಗಿ 2 ವರ್ಷ ಕೈಜೋಡಿಸಲಿದ್ದಾರೆ. ಭಾನುವಾರ ನಗರದ ಎಂ.ಜಿ. ರಸ್ತೆಯಲ್ಲಿನ ತಾಜ್ ಹೊಟೇಲ್ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸ್ವತಃ ಕಿಚ್ಚ ಸುದೀಪ ಮತ್ತು ಡೆನ್ವರ್ ಕಂಪನಿಯ ನಿರ್ದೇಶಕ ಸೌರವ್ ಗುಪ್ತಾ ಭಾಗವಹಿಸಿ ಪ್ರಾಡಕ್ಟ್ ಮತ್ತು ಡೆನ್ವರ್ ಬಗ್ಗೆ ಮಾಹಿತಿ ನೀಡಿದರು. ಬ್ರಾಂಡ್ನ ಮಾರ್ಕೆಂಟಿಂಗ್ ಮತ್ತು ಸೇಲ್ಸ್ನ ನಿರ್ದೇಶಕರಾಗಿರುವ ಸೌರವ್ ಗುಪ್ತಾ, ಈಗಾಗಲೇ ನಾವು ಕಳೆದ ಹಲವು ವರ್ಷಗಳಿಂದ ಈ ಮಾರುಕಟ್ಟೆಯಲ್ಲಿದ್ದೇವೆ.

ದಕ್ಷಿಣ ಮಾರುಕಟ್ಟೆಯಲ್ಲಿಯೂ ಒಳ್ಳೆಯ ಹೋಲ್ಡ್ ಸೃಷ್ಟಿ ಮಾಡಿದ್ದೇವೆ. ಅದರಂತೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಸೇರಿ ಬಹುಭಾಷೆಗಳಲ್ಲಿ ಹೆಸರು ಮಾಡಿರುವ ಬಾದ್ಷಾ ಕಿಚ್ಚ ಸುದೀಪ್ ರಾಯಭಾರಿಯಾಗಿದ್ದಾರೆ.

ನಮ್ಮ ಬ್ರಾಂಡ್ನ ಟ್ಯಾಗ್ ಲೈನ್ ದಿ ರಿಯಲ್ ಸೆಂಟ್ ಆಫ್ ಸಕ್ಸಸ್. ಇದೀಗ ಆ ರೀತಿ ಯಶಸ್ಸು ಕಂಡ ಸುದೀಪ್ ಅವರು ನಮ್ಮ ಬಳಗ ಸೇರಿಕೊಂಡಿದ್ದಕ್ಕೆ ಅವರಿಗೆ ನಮ್ಮ ಕಡೆಯಿಂದ ಸ್ವಾಗತ ಎಂದರು. ಡೆನ್ವರ್ ಫರ್ಪ್ಯೂಮ್ ಮತ್ತು ಡಿಯೋಡ್ರಂಟ್ನ ರಾಯಭಾರಿಯಾಗಿರುವ ಸುದೀಪ್ ಮಾತನಾಡಿ, ಸಿನಿಮಾ ಕ್ಷೇತ್ರದಲ್ಲಿ ಈ ಥರಹದ ಪ್ರಾಡಕ್ಟ್ಗಳು, ಬ್ರಾಂಡ್ಗಳ ಅವಕಾಶ ಸಹಜ.

ಯಾವ ಬ್ರಾಂಡ್ ನಮಗೆ ಹೊಂದಾಣಿಕೆ ಆಗುತ್ತದೋ ಅದನ್ನು ಆಯ್ದುಕೊಳ್ಳಬೇಕು. ಸೌರವ್ ಅವರು ಈ ಬ್ರಾಂಡ್ ಬಗ್ಗೆ ಹೇಳಿದಾಗ, ಖುಷಿಯಾಯಿತು. ಈಗಾಗಲೇ ಹಿಂದಿಯಲ್ಲಿ ಶಾರುಖ್ ಖಾನ್, ತೆಲುಗಿನಲ್ಲಿ ಮಹೇಶ್ ಬಾಬು ಈ ಬ್ರಾಂಡ್ನ ರಾಯಭಾರಿಯಾಗಿದ್ದಾರೆ.

ಅದೇ ರೀತಿ ಡೆನ್ವರ್ ಟೀಮ್ ಸಹ ಹಾಗೇ ಇದೆ. ಹಾಗಾಗಿ ಈ ಪ್ರಾಡಕ್ಟ್ನ ಮುಖವಾಗಿದ್ದೇನೆ ಎಂದರು. ಈಗಾಗಲೇ ಎಲ್ಲೆಡೆ ಡೆನ್ವರ್ ಮುಂಚೂಣಿಯಲ್ಲಿದೆ. ಅದರಲ್ಲೂ ಇ-ಕಾಮರ್ಸ್ ಕ್ಷೇತ್ರದಲ್ಲಿಯೂ ಹಿಡಿತ ಸಾಧಿಸಿದೆ. ಕರ್ನಾಟಕದಲ್ಲಿ ಅದರ ಬೆಳವಣಿಗೆಯನ್ನು ಮತ್ತಷ್ಟು ಎತ್ತರಕ್ಕೇರಿಸಬೇಕಾಗಿರುವುದರಿಂದ ಸುದೀಪ್ ಅವರು ಡೆನ್ವರ್ ಮುಖವಾಗಿದ್ದಾರೆ.

ಯುವ ಪೀಳಿಗೆಯೇ ನಮ್ಮ ಟಾರ್ಗೆಟ್ ಆಗಿರುವುದರಿಂದ, ಸುದೀಪ್ ಅವರೂ ತಮ್ಮ ಫಿಟ್ನೆಸ್, ಸ್ಟೈಲ್ ಮೂಲಕವೇ ಯುವಕರ ಮನಸ್ಸಿನಲ್ಲಿದ್ದಾರೆ. ಇಲ್ಲಿಯೂ ಅಂದುಕೊಂಡ ಟಾರ್ಗೆಟ್ ತಲುಪಲಿದ್ದೇವೆ ಎಂಬ ಭರವಸೆ ಇದೆ ಎಂದರು ಸೌರವ್ ಗುಪ್ತಾ.2007 ರಲ್ಲಿ ಸ್ಥಾಪನೆಯಾಗಿರುವ ಡೆನ್ವರ್ ಫರ್ಪ್ಯೂಮ್ ಮತ್ತು ಡಿಯೋಡ್ರಂಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.
ಭಾರತ ಸೇರಿ ಆಫ್ರಿಕಾ, ಮಾಲ್ಡೀವ್ಸ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಲೇಷ್ಯಾಗಳಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಲಭ್ಯವಿದೆ. 2017ರಲ್ಲಿ ಶಾರುಖ್ ಖಾನ್, 2019ರಲ್ಲಿ ಟಾಲಿವುಡ್ ನಟ ಮಹೇಶ್ ಬಾಬು ಈ ಬ್ರಾಂಡ್ನ ಅಂಬಾಸಿಡರ್ ಆಗಿದ್ದರು. ಇದೀಗ ಕರ್ನಾಟಕದಲ್ಲಿ ಸುದೀಪ್ ಬ್ರಾಂಡ್ನ ಮುಖವಾಗುತ್ತಿದ್ದಾರೆ.

Related posts