Cinisuddi Fresh Cini News 

ರಾಕಿಭಾಯ್ ಎಂಟ್ರಿಗೆ ಮಹೂರ್ತ ಫಿಕ್ಸ್, ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

ಮೆ ಐ ಕಮೀನ್.. ಎನ್ನುತ್ತಲೇ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗಿದ್ದಾನೆ ರಾಕಿಭಾಯ್. ಹೌದು.. ಕೆಜಿಎಫ್ ಚಿತ್ರದ ಮೂಲಕ ವಿಶ್ವದಾದ್ಯಂತ ಗಮನ ಸೆಳೆದು ದಾಖಲೆಯ ಪುಟವನ್ನು ಸೇರಿದಂತಹ ರಾಂಕಿಂಗ್‍ಸ್ಟಾರ್ ಯಶ್ ಇಂದ ವಲ್ರ್ಡ್ ಸ್ಟಾರ್ ಆಗಿ ಮಿಂಚಿದ್ದಾರೆ.

ಈಗ ಇದೇ ದಸರಾ ಹಬ್ಬಕ್ಕೆ ಕೆಜಿಎಫ್ 2 ಸಿನಿಮಾ ಬೆಳ್ಳಿಪರದೆಗೆ ಅಪ್ಪಳಿಸಲು ಸನ್ನದ್ಧವಾಗಿದೆ. ಆರಂಭದಿಂದಲೂ ಕೆಜಿಎಫ್ 2 ಸಿನಿಮಾ ಸಖತ್ ಸೌಂಡ್ ಮಾಡುತ್ತಲೇ ಬರುತ್ತಿರುವುದರಿಂದ ಈ ಚಿತ್ರ ಬಿಡುಗಡೆಯಾಗುವ ವೇಳೆಯಲ್ಲಿ ಕಾಲಿವುಡ್, ಟಾಲಿವುಡ್, ಬಾಲಿವುಡ್ ಹಾಗೂ ಮಾಲಿವುಡ್‍ನ ಸ್ಟಾರ್ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ.

ಏಕೆಂದರೆ ಕೆಜಿಎಫ್ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಚಿತ್ರಗಳು ಮಕಾಡೆ ಮಲಗಿದ್ದವು, ಈಗ ಕೆಜಿಎಫ್ 2 ಚಿತ್ರ ಬಿಡುಗಡೆಯಾಗುವ ಸಮಯದಲ್ಲೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿದರೆ ಎಲ್ಲಿ ಹೊಡೆತ ಬೀಳುತ್ತದೆಯೋ ಎಂದು ಹೆದರುತ್ತಿದ್ದಾರೆ.

ಕೆಜಿಎಫ್ 2 ಚಿತ್ರವು ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಆ ಚಿತ್ರರಂಗಕ್ಕೆ ಒಗ್ಗಿಕೊಳ್ಳುವಂಥಹ ನಟರುಗಳನ್ನೇ ತಾರಾಗಣದಲ್ಲಿ ಹಾಕಿಕೊಂಡಿದ್ದಾರೆ.

ಹೊಂಬಾಳೆ ಫಿಲಂಸ್ ಮೂಲಕ ವಿಜಯ್‍ಕಿರಂಗದೂರು ನಿರ್ಮಾಣದ ಈ ಅದ್ಧೂರಿ ಚಿತ್ರವು ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ, ಅದಕ್ಕೆ ಪೂರಕವೆನ್ನುವಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ರೋಮಾಂಚನಕಾರಿಯಾಗಿ ಈ ಚಿತ್ರದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಹಲವರು ಇವೆ.

ಏಕೆಂದರೆ ರಾಕಿಂಗ್‍ಸ್ಟಾರ್ ಯಶ್‍ಗೆ ಜೋಡಿಯಾಗಿ ಶ್ರೀನಿಧಿ ಕಾಣಿಸಿಕೊಂಡರೆ, ಅಧೀರನಾಗಿ ಬಾಲಿವುಡ್‍ನ ಖ್ಯಾತ ನಟ ಸಂಜಯ್‍ದತ್ ಇದೇ ಮೊದಲ ಬಾರಿಗೆ ಚಂದನವನದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಉಪೇಂದ್ರ ಚಿತ್ರದಲ್ಲಿ ಮಸ್ತ್ ಮಸ್ತ್ ಬೆಡಗಿಯಾಗಿ ಕಾಣಿಸಿಕೊಂಡ ನಟಿ ರವೀನಾಟಂಡನ್ ಈ ಚಿತ್ರದಲ್ಲೂ ವಿಶೇಷ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ.

Share This With Your Friends

Related posts