Cini Reviews Cinisuddi Fresh Cini News 

ಮನ ಮಿಡಿಯುವ ‘ಖಾಸಗಿ ಪುಟಗಳು’ (ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಖಾಸಗಿ ಪುಟಗಳು
ನಿರ್ದೇಶಕ : ಸಂತೋಷ್ ಶ್ರೀಕಂಠಪ್ಪ
ನಿರ್ಮಾಪಕರು : ಮಂಜು, ವೀಣಾ , ಮಂಜುನಾಥ್
ಸಂಗೀತ : ವಾಸುಕಿ ವೈಭವ್
ಛಾಯಾಗ್ರಹಕ : ವಿಶ್ವಜಿತ್ ರಾವ್
ತಾರಾಗಣ : ವಿಶ್ವ , ಲಿಯೋನಿಲ್ಲಾ ಶ್ವೇತಾ ಡಿಸೋಜಾ, ಚೇತನ್ ದುರ್ಗಾ, ನಂದಕುಮಾರ್, ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್ ಹಾಗೂ ಮುಂತಾದವರು…

ಕರಾವಳಿಯ ಹಿನ್ನೆಲೆಯಲ್ಲಿ ಅರಳುವ ಸುಂದರ ಪ್ರೇಮ ಕಾವ್ಯವನ್ನು ಸ್ನೇಹ, ಕಾಲೇಜು ಜೀವನ, ಪ್ರಣಯ, ಕೆಲವು ತಪ್ಪು ನಿರ್ಧಾರಗಳು ಮತ್ತು ವಸ್ತು ಮೇಲಿನ ಪ್ರೀತಿಯ ಸುತ್ತಾ ಬೆಸೆದುಕೊಂಡು ಸೂಕ್ಷ್ಮ ತಲ್ಲಣದೊಂದಿಗೆ ಪರಿಣಾಮಕಾರಿಯಾಗಿ ಹೊರಹೊಮ್ಮಿರುವಂತ ಚಿತ್ರ “ಖಾಸಗಿ ಪುಟಗಳು”. ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ಖಾಸಗಿ ಪುಟ್ಟುಗಳು ಇದ್ದೇ ಇರುತ್ತದೆ ಎಂಬಂತೆ ತೆರೆದುಕೊಳ್ಳುವ ಕಥಾನಾಯಕನ ಫ್ಲಾಶ್ ಬ್ಯಾಕ್ ಎಳೆಯಲ್ಲಿ ಸೂರ್ಯ(ವಿಶ್ವ) ಕಾಲೇಜಿನಲ್ಲಿ ತನ್ನ ಗೆಳೆಯರೊಂದಿಗೆ ನನ್ನಿಷ್ಟದಂತೆ ಸ್ವತಂತ್ರ ಹಕ್ಕಿಯಾಗಿ ಇರುವಾಗಲೇ ಭೂಮಿ ( ಲಿಯೋನಿಲ್ಲಾ ಶ್ವೇತಾ ಡಿಸೋಜಾ) ಪ್ರತ್ಯಕ್ಷಳಾಗಿ ತನ್ನ ಸುತ್ತ ಸುತ್ತುವಂತಹ ಮೋಹಕ ನಗೆಯನ್ನು ಬೀರುತ್ತಾಳೆ.

ಕಾಲೇಜು ಅಂದಮೇಲೆ ತುಂಟಾಟ , ತರ್ಲೆ, ಕೀಟಲೆ , ಹೊಡೆದಾಟ ಮಾಮೂಲಿ. ಫಸ್ಟ್ ಬೆಂಚ್ ಸ್ಟೂಡೆಂಟ್ ಗಿಂತ ಲಾಸ್ಟ್ ಬೆಂಚ್ ಸ್ಟೂಡೆಂಟ್ ಹಾವಳಿ ಸ್ವಲ್ಪ ಜೋರೆ ಇರುತ್ತದೆ. ಇದರ ನಡುವೆ ನಾಯಕ ತನ್ನ ಪ್ರೀತಿಯನ ಪಡೆಯುವುದಕ್ಕೆ ಗೆಳೆಯರ ಸಹಾಯ ಪಡೆಯುತ್ತಾನೆ.

ಇದಕ್ಕೆ ಒಬ್ಬೊಬ್ಬರದು ಒಂದೊಂದು ಐಡಿಯಾ. ಹಾಗೂ ಹೀಗೂ ಇಬ್ಬರ ಮನಸ್ಸು ಒಂದಾಗುತ್ತಿದ್ದಂತೆ ಕಾಲೇಜಿನ ವಿದ್ಯಾಭ್ಯಾಸದ ಅವಧಿ ಮುಗಿಯತ್ತಿರುತ್ತದೆ. ನಾಯಕಿಗೆ ತನ್ನ ತಂದೆಯನ್ನ ಒಪ್ಪಿಸಿ ಅವರೊಟ್ಟಿಗೆ ಬರುವುದಾಗಿ ಹೇಳಿ ಬಸ್ಸಿನಲ್ಲಿ ತೆರಳುತ್ತಾಳೆ. ಮಾರ್ಗ ಮಧ್ಯೆ ಬಸ್ ಪ್ರಪಾತಕ್ಕೆ ಬಿದ್ದು ಹಲವರು ಸಾವು ನೋವುಗಳನ್ನು ಎದುರಿಸಬೇಕಾಗುತ್ತದೆ.

ಇದು ನಾಯಕನ ಬದುಕಿನಲ್ಲಿ ಬರ ಸಿಡಿಲು ಬಡಿದಂತಾಗಿ ದಿಕ್ಕು ತೋಚದಂತಾಗುತ್ತಾನೆ. ತನ್ನ ಗೆಳೆಯರೆಲ್ಲ ಒಂದೊಂದು ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಸೂರ್ಯ ತನ್ನ ಬದುಕಿನಲ್ಲಿ ಭೂಮಿ ಇಲ್ಲದ ಜೀವನ ನಶ್ವರ ಎಂಬಂತೆ ತನ್ನ ತಂದೆಯ ಬೈಕಿನ ಜೊತೆಯ ಒಡನಾಟ ನೆನಪಿಸಿಕೊಂಡು ತನ್ನ ಮೂಲ ಹವ್ಯಾಸ ಸ್ಥಿರ ಚಿತ್ರ ತೆಗೆಯುವ ಕಾಯಕದಲ್ಲಿರುವಾಗಲೇ ಸೂರ್ಯ ಎದುರು ಹೊಸ ಸಂಚಲನ ಮೂಡುತ್ತದೆ. ಅದೇನೆಂದು ತಿಳಿಯಬೇಕಾದರೆ ನೀವೆಲ್ಲರೂ ಒಮ್ಮೆ “ಖಾಸಗಿ ಪುಟಗಳು”ನ್ನು ಹೋಗಿ ನೋಡಲೇಬೇಕು.

ಯುವ ನಿರ್ದೇಶಕ ಸಂತೋಷ್ ಶ್ರೀಕಂಠಪ್ಪ ಒಂದು ನವಿರಾದ ಪ್ರೇಮ ಕಾವ್ಯವನ್ನು ಕಟ್ಟಿಕೊಡುವುದರಲ್ಲಿ ಗಮನ ಸೆಳೆದಿದ್ದಾರೆ. ಯುವ ಮನಸುಗಳ ತಲ್ಲಣ, ಗೆಳೆಯರ ಸಹಕಾರ, ಕಾಲೇಜಿನ ಪರಿಸರ, ತಂದೆ ಮಕ್ಕಳ ಭಾಂದವ್ಯವನ್ನು ಬಹಳ ನೈಜ್ಯವಾಗಿ ಸೆರೆ ಹಿಡಿದಿದ್ದಾರೆ.

ಆದರೆ ಚಿತ್ರದ ಓಟ ಮತ್ತಷ್ಟು ಬೇಗ ಮಾಡಬಹುದಿತ್ತು. ಒಂದು ಸುಂದರ ಪ್ರೇಮಮಯ ಚಿತ್ರಕ್ಕೆ ನಿರ್ಮಾಪಕರ ಸಹಕಾರ ನೀಡಿರುವುದು ಮೆಚ್ಚುವಂಥದ್ದು. ಇನ್ನು ಈ ಚಿತ್ರದಲ್ಲಿ ನಾಯಕನಾಗಿರುವ ವಿಶ್ವ ನೋಡಲು ಖಡಕ್ ಅನಿಸಿದರು, ಲವರ್ ಬಾಯ್ ಆಗಲು ಬಹಳ ಶ್ರಮಪಟ್ಟಿದ್ದಾರೆ. ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ.

ಇನ್ನು ನಾಯಕಿಯಾಗಿ ಅಭಿನಯಿಸಿರುವ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಮುದ್ದು ಮುದ್ದಾಗಿ ಪರದೆ ಮೇಲೆ ಕಾಣಿಸಿಕೊಂಡು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಗೆಳೆಯರಾಗಿ ಚೇತನ್ ದುರ್ಗಾ, ಶ್ರೀಧರ್ ಗಂಗಾವತಿ, ನಂದ ಗೋಪಾಲ್ ಗಮನ ಸೆಳೆಯುತ್ತಾರೆ. ಇನ್ನು ನಾಯಕನ ತಂದೆಯಾಗಿ ದಿನೇಶ್ ಮಂಗಳೂರು ನಾಯಕಿ ತಂದೆಯಾಗಿ ಪ್ರಶಾಂತ್ ನಟನ ಕೂಡ ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಉಪನ್ಯಾಸಕರಾಗಿ ಮೋಹನ್ ಜುನೇಜಾ, ನಿರೀಕ್ಷಾ ಶೆಟ್ಟಿ ಸೇರಿದಂತೆ ಉಳಿದ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ವಾಸುಕಿ ವೈಭವ್ ಸಂಗೀತ ಗುನುಗುವಂತೆ ಮೂಡಿದೆ. ಇನ್ನು ಛಾಯಾಗ್ರಾಹಕ ವಿಶ್ವಜಿತ್ ರಾವ್ ಕೆಲಸ ಅಚ್ಕಟ್ಟಾಗಿ ಮೂಡಿ ಬಂದಿದೆ. ಇನ್ನು ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ ಕೂಡ ಉತ್ತಮವಾಗಿದ್ದು, ಒಟ್ಟಾರೆ ಮನಮುಟ್ಟುವ ಒಂದು ಎಮೋಷನಲ್ ಚಿತ್ರವಾಗಿ ಖಾಸಗಿ ಪುಟ್ಟುಗಳು ಹೊರಬಂದಿದ್ದು, ಎಲ್ಲರೂ ಒಮ್ಮೆ ಹೋಗಿ ಚಿತ್ರವನ್ನು ನೋಡಬಹು

Related posts