Uncategorized 

‘ಕರ್ನಾಟಕ ಚಲನಚಿತ್ರ ಕಪ್’ ನಲ್ಲಿ ಅಂತರಾಷ್ಟ್ರೀಯ ಆಟಗಾರರು

ಸ್ಯಾಂಡಲ್ ವುಡ್ ನ ಕಲಾವಿದರು ಹಾಗೂ ತಂತ್ರಜ್ಞರು ಒಗ್ಗೂಡಿಕೊಂಡು ನಡೆಸಿದ “ಕರ್ನಾಟಕ ಚಲನಚಿತ್ರ ಕಪ್” ಮೊದಲನೇ ಆವೃತ್ತಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಈಗ ಎರಡನೇ ಆವೃತ್ತಿಗೆ ಚಾಲನೆ ಪಡೆದಿದ್ದು , ಈ ಬಾರಿ ಅಂತರಾಷ್ಟ್ರೀಯ ಆಟಗಾರರು ಸಾಥ್ ನೀಡಲಿದ್ದಾರೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ 6 ಮಂದಿ ದಿಗ್ಗಜರುಗಳಾದ ಭಾರತದ ವೀರೇಂದ್ರಸೆಹ್ವಾಗ್ , ಆಸ್ಟ್ರೇಲಿಯಾದ ಆಯ್ಯಡಂ ಗಿಲ್‍ಕ್ರಿಸ್ಟ್ , ಶ್ರೀಲಂಕಾದ ತಿಲಕರತ್ನೆ ದಿಲ್ಯಾನ್ , ದಕ್ಷಿಣಾ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್, ಹರ್ಷಲ್‍ಗಿಬ್ಸ್ ಮತ್ತು ಇಂಗ್ಲೇಂಡ್‍ನ ಓವೈಸ್‍ಷಾ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಮಾತನಾಡಿ ಕಳೆದ ಬಾರಿಯ ಕೆಸಿಸಿ ಲೀಗ್ ಯಶಸ್ವಿಯಾಗಿತ್ತು. ಇದನ್ನು ಮತ್ತೋಂದು ಹಂತಕ್ಕೆ ತೆಗೆದುಕೊಂಡು ಹೋಗಲು ದಿಗ್ಗಜ ಆಟಗಾರರ ಅವಶ್ಯಕತೆ ಇತ್ತು. ಅವರನ್ನು ಅಹ್ವಾನಿಸುವ ಬಗ್ಗೆ ಚಿಂತನೆ ನಡೆಸಿದಂತೆ, ಭೇಟಿ ಮಾಡಲಾಯಿತು. ಎಲ್ಲರೂ ಸಂತೋಷದಿಂದ ಒಪ್ಪಿಕೊಂಡರು. ಇತಿಹಾಸ ಸೃಷ್ಟಿಸುತ್ತೇವೆ ಎಂದು ಹೊರಟವರು ಇತಿಹಾಸ ಸೃಷ್ಟಿಸುವುದಿಲ್ಲ. ಹಾಗೆ ಸುಮ್ಮನೆ ಆರಂಭಿಸಿದ ತಂಡವು ಇಲ್ಲಿಯ ತನಕ ಬಂದಿದೆ. ಕೆಸಿಸಿ ಲೀಗ್‍ಗೆ ಶಿವರಾಜ್‍ಕುಮಾರ್, ಪುನೀತ್ , ಯಶ್ ಸೇರಿದಂತೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಉಪೇಂದ್ರ, ಗಣೇಶ್ ಸೇರಿಕೊಂಡಿರುವುದು ಖುಷಿ ಹೆಚ್ಚಾಗಿದೆ ಎಂದರು.

ನಂತರ ನಮಸ್ಕಾರ ಬೆಂಗಳೂರು ಅಂತ ಮಾತು ಶುರುಮಾಡಿದ ವೀರೇಂದ್ರ ಸೆಹ್ವಾಗ್ ಕನ್ನಡ ಚಿತ್ರರಂಗದ ಬಗ್ಗೆ ಕೇಳಿದ್ದೇನೆ. ಮನೆಯಲ್ಲಿ ಮಕ್ಕಳು ಸೌತ್ ಇಂಡಿಯನ್ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಕಲಾವಿದರೊಂದಿಗೆ ಆಡುವುದು ಹೊಸ ಅನುಭವ ಕೊಡುತ್ತದೆ. ಈ ಹಿಂದೆ ಬಾಲಿವುಡ್ ನಟರ ಜೊತಗೆ ಆಡಿದ್ದೆ. ಈಗ ಕೆಸಿಸಿ ಎಂದು ನಕ್ಕರು. ಗೋಷ್ಟಿಯಲ್ಲಿ ಲ್ಯಾನ್ಸ್. ಕ್ಲೂಸನರ್, ಹರ್ಷಲ್ ಗಿಬ್ಸ್, ಓವೈಸ್ ಷಾ ಮತ್ತು ತಿಲಕರತ್ನೆ ದಿಲ್ಷನ್ ಹಾಜರಿದ್ದರು.

ಸೆಪ್ಟಂಬರ್ 8ರಂದು ನಾಲ್ಕು ಪಂದ್ಯಗಳು , 9 ರಂದು ಎರಡು ಪಂದ್ಯಗಳು ಮತ್ತು ಫೈನಲ್ ಚಿನ್ನಿಸ್ವಾಮಿ ಸ್ಟೇಡಿಯಂದಲ್ಲಿ ಜರುಗಲಿದೆ. ಸದರಿ ಆಟವನ್ನು ನೇರಪ್ರಸಾರದಲ್ಲಿ ವೀಕ್ಷಸಬಹುದಾಗಿದೆ. ಈ ಎರಡನೇ ಆವೃತ್ತಿ ಬಹಳ ವಿಶೇಷವಾಗಿದ್ದು , ಚಿತ್ರಾಭಿಮಾನಿಗಳು ಹಾಗೂ ಕ್ರೀಡಾಭಿಮಾನಿಗಳನ್ನು ಸೆಳೆಯುವುದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ.

Related posts