Cinisuddi Fresh Cini News 

ಪಿ.ಆರ್.ಕೆ.ಪ್ರೋಡಕ್ಷನ್ಸ್ ಚೊಚ್ಚಲ ಚಿತ್ರ “ಕವಲುದಾರಿ” ಈ ವಾರ ತೆರೆಗೆ

ಪಿ.ಆರ್.ಕೆ.ಪ್ರೋಡಕ್ಷನ್ಸ್ ಲಾಂಛನದಡಿಯಲ್ಲಿಡಾ|| ರಾಜ್‍ಕುಮಾರ್ ಅರ್ಪಿಸಿ ಶ್ರೀಮತಿ ಅಶ್ವಿನಿ ಪುನೀತ್‍ರಾಜ್‍ಕುಮಾರ್ ನಿರ್ಮಿಸಿರುವ ಚೊಚ್ಚಲ ಕಾಣಿಕೆ“ಕವಲುದಾರಿ”ಇದೇ 12ರಂದು ರಾಜ್ಯಾದ್ಯಂತತೆರೆಕಾಣಲಿದೆ.

ಚಿತ್ರಕ್ಕೆಹೇಮಂತ್, ಗುಂಡು ಶೆಟ್ಟಿ ಸಂಭಾಷಣೆ, ಅದ್ವೈತಾಗುರುಮೂರ್ತಿ, ಛಾಯಾಗ್ರಹಣಚರಣ್‍ರಾಜ್ ಸಂಗೀತ, ಧನುಜಯರಂಜನ್, ಕಿರಣ್‍ಕಾವೇರಪ್ಪ ನಿರಂಜನ್, ಸಾಹಿತ್ಯ, ವರದರಾಜ್ ಕಲೆ, ಜಗದೀಶ್ ಸಂಕಲನವಿದ್ದು, 2017ರಲ್ಲಿ ತೆರೆಕಂಡಅನಂತನಾಗ್ ಅಭಿನಯಿಸಿದ “ಗೋಧಿ ಬಣ್ಣ ಸಾಧಾರಣ ಮೈಕಟ್ಟು”ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ ಹೇಮಂತ್‍ಚಿತ್ರದಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ತಾರಾಗಣದಲ್ಲಿಅನಂತನಾಗ್, ರಿಷಿ, ಸುಮನರಂಗನಾಥ್, ರೋಷಿನ್‍ಪ್ರಕಾಶ್, ಅಚ್ಯುತ್‍ಕುಮಾರ್ ಮುಂತಾದವರಿದ್ದಾರೆ.

Share This With Your Friends

Related posts